ಸಮರ್ಪಕ ಬಸ್ ಸೇವೆಗೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳ ಬಸ್ ತಡೆ ಪ್ರತಿಭಟನೆ
ಲೋಕದರ್ಶನ ವರದಿ
ಯರಗಟ್ಟಿ 18: ಪಟ್ಟಣದ ಬಸ್ಸ್ ನಿಲ್ದಾಣದಲ್ಲಿ ಇಂದು ಗುರುವಾರ ಮುಂಜಾನೆ ಇಟ್ನಾಳ-ಸತ್ತಿಗೇರಿ ಕಾಲೇಜು ವಿದ್ಯಾರ್ಥಿಗಳು ಎಲ್ಲ ಬಸ್ಗಳನ್ನು ತಡೆಹಿಡಿದು ಪ್ರತಿಭಟನೆ ಮಾಡಿದರು.
ವಿವರನೆ : ಪ್ರತಿನಿತ್ಯ ಇಟ್ನಾ-ಸತ್ತಿಗೇರಿ ಗಾಮಗಳಿಂದ ಸತ್ತಿಗೇರಿ ಮತ್ತು ಯರಗಟ್ಟಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಅವರಿಗೆ ಕಾಲೇಜು ವೇಳೆಗೆ, ಪರೀಕ್ಷೆಗಳು ಮತ್ತು ಪ್ರ್ಯಾಕ್ಟಿಕಲಗಳು ಇದ್ದಾಗ ಸಮರ್ಪಕವಾಗಿ ಬಸ್ಸ್ ಸೌಲಭ್ಯವಿಲ್ಲದ ಕಾರಣ ಹಲವಾರು ಬಾರಿ ಸ್ಥಳಿಯ ಮತ್ತು ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಮತ್ತು ಪ್ರತಿಭಟನೆ ಬಗ್ಗೆ ಹೇಳಿದರೂ, ಪತ್ರಿಕೆಯವರ ಮೂಲಕ ತಿಳಿಸಿದರೂ ಸ್ಪಂದಿಸದ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಸ್ಥಳಕ್ಕೆ ಪೋಲಿಸ ಅಧಿಕಾರಿಗಳೂ ಬಂದು ತಿಳಿಹೇಳಿದರೂ ಕೇಳದೆ ಡಿಪೋ ವ್ಯವಸ್ಥಾಪಕರು ಬಂದು ಇದರ ಬಗ್ಗೆ ಪರಿಹಾರದ ಭರವಸೆ ಕೊಡಬೇಕು ಎಂದು ಹಠ ಹಿಡಿದರು. ಎರಡು ದಿನದಲ್ಲಿ ಸೂಕ್ತ ಬಸ್ಸಿನ ವ್ಯವಸ್ಥೆ ಮಾಡುತ್ತೇನೆ ಎಂದಾಗ ಪ್ರತಿಭಟನೆ ಹಿಂದೆ ಪಡೆದರು. ಬಸ್ಸಿನಲ್ಲಿ ಇದ್ದ ಪ್ರಯಾಣಿಕರು 2-3 ಗಂಟೆ ಪರದಾಡುವಂತಾಯಿತು