ಮನಸೂರೆಗೊಂಡ ಹಿಂದೂಸ್ತಾನಿ ಸಂಗೀತ
ಬಳ್ಳಾರಿ 08:ನಗರದ ಭುವನ ಸಂಗೀತ ವಿದ್ಯಾಲಯ ಸತ್ಯನಾರಾಯಣಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿದ್ದ ಈ ಕಾರ್ಯಕ್ರಮ, ಶ್ರೀ ಗುರುಶ್ರೀಶ ವಿಠಲದಾಸರ ಆರಾಧನಾ ನಿಮಿತ್ತ ನಡೆಯಿತು. ಬೆಂಗಳೂರಿನ ಯುವ ಕಲಾವಿದೆ ಕುಮಾರಿ ಹಿರಣ್ಮಯಿ ಎಸ್. ತಮ್ಮ ಮಧುರ ಕಂಠದ ಮೋಡಿಯಿಂದ ವೈಶಿಷ್ಟ್ಯಪೂರ್ಣವಾದ ಗಾಯನ ವೈಖರಿಯಿಂದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದರಲ್ಲದೇ, ತಲೆದೂಗುವಂತೆ ರಂಜಿಸಿದರು. ಪೂರಿಯ ಕಲ್ಯಾಣ ರಾಗದಲ್ಲಿ ಖ್ಯಾಲ್ ಗಾಯನದ ನಂತರ ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ಕಲಿಯುಗದೊಳು ಹರಿನಾಮವ - ಬಾಗೇಶ್ರೀ, ಬಾರೆ ಭಾಗ್ಯದ ನಿಧಿಯೇ ಯಮನ್, ಶ್ರೀ ರಾಮಾ ನಿನ್ನ ಪಾದವ ತೋರೋಮಾಲಕಂಸ್, ಸೇರಿದೆನೊ ಸೇರಿದೆನೊ - ಭೀಮ್ಪಲಾಸ್, ತೊರೆದು ಜೀವಿಸಬಹುದೇ ಕೀವರ್ಾಣಿ, ನಾರಾಯಣ ನಟಭೈರವ ಹಾಗೂ ಭವಾನಿ ದಯಾನೀ-ಭೈರವಿ ಮುಂತಾದ ರಾಗಗಳಲ್ಲಿ ಗಾಯನಗೈದು ಶ್ರೋತೃಗಳ ಮನಸೂರೆಗೊಂಡರು. ಬ್ರಹ್ಮಣ್ಯತೀಥರ್ಾಚಾರ್, ಧಮರ್ಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ನುಡಿಗಳನ್ನಾಡಿದರು. ಪ್ರಸನ್ನಾಚಾರ್ ಹಾಗೂ ಡಾ. ವಿ.ಕೆ.ಜಹಗೀರದಾರ್ ವೇದಿಕೆಯಲ್ಲಿದ್ದರು. ಕುಮಾರಿ ಹಿರಣ್ಮಯಿ ಆವರಿಗೆ ಹಾಮರ್ೊನಿಯಂನಲ್ಲಿ ಶ್ರೀ ದೊಡ್ಡಯ್ಯ ಗವಾಯಿಗಳು ಹಾಗೂ ತಬಲಾದಲ್ಲಿ ಯುವ ಕಲಾವಿದ ಶ್ರೀದತ್ತ, ಎಂ.ಜಿ.ಸಮರ್ಥವಾಗಿ ಸಾಥ್ ನೀಡಿದರೆ, ಅನಿಲ್ ಶಾಖಾಪೂರ್ ತಾಳ ಸಾಥ್ ನೀಡಿದರು. ಡಾ|| ಶಾಂತಾ ಸೀತಾರಾಮ್, ಡಾ. ನಾರಾಯಣಾಚಾರ್ಯ, ಕೆ.ಎಸ್.ಸತ್ಯನಾರಾಯಣ, ಪ್ರಾಣೇಶ್ರಾವ್, ಹೆಚ್.ಎಂ.ಹನುಮಂತಪ್ಪ, ರಜನೀಶ ಕುಲಕಣರ್ೀ, ಎಂ.ಎಸ್.ಬಹದ್ದರೂರ್, ಶ್ರೀಮತಿ ಕೃಷ್ಣಾಬಾಯಿ, ಅಪರಂಜಿ, ಶ್ರೀಮತಿ ನಾಗವೇಣಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಟಿ.ಗುರುರಾಜಾಚಾರ್ ಜಹಗಿರ್ದಾರ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.