ಕಟ್ಟಡ ಕಾಮರ್ಿಕರಿಗೆ ಅಕ್ಷರ ಜ್ಞಾನ: ಅನೀಲ್ ಕುಮಾರ್
ಬಳ್ಳಾರಿ 02:ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಪ್ರಪ್ರಥಮವಾಗಿ ಅಕ್ಷರ ಜ್ಞಾನ ನೀಡುತ್ತಿರುವುದು ಸಂತೋಷದ ವಿಷಯ. ಕಟ್ಟಡ ಕಾಮರ್ಿಕರಿಗೆ ವೃತ್ತಿ ಕೌಶ್ಯಲ್ಯ ಜೊತೆಗೆ ಅಕ್ಷರ ಜ್ಞಾನ ಅವಶ್ಯಕತೆ ಇದೆ. ಇದರಿಂದ ಅವರಿಗೆ ತಿಳುವಳಿಕೆ ಮತ್ತು ಮಾಡುವ ಕೆಲಸದ ಬಗ್ಗೆ ಅರಿವು ಮೂಡುತ್ತದೆ ಎಂದು ನಿಮರ್ಿತಿ ಕೇಂದ್ರದ ಯೋಜನಾ ನಿದರ್ೇಶಕ ಅನಿಲ್ ಕುಮಾರ್ ಕುಲಕಣರ್ಿ ಅವರು ಹೇಳಿದರು.
ಬಳ್ಳಾರಿ ನಿಮರ್ಿತಿ ಕೇಂದ್ರ, ಜಿಲ್ಲಾ ಕಾಮರ್ಿಕ ಇಲಾಖೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ, ಡಾ.ಬಿ.ಆರ್. ಅಂಬೇಡ್ಕರ್ ಕಾಮರ್ಿಕ ಸಹಾಯ ಹಸ್ತ, ಶ್ರಮ ಸಾಮಥ್ರ್ಯ ಯೋಜನೆಯಡಿ ಟ್ರೈನಿಂಗ್-ಕಂ-ಟೂಲ್ ಕಿಟ್ ಅಂಗವಾಗಿ ವಾಲ್ಮೀಕಿ ಭವನದ ಹತ್ತಿರವಿರುವ ನಿಮರ್ಿತ ಕೇಂದ್ರದಲ್ಲಿ ಶುಕ್ರವಾರ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ 30 ದಿನಗಳ ವೃತ್ತಿ ಕೌಶ್ಯಲ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು ಅಕ್ಷರ ಜ್ಞಾನದಿಂದ ಕಟ್ಟಡ ಕಾಮರ್ಿಕರಿಗೆ ಕಲಿಕೆ ಭ್ಯಾಗ ಸಹ ಒದಗಿಸಿಕೊಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶ್ಯಲ ತರಬೇತಿ ಜೊತೆಗೆ ಅಕ್ಷರ ಜ್ಞಾನದಿಂದ ತಮ್ಮ ಸ್ವಂತ ಸ್ವಾಲಂಬನೆ ಜೀವನವನ್ನು ಬದಲಾವಣೆ ಮಾಡಿಕೊಂಡು ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಮೌನೇಶ್ ಬಡಿಗೇರ್ ಅವರು ಮಾತನಾಡಿ, ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ವೃತ್ತಿ ಕೌಶ್ಯಲ ಜೊತೆಗೆ ಅಕ್ಷರ ಜ್ಞಾನದಿಂದ ತಿಳುವಳಿಕೆ ಅಗತ್ಯ. ಅಕ್ಷರ ಜ್ಞಾನ ಕಾರ್ಯಕ್ರಮವನ್ನು ಕಟ್ಟಡ ಕಾಮರ್ಿಕರಿಗೆ ಹಮ್ಮಿಕೊಳ್ಳಲು ಮುತುವಜರ್ಿ ವಹಿಸಿದ ಬಳ್ಳಾರಿ ನಿಮರ್ಿತಿ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ಡಿ.ವಿ.ಮಂಜುಳ, ಜಿಲ್ಲಾ ಕಾಮರ್ಿಕ ಇಲಾಖೆ ಅಧಿಕಾರಿ ಚಂದ್ರಶೇಖರ್ ಎನ್.ಐಲಿ ಹಾಗೂ ಕಾಮರ್ಿಕ ನಿರೀಕ್ಷಕ ಎಂ.ರವಿದಾಸ್ ಜಿಲ್ಲಾ ಕಾಮರ್ಿಕ ಇಲಾಖೆ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ್ ಇವರಿಗೆ ಆಭಾರಿಯಾಗಿರುತ್ತೇನೆ ಎಂದರು. ಜಿಲ್ಲಾ ಕಾಮರ್ಿಕ ಇಲಾಖೆ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ್ ಅವರು ಸ್ವಾಗತಿಸಿ ವಂದಿಸಿದರು. ಈ ಸಂಧರ್ಭದಲ್ಲಿ ತಾಲ್ಲೂಕು ಸಂಯೋಜಕ ಶಿವಶಂಕರ್, ನಿಮರ್ಿತಿ ಕೇಂದ್ರದ ವ್ಯವಸ್ಥಾಪಕ ಮೀತಲ್ ರೆಡ್ಡಿ, ನಾಗರಾಜ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.