ವ್ಯಂಗ್ಯಚಿತ್ರಗಳ ಕಾಯರ್ಾಗಾರ
ಬಳ್ಳಾರಿ 01:ವ್ಯಂಗ್ಯಚಿತ್ರದಲ್ಲಿಯೂ ಕುಶಲತೆ ಇದೆ ಎಂದು ತಿಳಿಸುತ್ತ ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್ ಕಾಯರ್ಾಗಾರ, ಈಗ ಕನ್ನಡ ವಿಶ್ವವಿದ್ಯಾಲಯದಲ್ಲಿ ವ್ಯಂಗ್ಯಚಿತ್ರ ಕಾಯರ್ಾಗಾರವನ್ನು ಕನರ್ಾಟಕ ವಿವಿಧ ಜಿಲ್ಲಾವಾರು ಕಲಾಶಾಲೆಯ ಚಿತ್ರಕಲಾ ವಿದ್ಯಾಥರ್ಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕನರ್ಾಟಕ ಲಲಿತಕಲಾ ಅಕಾಡೆಮಿಯ ಕುಲಸಚಿವರಾದ ಶ್ರೀಮತಿ ಇಂದ್ರಮ್ಮ ಹೆಚ್.ವಿ. ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ಕನರ್ಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ 30.11.2018 ರಿಂದ 1.12.2018ರ ವರೆಗೆ 2 ದಿನಗಳ ಕಾಲ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಕಾಯರ್ಾಗಾರವನ್ನು ಶ್ರೀಮತಿ ಇಂದ್ರಮ್ಮ ಹೆಚ್.ವಿ. ಅವರು ವ್ಯಂಗ್ಯಚಿತ್ರ ಬಿಡಿಸುವ ಮೂಲಕ ಕಾಯರ್ಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವವಿದ್ಯಾಲಯದ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿದರ್ೇಶಕರಾದ ಡಾ.ಮಲ್ಲಿಕಾಜರ್ುನ ವಣೇನೂರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಚಿತ್ರಕಲೆಯು ಭಾಷೆಯನ್ನೂ ಮೀರಿದ ಅಭಿವ್ಯಕ್ತಿಯಾಗಿದೆ ಎಂದರು.
ಕಾಯರ್ಾಗಾರದ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಶ್ರೀ ಚಂದ್ರಶೇಖರ ವಿ.ಆರ್. ಅವರು ಮಾತನಾಡುತ್ತ ಮೊದಲು ವ್ಯಂಗ್ಯಚಿತ್ರವನ್ನು ಹೇಳಿಕೊಡುವ ಶಾಲೆ ಇರಲಿಲ್ಲ. ಆರ್.ಕೆ.ಲಕ್ಷ್ಮಣ್, ಮೂತರ್ಿ, ಎಫ್.ಟಿ.ಆಚಾರ್ ಹೀಗೆ ಅನೇಕರು ಸ್ವತಂತ್ರವಾಗಿ ಕಲಿತಿದ್ದಾರೆ. 1977ರಲ್ಲಿ ವ್ಯಂಗ್ಯಚಿತ್ರ ಕಲಾವಿದರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಲಲಿತಕಲಾ ನಿಕಾಯದ ಡೀನರಾದ ಡಾ.ಅಶೋಕಕುಮಾರ ರಂಜೇರೆ ಅವರು ಪ್ರಾಸ್ತಾವಿಕ ನುಡಿಯುತ್ತ ಒಂದು ದೀರ್ಘ ಲೇಖನ ಅಥವಾ ಇಡೀ ಒಂದು ಪುಸ್ತಕದ ಆಶಯಗಳನ್ನು ಒಂದು ವ್ಯಂಗ್ಯಚಿತ್ರದ ಮೂಲಕ ಕಲಾವಿದರು ಕಟ್ಟಿಕೊಡುತ್ತಾರೆ. ಅಭಿವ್ಯಕ್ತಿ ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರಕಲೆಯು ಒಂದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರು ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದಲೂ ಚಿತ್ರಕಲೆ, ಶಿಲ್ಪಕಲೆ, ಕಾಯರ್ಾಗಾರಗಳನ್ನು ನಡೆಸುತ್ತಾ ಬಂದಿದೆ. ಈಗ ವಿದ್ಯಾಥರ್ಿಗಳಿಗಾಗಿ ವ್ಯಂಗ್ಯಚಿತ್ರ ಕಾಯರ್ಾಗಾರವನ್ನು ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಕಾಲೀನ ಜಗತ್ತಿಗೆ ವ್ಯಂಗ್ಯಚಿತ್ರ ಕಲಾವಿದರ ಕೊಡುಗೆ ಅಪಾರವಾಗಿದೆ. ಕಾಲಗತಿಯಲ್ಲಿ ನಡೆದ ಘಟನೆಗಳನ್ನು ವ್ಯಂಗ್ಯಚಿತ್ರದ ಮೂಲಕ ಅಭಿವ್ಯಕ್ತಿಸುವುದು ಬಹಳ ದೊಡ್ಡ ಕಲಾಮಾಧ್ಯಮವಾಗಿದೆ. ವ್ಯಂಗ್ಯ ಚಿತ್ರ ಕಲಾವಿದರು ಸಮಾಜವಿಜ್ಞಾನಿಗಳು, ಮನಃಶಾಸ್ತ್ರ ವಿಜ್ಞಾನಿಗಳು, ಹೃದಯವಂತ ಮನಸ್ಸಿನ ವ್ಯಕ್ತಿಗಳು ಆಗಿರುತ್ತಾರೆ. ಏಕಕಾಲದಲ್ಲಿ ಸಾರ್ವತ್ರಿಕ ಪ್ರಚಲಿತ ಸಂಗತಿಗಳನ್ನು ಹಾಗೂ ಭೂತಕಾಲದ ಸಂಗತಿಗಳನ್ನು ಸ್ಪಷ್ಟವಾಗಿ ಹೇಳಲು ಆಗದೇ ಹೋಗಬಹುದು. ಇದೆಲ್ಲವನ್ನೂ ವ್ಯಂಗ್ಯಚಿತ್ರ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಹೇಳಬಹುದು. ಗೆರೆಗಳ ಮೂಲಕ ವ್ಯಂಗ್ಯಚಿತ್ರಗಳು ಅನೇಕ ಅರ್ಥಗಳನ್ನು ಹೇಳುತ್ತವೆ. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಬೌದ್ಧಿಕತೆಯ ಸದುಪಯೋಗವನ್ನು ವಿದ್ಯಾಥರ್ಿಗಳು ಪಡೆಯಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುಜ್ಜಾರಪ್ಪ ಬಿ.ಜಿ., ಶ್ರೀ ಬಾಬು ಜತ್ತಕರ್, ಶ್ರೀ ನಾಗನಾಥ್ ಜಿ.ಎಸ್. ಉಪಸ್ಥಿತರಿದ್ದರು. ಸಂಗೀತ ವಿಭಾಗದ ಕು. ಶರಣಮ್ಮ ಪ್ರಾಥರ್ಿಸಿದರು. ದೃಶ್ಯಕಲಾ ವಿಭಾಗದ ವಿದ್ಯಾಥರ್ಿನಿ ಕು. ನಯನ ನಿರೂಪಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕರಾದ ಡಾ.ಶಿವಾನಂದ ಬಂಟನೂರ ಸ್ವಾಗತಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕರು ಹಾಗೂ ಕಾಯರ್ಾಗಾರದ ಸಂಚಾಲಕರಾದ ಡಾ.ಮೋಹನರಾವ್ ಬಿ. ಪಂಚಾಳ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಚಿತ್ರಕಲಾ ಶಾಲೆಯ ವಿದ್ಯಾಥರ್ಿಗಳು, ಡಾ.ಡಿ.ಪಾಂಡುರಂಗಬಾಬು, ಡಾ.ಪಿ. ಮಹಾದೇವಯ್ಯ, ಡಾ.ಸಾಂಬಮೂತರ್ಿ, ಡಾ.ಶಿವಾನಂದ ವಿರಕ್ತಮಠ, ಡಾ.ಡಿ.ಮೀನಾಕ್ಷಿ, ಡಾ.ಎ.ವೆಂಕಟೇಶ, ಶ್ರೀ ಕೆ.ಕೆ. ಮಕಾಳಿ ಮೊದಲಾದವರು ಉಪಸ್ಥಿತರಿದ್ದರು.