ಬಳ್ಳಾರಿ: ಕಾಂಗ್ರೇಸ್ ಬೃಹತ್ ಸಮಾವೇಶ: ಬಿಜೆಪಿಗೆ ಸವಾಲು

ಬಳ್ಳಾರಿ: ಕಾಂಗ್ರೇಸ್ ಬೃಹತ್ ಸಮಾವೇಶ: ಬಿಜೆಪಿಗೆ ಸವಾಲು

ಲೋಕದರ್ಶನ ವರದಿ

ಬಳ್ಳಾರಿ 24: ಜಿಲ್ಲೆಯ ಬಹುತೇಕ ಎಲ್ಲಾ ವಿದಾನಸಭಾ ಕ್ಷೇತ್ರಗಳಲ್ಲಿ 2008ರಲ್ಲಿ ಗಣಿದೂಳಿನಿಂದ ಬಿಜೆಪಿ ಕಮಲ ಅರಳಿದ್ದರೂ ಸಂಡೂರು ಮಾತ್ರ ಕಾಂಗ್ರೆಸ್ ಅಲ್ಲದೇ ಬೇರೆಯವರಿಗೆ ನೆಲೆ ಇಲ್ಲ ಎಂದು ತೋರಿಸಿತ್ತು. ಈ ವರೆಗೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಜಿಲ್ಲೆಯ ಸಂಡೂರಿನಿಂದಲೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಪ್ರಯತ್ನಕ್ಕೆ ಈ ಸಮಾವೇಶ ನಾಂದಿಹಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಮತ್ತು ಚುನಾವಣಾ ರಣತಂತ್ರದಿಂದ ತಮಗೆ ನೀಡಿದ ಜವಾಬ್ದಾರಿಯನ್ನು ಜವಾಬ್ದಾರಿಯಿಂದ ಸಚಿವ ಡಿ.ಕೆ ಶಿವಕುಮಾರ ಪಕ್ಷದ ಅಭ್ಯರ್ಥಿ  ಈ ಉಗ್ರಪ್ಪ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಜಯ ಸಾದಿಸಿಕೊಂಡು ಬಂದರು. ಆದರೆ ಅಂದಿನ ಚುನಾವಣೆಯ ಪಲಿತಾಂಶದಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಕೇವಲ 5 ತಿಂಗಳಿಗಾಗಿ ಈ ಚುನಾವಣೆಯಿಂದ ಬಿಜೆಪಿ ಯವರು ಉದಾಶೀನತೆ ಕಾರಣವಾಗಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ ಪ್ರತಿಷ್ಟಿಯಾಗಿ ಸ್ವಿಕರಿಸಿ ಗೆಲುವಿನ ನೆಲೆ ಬೀರಿತು. ಆದರೆ ಈಗ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಗೆಲುವಿನ ಪ್ರಯತ್ನಕ್ಕೆ ರಹದಾರಿಯಾಗಿದೆ ಎಂದರೆ ತಪ್ಪಾಗಲಾರದು. 

ಈ ಚುನಾವಣೆಯಲ್ಲಿ ಒಂದೊಂದು ಚುನಾವಣೆಯ ಪಲಿತಾಂಶವು ಮತ್ತೇ ಮೋದಿ ಅಧಿಕಾರಕ್ಕೆ ಬರಲು ಮುಖ್ಯ ಆಗಿರುವುದರಿಂದ ಈಗ ಬಿಜೆಪಿ ಪಕ್ಷವು ತೀವ್ರ ಸ್ಪಧರ್ೆಗೆ ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲ ಬೆಳವಣಿಗೆಗಳಿಂದ ಕಾಂಗ್ರೆಸ್ ಮತ್ತೆ ತಮ್ಮ ಶಕ್ತಿ ಪ್ರದರ್ಶನದ ಮೂಲಕ ಬಿಜೆಪಿಗೆ ತಾವು ಸವಾಲಾಗಿ ಸ್ವಿಕರಿಸಿದೆ ಎಂಬುವುದನ್ನು ತೋರಿಸಲು ಭಾನುವಾರ ನಡೆದ ಸಮಾವೇಶವೆ ಸಾಕ್ಷಿಯಾಗಿದೆ. ಇದರ ನೇತೃತ್ವವನ್ನು ಸಚಿವ ಡಿ.ಕೆ ಶಿವಕುಮಾರ ವಹಿಸಿಕೊಂಡಿದ್ದರು. ಸಮಾವೇಶವನ್ನು ಬೃಹತ್ ಆಗಿ ಸಂಘಟಿಸಿ ಪಲಿತಾಂಶದ ಮೂಲಕ ಜಿಲ್ಲಾ ಉಸ್ತುವಾರಿ ಪಟ್ಟ ಪಡೆಯಲು ಆಸಕ್ತಿ ಹೊಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ತಮಗೆ ನೀಡಿದ್ದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಡೆಸಿದರು. 

