ಕೇದಾರ ಶ್ರೀಗಳ ಆಶೀರ್ವಚನ ಧರ್ಮ ಪರಂಪರೆಯನ್ನು ಬಿಟ್ಟರೇ ಸೃಷ್ಟಿಯೇ ನಿಂತುಹೋಗುತ್ತದೆ
ಬಳ್ಳಾರಿ11:ವಿಜ್ಞಾನ ಎಷ್ಟೇ ಬೆಳೆದರೂ ಪಂಚ ಭೂತಗಳಲ್ಲಿನ ಮೂಲ ಬಿಟ್ಟು ಕೊಡುವುದಿಲ್ಲ. ಅದರಂತೆ ಧರ್ಮ ಪರಂಪರೆಯು ಸಹ ತನ್ನ ಮೂಲ ಪರಂಪರೆಯನ್ನು ಬಿಟ್ಟರೇ ಸೃಷ್ಟಿಯೇ ನಿಂತು ಹೋಗುತ್ತದೆ. ಧರ್ಮ ಪರಂಪರೆ ಒಮ್ಮೆ ನೆಲಕ್ಕೆ ಬಿದ್ದರೆ ಮತ್ತೆ ಮೇಲೇಳಲು ಸಾದ್ಯವಿಲ್ಲ. ಈಗಾಗಿ ಸಮೂದಾಯದ ಜನತೆ ಧರ್ಮ ಪರಂಪರೆಯನ್ನು ಬೀಳಲು ಬಿಡದಂತೆ ನೋಡಿಕೊಳ್ಳಬೇಕೆಂದು ಕೇದಾರನಾಥ ಪೀಠದ ಜಗದ್ಗೂರು ಭೀಮಾಶಂಕರ ಶಿವಚಾರ್ಯ ಸ್ವಾಮಿಜೀ ಹೇಳಿದರು. ಅವರು ನಗರದ ಬಸವಭವನದಲ್ಲಿ ಜಗದ್ಗೂರುಗಳ ಪೂಜಾಸೇವಾ ಸಮಿತಿಯಿಂದ ಅಯೋಜಿಸಿದ್ದ ಧರ್ಮ ಪರಂಪರೆ ರಕ್ಷಣೆ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿದರು.
ಪ್ರಕೃತಿಯಲ್ಲಿನ ಪಂಚಭೂತಗಳು ತಮ್ಮ ಮೂಲತನವನ್ನು ಬಿಟ್ಟುಕೊಟ್ಟರೆ ಸೃಷ್ಟಿ ನಾಶವಾಗುತ್ತದೆ. ಪಂಚಭೂತಗಳು ಗಂದತ್ವ, ಜಲ, ಶೀತತ್ವ, ಅಘ್ನಿ, ದಾಂಪತ್ಯ, ಸೂರ್ಯ, ಉಷ್ಣತೆ, ವಾಯು, ಚಂಚಲ, ಆಕಾಶ ವಿಶಾಲತ್ವವನ್ನು ಬಿಟ್ಟರೆ ಸೃಷ್ಟಿ ಇರಲು ಸಾದ್ಯವೇ. ಅದಕ್ಕಾಗಿ ಧರ್ಮ ಪರಂಪರೆಯನ್ನು ಸದಾ ಉಳಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಪರಂಪರೆ ಸಭೆ ನಡೆಸಲಾಗುತ್ತಿದೆ. ಈಗಾಗಲೇ ದಾವಣಗೇರಿಯಲ್ಲಿ 25 ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ. ಕಳೆದ ಡಿ. 25ರಿಂದ ಜ.01ರವರೆಗೆ ತುಮಕೂರು, ಜ.01ರಿಂದ 10ರವರೆಗೆ ಬೆಂಗಳೂರಿನಲ್ಲಿ ಧರ್ಮ ಪರಂಪರೆ ನಡೆಸಿ ಬರುವ ಫೆಬ್ರುವರೆಯಲ್ಲಿ ಮಹಾರಾಷ್ಟ್ರ, ಕನರ್ಾಟಕ ಎರಡು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬೀದರ್ ಜಿಲ್ಲೆಯಲ್ಲಿ ಕೊನೆಗೊಳಿಸಿ ಅಲ್ಲಿಂದ ಕೇದಾರಕ್ಕೆ ತೆರಳಲಾಗುವುದು ಎಂದು ತಿಳಿಸಿದರು. ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಘಕ್ಕೆ ನಮ್ಮದು ಕೊಡುಗೆ ಇದೆ ಎಂದು ಸ್ವಾಮಿಜೀ ಹೇಳಿದರು. 1932ರಲ್ಲಿ ಸಂಘಕ್ಕೆ ಮೊದಲು 6000ರೂ ದೇಣಿಗೆ ನೀಡಿದ್ದು ಕೇದಾರ ಪೀಠ ನಂತರ ಉಜ್ಜಯನಿ ಪೀಠ 5000ರೂ ದೇಣಿಗೆ ನೀಡಿದೆ.
ಈ ಸಂದರ್ಭದಲ್ಲಿ ಹರಗಿನಡೋಣಿ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜೀ, ಚಿದಾನಂದ ತಾತಾ, ಕೊಟ್ಟುರಿನ ಕಟ್ಟೆಮನೆ ಹಿರೇಮಠ ಸ್ವಾಮಿಜೀ, ನಾಲ್ವಡಿ ಶಿವಶಾಂತ ವೀರಸ್ವಾಮಿಜೀ, ಹೆಬ್ಬಾಳದ ನಾಗಭೂಷಣ ಶಿವಚಾರ್ಯ ಸ್ವಾಮಿಜೀ, ಅಜಾಂತಮಹಾಲಿಂಗ ಸ್ವಾಮಿಜೀ, ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ರೂಪಿಸಿದರು. ಇದೇ ವೇಳೆ ಖ್ಯಾತ ಇತಿಹಾಸ ತಜ್ಞ, ಜಾನಪದ ಪರಿಷತ್ನ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ ಮತ್ತು ಅವರ ಕುಟುಂಬದವರಿಂದ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸೋಮಣ್ಣ, ರಾಜಶೇಖರ, ವೀರುಪಾಕ್ಷಯ್ಯ, ಪಲ್ಲೆದ ಪಂಪಾಪತಿ, ಕೇದಾರನಾಥ ಸ್ವಾಮಿ, ಕುರುಗೋಡಿನ ಬಸವರಾಜಸ್ವಾಮಿ, ಮೃತ್ಯುಂಜಯ್ಯಸ್ವಾಮಿ, ಕಣ್ವಿ ರಾಜಶೇಖರ ಸೇರಿದಂತೆ ಸಾವಿರಾರು ಜನ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಬಾಜಿನರಾಗಿದ್ದರು.