ಬಳ್ಳಾರಿ: ಅದ್ಧೂರಿಯಾಗಿ ನಡೆದ ಆಂಜನೇಯಸ್ವಾಮಿ ರಥೋತ್ಸವ
ಲೋಕದರ್ಶನ ವರದಿ
ಬಳ್ಳಾರಿ 22: ತಿಮ್ಮಲಾಪುರ: ಗ್ರಾಮದಶ್ರೀ ಆಂಜನೇಯ ಸ್ವಾಮಿರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು. ಹಣದ ನೋಟುಗಳನ್ನು ಹಾರದರೀತಿಯಲ್ಲಿರಥಕ್ಕೆ ಸಿಂಗರಿಸಲಾಗಿತ್ತು. ಅಷ್ಟೆ ಅಲ್ಲದೆ ಬೃಹತ್ ಹೂವಿನ ಹಾರಗಳನ್ನು ಹಾಕಲಾಗಿತ್ತು.ರಥವನ್ನು ಬಣ್ಣ ಬಣ್ಣದ ಬಟ್ಟೆಗಳು, ನೋಟುಗಳು, ವಿವಿಧ ಹೂವುಗಳಿಂದ ಅಲಂಕಾರಮಾಡಲಾಗಿತ್ತು. ಹಾಗೆ ದೊಡ್ಡ ಹೂವಿನ ಹಾರಗಳಿಂದ ಅಲಂಕಾರಗೊಂಡಿದ್ದರಥದಲ್ಲಿ ಸ್ವಾಮಿ ಪ್ರತಿಷ್ಠಾಪಿಸಲಾಯಿತು.
ನಂದಿಕೋಲುಗಳ ಕುಣಿತ, ಡಿ.ಜೆ ಹಾಡುಗಳಿಗೆ ಯುವಕರಡ್ಯಾನ್ಸ್ನೋಡುಗರ ಮನಸೆಳೆಯಿತು. ಸುಮಾರು ನೂರಕ್ಕೂ ಹೆಚ್ಚು ಯುವಕರು, ವಿಷ್ಣು ಸೇನಾ ಅಭಿಮಾನಿ ಬಳಗದವರ ಡ್ಯಾನ್ಸ್ಗೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿತ್ತು.ಆಂಜನೇಯ ಸ್ವಾಮಿದೇವಸ್ಥಾನದಿಂದಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಸಾಗಿಬಂತು. ನೆರೆದಿದ್ದ ಸಾವಿರಾರು ಭಕ್ತರುರಥವನ್ನು ಎಳೆಯುತ್ತಾ, ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ವಿಷ್ಣು ಸೇನಾ ಅಭಿಮಾನಿ ಬಳಗದ ವತಿಯಿಂದರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮಜ್ಜಿಗೆ, ಪಾಯಾಸ ಮತ್ತು ಪ್ರಸಾದವನ್ನು ಉಚಿತವಾಗಿ ವಿತರಿಸಿದರು. ವಿಶೇಷವೆಂದರೆ ವಿಷ್ಣು ಸೇನಾ ಅಭಿಮಾನಿ ಬಳಗವೂ ಸಂಪೂರ್ಣವಾಗಿಯುವಕರಿಂದಲೇ ಪ್ರಾರಂಭಗೊಂಡಿದ್ದು, ಸೇವಾ ಮನೋಭಾವನೆಯಿಂದ ಭಕ್ತರ ಹೊಟ್ಟೆತುಂಬಿಸುವ ಕೆಲಸದಜೊತೆಗೆ ವ್ಯವಸ್ಥೆಯನ್ನು ಮಾಡಿದ್ದರು.
