ಜಮಖಂಡಿ

ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ  ಜಗದೀಶ ಗುಡಗುಂಟಿ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ,

ಜಮಖಂಡಿ: 20: ಜಮಖಂಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಜಗದೀಶ ಗುಡಗುಂಟಿ ಎತ್ತಿನ ಗಾಡಿಯಲ್ಲಿ ಬೃಹತ್ ಅದ್ಧೂರಿ ಮೆರವಣಿಗೆ ಮೂಲಕ ಆಗಮಿಸಿ, ತಾಲ್ಲೂಕು ಆಡಳಿತ ಸೌಧದಲ್ಲಿ ಚುಣಾವಣಾಧಿಕಾರಿ ಎಸಿ,ಸಂತೋಷ ಕಾಮಗೊಂಡ, ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ನಾಮಪತ್ರ ಸಲ್ಲಿಸಿದರು. 

ನಗರದ ಹಳೆತಹಶೀಲ್ದಾರ್ ಕಾರ್ಯಾಲಯದಿಂದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಹನುಮಾನ ಚೌಕ್, ಪೋಸ್ಟ್ ಚೌಕ್, ಅಶೋಕ ವೃತ್ತ, ದೇಸಾಯಿ ವೃತ್ತದಿಂದ ಬೃಹತ್ ಮೆರವಣೆಗೆಯು ಮಿನಿವಿಧಾನ ಸೌಧದವರೆಗೆ ಸಾಗಿತು. ರಸ್ತೆಯ ಉದ್ದಕ್ಕೂ ಸಾಗರೋಪಾದಿಯಲ್ಲಿ ಸೇರಿದ್ದ ಜನ, ಎಲ್ಲಿ ನೋಡಿದರೂ ಬಿಜೆಪಿ ಧ್ವಜಗಳೇ ರಾರಾಜಿಸಿದವು. ಇದಕ್ಕೂ ಮುನ್ನ ಅವರು ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಮೂಲೆಮೂಲೆಯಿಂದ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉರಿಬಿಸಿಲಿನಲ್ಲಿ ಸೇರಿದರು, ಬಿಸಿಲಿನ ತಾಪಕ್ಕೆ ತಂಪಾದ ಪಾನಿಯನ್ನು ಸೇವಿಸುತ್ತಿದ್ದರು. ಮಹಿಳಯರು ನೆರಳು ಇರುವ ಕಡೆಗಳಲ್ಲಿ ನಿಲ್ಲುತ್ತಿದ್ದರು. ಬಿಜೆಪಿ ಅಭ್ಯರ್ಥಿ  ಜಗದೀಶ ಗುಡಗುಂಟಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಪಾಲ್ಗೊಂಡು ಶಕ್ತಿ ಪ್ರದಶರ್ಿಸಿದರು. 

ಅಭ್ಯರ್ಥಿ ಜಗದೀಶ ಗುಡಗುಂಟಿ ಸುದ್ದಿಗಾರೊಂದಿಗೆ ಮಾತನಾಡಿ, ಈ ಜನಸಾಗರ ನೋಡಿದಾಗ ನಮ್ಮ ಗೆಲುವು ಖಚಿತವೆಂಬಂತಾಗಿದೆ. ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಬೂತ್ನಲ್ಲಿ ತಾವೇ ಅಭ್ಯಥರ್ಿಗಳು ಎಂದು ತಿಳಿದು ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಪರ ಕೆಲಸಗಳು ಇವೆ. ಶಿಕ್ಷಣ, ಕೈಗಾರಿಕೆ, ಆರೋಗ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಗಳನ್ನು ಮಾಡುವ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವದು. ರಸ್ತೆಗಳ ಸುಧಾರಣಿ, ಶುದ್ಧ ಕುಡಿಯುವ ನೀರು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ನಿರೀಕ್ಷೆ ಇದೆ. ಈ ಭಾರಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂದರು. 

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನದ ಬದುಕಿಗೆ ಬಿಜೆಪಿ ಅತ್ಯವಶ್ಯ. ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸಕರ್ಾರ ಅನಿವಾರ್ಯ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಮಾತನಾಡಿದರು, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಉಮೇಶ ಮಹಾಬಳಶೆಟ್ಟಿ, ಡಾ,ವಿಜಯಲಕ್ಷ್ಮೀ ತುಂಗಳ, ಕಾಡು ಮಾಳಿ, ಬಸವರಾಜ ಕಲೂತಿ, ಸಿ.ಟಿ. ಉಪಾಧ್ಯ, ಎಂ.ಬಿ.ನ್ಯಾಮಗೌಡ, ಅಜಯ ಕಡಪಟ್ಟಿ, ಮೋಹನ ಜಾಧವ, ನಾಗಪ್ಪ ಸನದಿ, ಆನಂದ ಇಂಗಳಗಾವಿ, ಬಸವರಾಜ ಬಿರಾದಾರ, ಹಣಮಂತರಾಯ ಬಿರಾದಾರ, ವಿಜಯಲಕ್ಷ್ಮಿ ಉಕುಮನಾಳ, ಬಾಲಚಂದ್ರ ನಾಗೋಣಿ, ಸದಾಶಿವ ಕವಟಗಿ ಸೇರಿದಂತೆ ಅನೇಕರು ತೆರದ ವಾಹನದ ಮೂಲಕ ಬಿಜೆಪಿ ಅಭ್ಯಥರ್ಿಯ ನಾಮಪತ್ರದ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗಿದರು. 



ಸುದ್ದಿ ಓದಿ