ಜಮಖಂಡಿ

ಬಸವ ಜಯಂತಿ ಆಚರಣೆ

ಬಸವ ಜಯಂತಿ ಆಚರಣೆ

ಲೋಕದರ್ಶನ ವರದಿ,

ಜಮಖಂಡಿ: 24: ನಗರದ ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾ ಆಡಳಿತ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ತಹಶೀಲ್ದಾರ ಸಭಾಭವನದಲ್ಲಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗರದ ಹೊರವಲಯದಲ್ಲಿರುವ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ತಾಲೂಕಾ ವೈಧ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಅಬಕಾರಿ ನಿರೀಕ್ಷಕ ಆದಿನಾಥ ನರಸಗೊಂಡ, ನ್ಯಾಯವಾದಿ ರವಿ ಯಡಹಳ್ಳಿ, ಕಾಡು ಮಾಳಿ, ಎಸ್.ವಾಯ್. ಬಿರಾದಾರ, ಸಮಾಜ ಕಲ್ಯಾಣಾಧಿಕಾರಿ ಗಡ್ಡದೇವರಮಠ, ಶಿರಸ್ತೆದಾರರಾದ ಬಸವರಾಜ ಸಿಂಧೂರ, ಪ್ರಕಾಶ ಕಟ್ಟಿಮನಿ, ಎಸ್.ಡಿ. ದಳವಾಯಿ, ಶಶಿಧರ ಚಲವಾದಿ, ಸಂತೋಷ ಬಾಡಗಿ, ಬಿ.ಡಿ. ತೇಲಿ, ಬಸವರಾಜ ಜಿಗಳೂರ ಇತರರು ಇದ್ದರು. 


ಸುದ್ದಿ ಓದಿ