ಇಂದು ಬಳ್ಳಾರಿ ಲೋಕಸಭಾ ಉಪಚುನಾವಣೆ
ಲೋಕದರ್ಶನ ವರದಿ
ಬಳ್ಳಾರಿ02: ಜಿಲ್ಲೆಯ ಲೋಕಸಭಾ ಉಪಚುನಾವಣೆ ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿದ್ದು ಇದಕ್ಕಾಗಿ ಕ್ಷೇತ್ರ ವ್ಯಾಪ್ತಿಯ 1901 ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸೂಂಡೂರು, ಕಂಪ್ಲಿ, ವಿಜಯನಗರ, ಹಗರಿಬೊಮ್ಮನಹಳ್ಳಿ, ಕೂಡ್ಲಿಗೆ ಮತ್ತು ಹೂವಿನಹಡಗಲಿ, ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8ಲಕ್ಷ 55 ಸಾವಿರದ 194 ಪುರುಷರು ಮತ್ತು 8 ಲಕ್ಷದ 57 ಸಾವಿರದ 944 ಮಹಿಳೆಯರು, ಸೇರಿದಂತೆ ಒಟ್ಟು 17 ಲಕ್ಷದ 13 ಸಾವಿರದ 154 ಮತದಾರರಿದ್ದಾರೆ. ಮತದಾರರಿಗೆ ಜಿಲ್ಲಾಡಳಿತ ಓಟರ್ಸ್ ಚೀಟೆ ವಿತರಿಸಿದೆ. ಚುನಾವಣಾ ಅಯೋಗದ ಗುರುತಿನ ಚೀಟಿ(ಎಫಿಕ್ ಕಾರ್ಡ) ಇಲ್ಲವೇ ರೇಷನ್ಕಾರ್ಡ, ಆಧಾರಕಾರ್ಡ, ನೆರೆಗಾಕಾರ್ಡ, ಬ್ಯಾಂಕ್ ಪಾಸ್ಬುಕ್, ಡ್ರೈವಿಂಗ ಲೈಸೆನ್ಸ್ ಸೇರಿದಂತೆ 12 ದಾಖಲೆಗಳಲ್ಲಿ ಒಂದನ್ನು ಪ್ರಸ್ತುತ ಪಡಿಸಿ ಮತದಾನ ಮಾಡಬಹುದಾಗಿದೆ.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ ಮತ್ತು ಸೆಂಟ್ಜೊನ್ ಹೈಸ್ಕೂಲ್ ಮೈದಾನದಲ್ಲಿ ಬಳ್ಳಾರಿ ನಗರ ಗ್ರಾಮೀಣ ಕ್ಷೇತ್ರದ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ ಮತದಾನಕ್ಕೆ ಅಗತ್ಯವಾದ ಮತಯಂತ್ರ, ವಿ.ವಿಟ್ಯಾಪ್, ಇಂಕ್ (ಶ್ಯಾಹಿ) ಮೊದಲಾದ ಸಾಮಾಗ್ರಿಗಳನ್ನು ಮತಗಟ್ಟೆಗೆ ನೇಮಕ ಮಾಡಿದ ಸಿಬ್ಬಂದಿಗೆ ವಿತರಿಸುವ ಕಾರ್ಯ ನಡೆಯಿತು. ಅವುಗಳನ್ನು ತೆಗೆದುಕೊಂಡು ಸಿಬ್ಬಂದಿ ಬಸ್, ಜೀಪು ಮೊದಲಾದ ವಾಹನಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು. ಸಂಜೆಯ ಹೊಳಗಡೆ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 418 ಮತಗಟ್ಟೆಗಳನ್ನು ಸೂಕ್ಮ ಮತ್ತು ಅತೀ ಸೂಕ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಅವುಗಳಿಗೆ ಪ್ಯಾರಾ ಮಿಲಿಟರಿ ಪಡೆ, ನಿಯೋಜೆನೆ ಸೇರಿದಂತೆ ವಿಶೆಷ ಭದ್ರತೆ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 16 ಸಾವಿರದ 5 ನೂರು ವಿಕಲಚೇತನ ಮತದಾರರಿದ್ದು.
ಅವರು ಮತಚಲಾಯಿಸಲು ಪ್ರತಿ ಗ್ರಾಮಪಂಚಾಯಿತಿಗೆ ಒಂದು ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಚುನಾವಣಾ ನಿಮಿತ್ಯ ಎಲ್ಲಾ ಶಾಲಾ ಕಾಲೇಜಿಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಲಾಗಿದೆ. ಶನಿವಾರ ಮತದಾನ ಆರಂಭವಾಗುವ ಮುನ್ನ ಮಾಕ್ ಪೋಲಿಸ್ ಮತಗಟ್ಟೆಯ ಏಜೆಂಟರ ಸಮ್ಮೂಖದಲ್ಲಿ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ.
ಮತಗಟ್ಟೆಯ ಚುನಾವಣಾಧಿಕಾರಿ, ಸಹಾಯಕ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ಒಟ್ಟು 10ಸಾವಿರದ 450 ಸಿಬ್ಬಂದಿಯನ್ನು ನೇಮಕ ಮಾಡಿದೆ.
ಚುನಾವಣಾ ಕಾರ್ಯಕ್ಕೆ 333 ಬಸ್ ಗಳು, 98 ಮಿನಿ ಬಸ್ಗಳು ಹಾಗೂ 75 ಟ್ರ್ಯಾಕ್ಸ್ಗಳನ್ನು ಬಳಸಿಕೊಳ್ಳಲಾಗಿದೆ. ಲೋಕಸಭಾ ಉಪಚುನಾವಣೆ ಘೊಷಣೆಯಾದ ದಿನದಿಂದ ಶುಕ್ರವಾರದವರೆಗೆ ದಾಖಲೆ ಇಲ್ಲದೇ ಹಣ ತೆಗೆದುಕೊಂಡು ಹೋಗುತ್ತಿದ್ದ 31 ಲಕ್ಷದ 64 ಸಾವಿರದ 360 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೊತೆಗೆ 13,44,522 ಲೀಟರ್ ಮದ್ಯ ಮತ್ತು 79 ಲಕ್ಷ ರೂಗಳ ಅಕ್ರಮ ವಸ್ತುಗಳನ್ನು ಇದುವರೆಗೆ ವಶಪಡಿಕೊಳ್ಳಲಾಗಿದೆ.