'ಜೈ ಭಜರಂಗಬಲಿ' ಎನ್ನುವರಿಬ್ಬನ್ಗಳು, ಬ್ಯಾಡ್ಜ್ಗಳು, ಟೋಫಿಗಳು, ಪ್ರಸಾದ ಸೇವೆ ಎಲ್ಲವನ್ನುಉಚಿತವಾಗಿಯೆ ವಿತರಿಸಿ, ರಥೋತ್ಸವಕ್ಕೆ ಮೆರತುತಂದರು. ಇದರಜೊತೆಗೆ ಪಟಾಕಿಗಳ ಹಬ್ಬರಜೋರಾಗಿತ್ತು. ಆಂಜನೇಯ ಸ್ವಾಮಿಯ ಗಂಗೆ ತರುವ ಪೂಜಾಕಾರ್ಯಕ್ರಮವು ನೆರವೇರಿತು. ನಂತರಕೋಲಾಟ, ಡೊಳ್ಳು ಕುಣಿತ, ನಂದಿ ಕೋಲುಗಳ ಕುಣಿತ, ವಿಷ್ಣು ಸೇನಾ ಅಭಿಮಾನಿ ಗೆಳೆಯರ ಬಳಗದ ವತಿಯಿಂದಡಿ. ಹಾಡುಗಳಿಗೆ ಯುವಕರಿಂದ ಭರ್ಜರಿಡ್ಯಾನ್ಸ್ ಮಾಡಿದ್ದು ಸ್ವರ್ಗವೇ ಧರೆಗಿಳಿದಂತಿತ್ತು. ವಿ.ಎಸ್.ಎಸ್ ಬಳಗದ ವತಿಯಿಂದ ಮಾಡಿದ ಹಬ್ಬದ ಏರ್ಪಾಡುಗಳಿಗೆ ಜನರೇ ಆಶ್ವರ್ಯರಾಗಿದ್ದರು. ಅಷ್ಟರ ಮಟ್ಟಿಗೆ ಈ ಬಳಗದ ಸೇವಾ ಸೌಲಭ್ಯದ ಏರ್ಪಾಡುಗಳಿದ್ದವು. ಗ್ರಾಮದತುಂಬೆಲ್ಲಾ ಹೋಳಿ ಆಡಿದ್ದು, ಕಲರ್ಫುಲ್ ಹಬ್ಬಕ್ಕೆಬಣ್ಣವು ಮೆರಗುನೀಡಿತು. ಯುವಕರೇ ಹೆಚ್ಚಾಗಿ ಅತ್ಯಂತ ಸಂತೋಷ ಸಂಭ್ರಮದಿಂದ ಹೋಳಿಯಾಡುತ್ತಾ ನಲಿದಾಡಿದರು. ರಾತ್ರಿ ಬಯಲಾಟವು ನಡೆಯಿತು.
ರಥೋತ್ಸವದಲ್ಲಿ ಮುಖಂಡರಾದಲಿಂಗಣ್ಣ, ಮಲ್ಲಿಕಾರ್ಜುನ , ಹೆಚ್.ಮೂರ್ತಿ, ವಿರುಪಾಕ್ಷಪ್ಪ, ಜಿಂಕಲ ಬಸವರಾಜ, ಗಣೇಶ್, ಜಿ,, ಮಹೇಶ್, ಹೊಸಕೋಟೆ ಸುರೇಶ್, ಊದ್ರೇಗಪ್ಪನವರತಿಪ್ಪೇಸ್ವಾಮಿ, ವಿಷ್ಣು ಸೇನಾ ಅಭಿಮಾನಿ ಬಳಗದವರಾದ ಹೀಧರ್ಲಪ್ಪಾ , ಶಿವಕುಮಾರ್, ಗವಿಸಿದ್ದ.ಜೆ, ಮಹಾರುದ್ರಸ್ವಾಮಿ, ಸಂದೀಪ್, ನಾಗೇಶ್, ಮಹೇಶ್, ಶ್ರೀಮೂರ್ತಿ, ಗ್ರಾಮಸ್ಥರು, ಸಾವಿರಾರು ಭಕ್ತರು, ಇತರರುಇದ್ದರು.