ಬಳ್ಳಾರಿ: ಬಿ.ಎಲ್.ಓಗಳಿಗೆ ಮತದಾನ ಜಾಗೃತಿ
ಲೋಕದರ್ಶನ ವರದಿ
ಬಳ್ಳಾರಿ 20: ಚುನಾವಣಾ ಜಾಗೃತಿ ಸಂಘಗಳ ಕುರಿತಾಗಿ ಬಿ.ಎಲ್.ಓ.ಗಳಿಗೆ ಒಂದು ದಿನದ ತರಬೇತಿಯನ್ನು ಬಳ್ಳಾರಿ ತಾಲ್ಲೂಕಿನ ಪೂರ್ವ ಮತ್ತು ಪಶ್ಚಿಮ ವಲಯಗಳಿಗೆ ಗುಂಪುಗಳಾಗಿ ಮಾಡಿ ಡಯಟ್ ಬಳ್ಳಾರಿ ಕೇಂದ್ರದಲ್ಲಿ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಡಯಟ್ ಪ್ರಾಚಾರ್ಯರಾದ ರಾಯಪ್ಪರೆಡ್ಡಿ, ನೋಡಲ್ ಅಧಿಕಾರಿ ಶ್ರೀನಿವಾಸರೆಡ್ಡಿ, ಮಾಸ್ಟರ್ ಟ್ರೇನರ್ಗಳಾದ ಎಂ.ಶ್ರೀನಿವಾಸ್, ಏಕಾಂತರೆಡ್ಡಿ, ಈಶ್ವರಪ್ಪ, ಮಲ್ಲಿಕಾರ್ಜುನ್ ವಿಶ್ವನಾಥ್ ರವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ವೀಪ್ ಮತದಾರ ಸಾಕ್ಷರತಾ ಸಂಘಗಳ ಕುರಿತಾಗಿ ಇ.ಎಲ್.ಸಿ ಸಂಚಾಲಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಬಳ್ಳಾರಿ ತಾಲ್ಲೂಕಿನ ಪೂರ್ವ ಮತ್ತು ಪಶ್ಚಿಮ ವಲಯದ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಪದವಿ ಪೂರ್ವ, ಪದವಿ ಕಾಲೇಜು, ಐಟಿಐ, ಪಾಲಿಟೆಕ್ನಿಕ್, ಮೆಡಿಕಲ್, ಆಯುರ್ವೇದಿಕ್, ಇಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳಿಗೆ ಎರಡು ದಿನಗಳ ತರಬೇತಿಯನ್ನು ಡಯಟ್ ಪ್ರಾಚಾರ್ಯರು ನೋಡಲ್ ಅಧಿಕಾರಿ, ಮತ್ತು ಮಾಸ್ಟರ್ ಟ್ರೈನರ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಚುನಾವಣಾ ಆಯೋಗದಿಂದ ನೀಡಲಾದ ಪುಸ್ತಕಗಳನ್ನು ಇ.ಎಲ್.ಸಿ. ತರಬೇತಿಯ ಸಂಚಾಲಕರಿಗೆ ಡಯಟ್ ಪ್ರಾಚಾರ್ಯರಾದ ರಾಯಪ್ಪರೆಡ್ಡಿ, ನೋಡಲ್ ಅಧಿಕಾರಿ ಶ್ರೀನಿವಾಸರೆಡ್ಡಿ, ವೈ.ಜನಾರ್ಧನರೆಡ್ಡಿ, ಸ್ವೀಪ್ ಸಂಚಾಲಕ ಮತ್ತು ಮಾಸ್ಟರ್ ಟ್ರೈನರ್ ಎಂ.ಶ್ರೀನಿವಾಸರವರು ಉಪಸ್ಥಿತರಿದ್ದು, ಪುಸ್ತಕಗಳನ್ನು ತರಬೇತಿ ಸಂಚಾಲಕರಿಗೆ ವಿತರಿಸಿದರು. ಇದರ ಮಾಹಿತಿಗಳನ್ನು ಚಟುವಟಿಕೆಗಳ ಮೂಲಕ ಎರಡು ದಿನಗಳ ತರಬೇತಿಯನ್ನು ನೀಡಿ ಯಶಸ್ವಿಗೊಳಿಸಲಾಯಿತು.