ರುದ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

ರುದ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

ಲೋಕದರ್ಶನ ವರದಿ

ಬಳ್ಳಾರಿ25: ನಗರದ ಹೃದಯಭಾಗದಲ್ಲಿರುವ ಗಾಂಧಿಭವನದಲ್ಲಿ ರುದ್ರ ವೆಲ್ಫೇರ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತು. ರುದ್ರ ಟ್ರಸ್ಟಿನ ಅಧ್ಯಕ್ಷರಾದ ದಿವ್ಯಚೇತನ ಬಿ .ಯಂ .ರವಿಶಂಕರ್ ಗುರುಗಳ ಆಶೀವರ್ಾದದಿಂದ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಆಯೋಜಿಸಿದ ಈ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಮತ್ತು ರುದ್ರ ಟ್ರಸ್ಟಿನ ಸ್ವಯಂ ಸೇವಕರು ರಕ್ತದಾನ ಮಾಡಿದರು . ಈ ಕಾರ್ಯಕ್ರಮಕ್ಕೆ ಬ್ರೂಸ್ಪೇಟ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ನಿರಂಜನ್ , ಗಾಂಧಿನಗರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಆರ್.ನಾಗರಾಜ್ , ಕನ್ನಡ ಸಾಹಿತ್ಯ ಪರಿಷತ್ ನಿಷ್ಠಿ ರುದ್ರಪ್ಪ ಗಾಂಧಿ ಭವನ್ ಸಂಚಾಲಕರಾದ ವಿಠ್ಠಲ್ ಸಮಾಜ ಸೇವಕರು ಬಿಸಿಲ ಹಳ್ಳಿ ಬಸವರಾಜ್ ಜಿಲ್ಲಾ ಆಸ್ಪತ್ರೆ ವೈದ್ಯರಾದ ಡಾಕ್ಟರ್ಗಿರೀಶ್ ಉಪ ವ್ಯವಸ್ಥಾಪಕರು ಕೆ ಎಂ ಫ್ ಜೆ.ಕೆ.ಎರರ್ಿಸ್ವಾಮಿ ರುದ್ರ ಟ್ರಸ್ಟ್ ಬಳ್ಳಾರಿ ಕಾರ್ಯದಶರ್ಿಗಳಾದ ಮಂಜುನಾಥ್ ಈ ಎಲ್ಲ ಗಣ್ಯರು ಆಗಮಿಸಿ ರಕ್ತದಾನದ ಮಹತ್ವವನ್ನು ತಿಳಿಸಿ ರಕ್ತದಾನಿಗಳನ್ನು ಅಭಿನಂದಿಸಿದರು ರುದ್ರ ಟ್ರಸ್ಟ್ ನ ಬಿ.ಮಂಜುನಾಥ್ ಮಾತನಾಡುತ್ತ ರುದ್ರ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಈ ರಕ್ತದಾನ ಶಿಬಿರವು ಆಕಸ್ಮಿಕವಾಗಿ ಅಪಘಾತಕ್ಕೀಡಾಗಿರುವವರಿಗೆ ಅನಾರೋಗ್ಯ ಪೀಡಿತರಿಗೆ ಮತ್ತು ಅವಶ್ಯಕತೆಯುಳ್ಳ ಮಹಿಳೆಯರಿಗೆ ನೆರವಾಗಲು ಸಹಕಾರಿಯಾಗಬೇಕೆಂದು ಏರ್ಪಡಿಸಲಾಗಿದೆ ಎಂದು ಹೇಳಿದರು. ಮತ್ತು ನಮ್ಮ ರುದ್ರ ಟ್ರಸ್ಟ್ ನ ವತಿಯಿಂದ ನಿತ್ಯವೂ ಹಸಿದವರಿಗೆ ಅನ್ನದಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ .ಅದೇ ರೀತಿ ಮುಂದಿನ ದಿನಗಳಲ್ಲಿ ವಿದ್ಯಾದಾನ , ಸಸಿ ನೆಡುವ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನೇಕ ಜನಕ್ಕೆ ನೆರವಾಗಲು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು .

ಸುದ್ದಿ ಓದಿ