ಬಿಜೆಪಿ ಅಭ್ಯರ್ಥಿ ಜಗದೀಶ ಗೆಲವು : ವಿಜಯೋತ್ಸವ
ಲೋಕದರ್ಶನ ವರದಿ,
ಜಮಖಂಡಿ14: ಜಮಖಂಡಿ ವಿಧಾನಸಭಾ ಚುನಾವಣೆಯಲ್ಲಿ ವಿರೋಚಿತ ಗೆಲವು ಪಡೆದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅಭಿಮಾನಿಗಳು, ಯುವಕರು, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕೇರಿಸಿ ಬಣ್ಣದ ಗುಲಾಲ ಎರಚುವ ಮೂಲಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ನಗರದ ಕಟ್ಟೆಕೆರೆಯಿಂದ ಆರಂಭಗೊಂಡ ತೆರೆದ ವಾಹನದಲ್ಲಿ ಡಿಜೆ ಸಾಂಗ್ದೊಂದಿಗೆ ನಡೆದ ಅದ್ಧೂರಿ ವಿಜಯೋತ್ಸವದಲ್ಲಿ ಸಾವಿರಾರು ಕಾರ್ಯಕರ್ತರ ಮೆರವಣಿಗೆಯು ನಗರದ ಹನುಮಾನ ಚೌಕ, ಗವಳಿಗಲ್ಲಿ, ಅರ್ಬನ ಬ್ಯಾಂಕ ರಸ್ತೆ, ಥೇಟರ ರಸ್ತೆ, ಡಾ.ರಾಜಕುಮಾರ ರಸ್ತೆ ಮಾರ್ಗವಾಗಿ ನಗರದ ಎ.ಜಿ. ದೇಸಾಯಿ ವೃತ್ತದಿಂದ ಅಭ್ಯರ್ಥಿ ನಿವಾಸದವರೆಗೆ ಬೃಹತ್ ವಿಜಯೋತ್ಸವ ಅಂತ್ಯಗೊಂಡಿತು.
ವಿಜಯೋತ್ಸವದಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ, ವಿಧಾನ ಪರಿಷತ್ ಮಾಜಿಸದಸ್ಯ ಜಿ.ಎಸ್.ನ್ಯಾಮಗೌಡ, ಡಾ.ಉಮೇಶ ಮಹಾಬಳಶೆಟ್ಟಿ, ಅಜೇಯ ಕಡಪಟ್ಟಿ, ಎಂ.ಬಿ. ನ್ಯಾಮಗೌಡ, ಏಗಪ್ಪ ಸವದಿ, ಡಾ.ರಂಗನಾಥ ಸೋನವಾಲ್ಕರ, ಡಾ.ವಿಜಯಲಕ್ಷ್ಮೀ ತುಂಗಳ, ಧರ್ಮಲಿಂಗಯ್ಯ ಗುಡಗುಂಟಿ, ಸಿ.ಟಿ.ಉಪಾಧ್ಯೆ, ಕಾಡು ಮಾಳಿ, ಎಗಪ್ಪ ಸವದಿ, ಬಸವರಾಜ ಕಲೂತಿ, ಹನಮಂತರಾಯ ಬಿರಾದಾರ, ಶಂಕರ ಕಾಳೆ, ಶ್ರೀಧರ ಕಂಬಿ, ಉಮೇಶ ಆಲಮೇಲಕರ, ಮಂಜು ಭೋವಿ,ಗೀತಾ ಸೂರ್ಯವಂಶಿ, ಸಾವಿತ್ರಿ ಗೋರನಾಳ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.
ಗೆಲವಿನ ಆತಂಕ....
ಬಾಗಲಕೋಟೆಯಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ ಏಣಿಕೆ ಆರಂಭದಿಂದ ಗೆಲವಿನ ಆತಂಕ ಹೆಚ್ಚಾಗಿತ್ತು. 232 ಮತಗಟ್ಟೆಗಳಲ್ಲಿ ಪ್ರತಿ ಹಂತದ ಮತ ಏಣಿಕೆಯಲ್ಲಿ ಬಹುಮತ ಬಂದರು. ಬಹುಮತದ ಅಂತರ ಕಡಿಮೆಯಿದ್ದ ಕಾರಣ ಬಿಜೆಪಿ ಕಾರ್ಯಕರ್ತರು ಸೋಲು-ಗೆಲವಿನ ಆತಂಕ ಹೆಚ್ಚಾಗಿತ್ತು, ಕೊನೆ 16 ಮತ್ತು 17 ಸುತ್ತಿನ ಮತಗಳ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅಂತರ ಹೆಚ್ಚಾಗುವ ಮೂಲಕ ಕೊನೆಯಲ್ಲಿ 4597 ಮತಗಳ ಅಂತರ ಸ್ಪಷ್ಟಗೊಂಡಾಗ ಕಾರ್ಯಕರ್ತರು ಗೆಲವಿನ ಕೇಕೆ ಹಾಕಿದರು.
