ಬಳ್ಳಾರಿ: ಆಮಿಷಕ್ಕೊಳಗಾಗದೇ ಮತ ಚಲಾಯಿಸಿ: ಸಹಾಯಕ ಆಡಳಿತ ಅಧಿಕಾರಿ ನಾಗರಾಜ್ ಹೇಳಿಕೆ
ಬಳ್ಳಾರಿ 26: ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಸೀರೆ, ಹಣ, ಹೆಂಡ ಹಾಗೂ ಇತರೆ ವಸ್ತುಗಳಿಗೆ ಮಾರಿಕೊಳ್ಳಬೇಡಿ. ಮತವನ್ನು ಯಾವುದೇ ಆಮಿಷಕ್ಕೊಳಗಾಗದೇ ಸೂಕ್ತವ್ಯಕ್ತಿಗೆ ಮತವನ್ನು ಚಲಾಯಿಸಿ ಎಂದು ಸೆಕ್ಟರ್ನ ಸಹಾಯಕ ಆಡಳಿತ ಅಧಿಕಾರಿ ನಾಗರಾಜ್ ಅವರು ಹೇಳಿದರು.
ನಗರದ ಗುಗ್ಗರಹಟ್ಟಿಯಲ್ಲಿ ಮಂಗಳವಾರರಂದು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವೀಪ್ ಸಮಿತಿವತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಪೊಸ್ಟ್ ಕಾರ್ಡಗಳ ಮೂಲಕ ತಪ್ಪದೇ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಮತದಾನ ಮಾಡೋಣ ಪ್ರಮಾಣಿಕತೆಯಿಂದ ಕೆಲಸ ಮಾಡೋಣ. ಸೀರೆ, ಹಣ, ಹೆಂಡ ಹಂಚುವವರಿಗೆ ಮತ ನೀಡಿದರೆ ಮುಂದೆ ತೊಂದರೆ ನಮಗೆ ಎಂಬ ಘೋಷಣೆಯೊಂದಿಗೆ ಸುತ್ತಮುತ್ತ ಬೀದಿಗಳಲ್ಲಿ ಸಂಚರಿಸಲಾಯಿತು.
ಈ ಸಂದರ್ಭದಲ್ಲಿ ಗುಗ್ಗರಹಟ್ಟಿಯ ಶಾಲಾ ಮುಖ್ಯಗುರುಗಳು, ಸಿಬ್ಬಂದಿ ವರ್ಗದವರು, ಬಿಎಲ್ಒ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.