ಸಮಾವೇಶಕ್ಕೆ ಜಿಲ್ಲೆಯ ನಾನಾ ಭಾಗದಿಂದ ಪಕ್ಷದ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ಸೇರಿಸಲಾಗಿತ್ತು. ಈ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಚುನಾವಣೆಗೆ ಶಾಸಕರು ಬೇಕು. ಆದರೆ ಅವರೇ ಮುಖ್ಯ ಅಲ್ಲ. ನಮಗೆ ಕಾರ್ಯಕರ್ತರು ಮುಖ್ಯ. ನಿಮ್ಮ ಕೆಲಸ ನೀವು ಮಾಡಿ. ಉಗ್ರಪ್ಪನವರ ಗೆಲುವಿಗೆ ಶ್ರಮಿಸಿ. ಅದಕ್ಕೆ ಬೇಕಾದ ಸಹಕಾರ ಪಕ್ಷ ನೀಡಲಿದೆ. ಎನ್ನುವ ಮೂಲಕ ಸಚಿವ ಡಿಕೆ ಶಿವಕುಮಾರ ಚುನಾವಣಾ ತಂತ್ರದ ಸೂಕ್ಷ್ಮವನ್ನು ಪಕ್ಷದ ತಳಮಟ್ಟದ ಮುಖಂಡರಿಗೆ ತಿಳಿಸುವುದು ಅಲ್ಲಿನ ಕಾರ್ಯಕರ್ತರಿಗೆ ಹರ್ಷ ತಂದಿತ್ತು. ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು ಸೇರಿಕೊಂಡು ಉಗ್ರಪ್ಪನವರ ಗೆಲುವು ಕಳೆದ ಬಾರಿಗಿಂತ ಹೆಚ್ಚಿನ ಹಂತರದಲ್ಲಿ ಬರುವಂತೆ ಮಾಡುವ ಪ್ರಯತ್ನ ನಮ್ಮದೆಂದು ಬಿಜೆಪಿಯವರಿಗೆ ತಮ್ಮ ಶಕ್ತಿಯ ಬಗ್ಗೆ ಪರೋಕ್ಷವಾಗಿ ತಿಳಿಸಲಾಯಿತು.  ಈ ಸಮಾವೇಶದಲ್ಲಿ ಹಲವಾರು ಶಾಸಕರು, ವಿಧಾನಪರಿಷತ್ ಸದಸ್ಯರು ಗೈರು ಹಾಜರಾಗಿದ್ದು ಅತೃಪ್ತರ ಬಗ್ಗೆ ಲಾಡ್ ಅಸಮಾದಾನ ವ್ಯೆಕ್ತ ಪಡಿಸಿದರು. ಈಗಾಗಲೇ ಉಗ್ರಪ್ಪನವರು ಲೋಕಸಭೆಯ ಅದಿವೇಶನದಲ್ಲಿ ತಮ್ಮ ಪ್ರಶ್ನೆಗಳಿಂದ ಅವರ ಸಾಮರ್ಥವನ್ನು ತೋರಿಸಿದ್ದಾರೆ. ಎಂದರು. ರಾಜ್ಯಸಭಾ ಸದಸ್ಯ ನಾಸಿರ್ಹುಸೇನ್ ಮಾತನಾಡಿ ಯುಪಿಎ ಸರಕಾರ ಇದ್ದಾಗ ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

ಸಮಾವೇಶದಲ್ಲಿ ಪಕ್ಷದ ಮುಖಂಡರುಗಳಾದ ಮಹಮ್ಮದ್ ರಫಿಕ್, ಆಂಜೀನಯಲು, ಕಮಲಮ್ಮ, ಸಿರಾಜ್ ಶೇಖ್, ಅನಿಲ್ ಲಾಡ್, ವೆಂಕಟರಾವ್ ಗೊರ್ಪಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಶಿವಪ್ಪ, ದೀಪಕ್ ಸಿಂಗ್, ಎನ್.ಟಿ ಬೊಮ್ಮಣ್ಣ, ಆಶಾಲತಾ, ಸೋಮಪ್ಪ ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.


ಸುದ್ದಿ ಓದಿ