ಸಂಭ್ರಮದಲ್ಲಿ ಯುವಕರು......
ಜಿಲ್ಲೆಯಲ್ಲಿ ನಡೆದ ಮತ ಏಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಗೆಲವಿನ ಸಂಕೇತ ನೀಡುತ್ತಿದ್ದಂತೆ ಜಮಖಂಡಿ ಮತಕ್ಷೇತ್ರದ ಸಾವಿರಾರು ಸಂಖ್ಯೆಯಲ್ಲಿ ಯುವಕರು ಬಿಜೆಪಿ ಪಕ್ಷ ಮತ್ತು ಭಗವಾ ಧ್ವಜದೊಂದಿಗೆ ಬೃಹತ್ ಬೈಕ್ ಸವಾರಿ ನಡೆಯಿತು. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಕಲ್ಲು ತೂರಾಟ..........
ನಗರದ ಹೊರವಲಯದ ಚೌಡಯ್ಯ ನಗರದಲ್ಲಿ ಎರಡು ಪಕ್ಷದ ಕಾರ್ಯಕರ್ತರು ತಮ್ಮ ಬಾವುಟ ಹಿಡಿದು ಸಂಭ್ರಮಿಸುವ ಸಮಯದಲ್ಲಿ ಮಾತಿಗೆ ಮಾತು ಬೆಳೆದು. ಕಲ್ಲು ತೂರಾಟ ನಡೆಸಿದ ಘಟನೆ ಸಂಭವಿಸಿದ್ದು. ಸ್ಥಳಕ್ಕೆ ಶಹರ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ಆಗಮಿಸಿ. ಗಲಾಟೆಯನ್ನು ತಿಳಿಗೊಳಿಸಿದ್ದಾರೆ.
ಎರಡು ಪಕ್ಷಗಳ ಬಾವುಟ...........
ನಗರದ ರಸ್ತೆಯ ಉದ್ದಗಲಕ್ಕೂ ಕೇಸರಿಮಯ ಬಾವುಟಗಳನ್ನು ಹಿಡಿದು ಬೈಕ್ಗಳನ್ನು ಓಡಿಸುತ್ತಿದಂತೆ. ಮತ್ತೊಂದು ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ಬಾವುಟಗಳನ್ನು ಹಿಡಿದು. ಬೈಕ್ ಓಡಿಸುವದು ಸಾಮಾನ್ಯವಾಗಿತು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುತ್ತಿದಂತೆ ಕಾಂಗ್ರೇಸ್ ಕಾರ್ಯಕರ್ತರು ಸಹ ಪಟಾಕಿ ಸಿಡಿಸಿ ಘೋಷಣೆ ಕೂಗುತ್ತಿದರು.
ಅಲ್ಲಲ್ಲಿ ಗಲಾಟೆ, ಆಸ್ಪತ್ರೆಗೆ ದಾಖಲು..........
ನಗರದಲ್ಲಿ ಕೆಲವು ಕಡೆಗಳಲ್ಲಿ ಗಲಾಟೆಗಳು ನಡೆದಿದ್ದು. ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ಸಹ ಗಲಾಟೆಗಳು ನಡೆದಿದ್ದು. ಎರಡು ಪಕ್ಷದ ಕಾರ್ಯಕರ್ತ ನಡುವೆ ಸಣ್ಣಪುಟ್ಟ ಗಲಾಟೆಯಲ್ಲಿ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿರುವ ಕಾರ್ಯಕರ್ತರು, ಹಾಗೂ ಮುಖಭಾಗದ ಬಾಯಿಗೆ ಪೆಟ್ಟು ಬಿದ್ದು ಗಾಯಗೊಂಡಿದ ಕಾರಣ ಕೆಲವರು ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.