ಜಮಖಂಡಿ

ತಾಯಿ ಹಾಲಿನ ಬಗ್ಗೆ ಜಾಗೃತಿ ಕಾರ್ಯಕ್ರಮ

ತಾಯಿ ಹಾಲಿನ ಬಗ್ಗೆ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ  2: ಹುಟ್ಟಿದ ಮಗುವಿಗೆ ಬಾಟಲ್ ಹಾಲು ಉಣಿಸುವುದು ತಾಯಿಂದರು ಬಿಡಬೇಕು. ತಾಯಿಯ ಎದೆ ಹಾಲು ಮಗುವಿಗೆ ಬಹಳ ಮುಖ್ಯ ಎಂದು ಡಾ,ಜೋತಿ ದೇವರಡ್ಡಿ ಹೇಳಿದರು.

ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಜಮಖಂಡಿ ಇನ್ನರವೇಲ್ ಸಂಸ್ಥೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ತಾಯಿ ಎದೆ ಹಾಲಿನ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿ ಸಾಧರಣ ಹೆರಿಗೆ ಆದ ನಂತರ ಅರ್ಧ ಗಂಟೆಯ ನಂತರ ಮಗುವಿಗೆ ಹಾಲು ಉಣಿಸಬೇಕು ಮತ್ತು ಶಸ್ತ್ರಚಿಕಿತ್ಸೆ ಮಾಡಿಕೊಂಡ ತಾಯಂದಿಯರು ಮಗುವಿಗೆ ಒಂದು ಗಂಟೆಯ ನಂತರ ಎದೆಯ ಹಾಲನ್ನು ಉಣಿಸಬೇಕು. ಇದರಿಂದ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲು ಸಾಧ್ಯ. ಕೆಲವರು ತಾಯಿಯಂದಿರು ಕೆಲ ಗಂಟೆಗಳ ನಂತರ ಮಗುವಿಗೆ ಹಾಲು ಉಣಿಸಿಸಲು ಹೋದರೆ ಎದೆಯ ಹಾಲಿನಲ್ಲಿ ಹೆಪ್ಪುಗಟ್ಟಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದರು.

ಡಾ,ಗೌತಮಿ ಕಡ್ಲೇವಾಡ ಮಾತನಾಡಿ, ಮಗುವಿಗೆ ಎಷು ಬೇಕು ಅಷ್ಟೇ ಹುಟ್ಟಿದ ಮಗುವಿಗೆ ಎದೆ ಹಾಲು ಉಣಿಸಬೇಕು. ಎದೆ ಹಾಲಿನಲ್ಲಿ ಪೌಷ್ಠಿಕಾಂಶ ಇರುತ್ತದೆ. ಇದರಿಂದ ಮಗು ಆರೋಗ್ಯಕರವಾಗಿರುತ್ತದೆ ಎಂದರು.

ಡಾ,ಪ್ರತಿಭಾ ಕೊಕಟ್ಟನೂರ ಮಾತನಾಡಿ, ಹೆರಿಗೆ ಆದ ತಾಯಿಯಂದಿರು ಹುಟ್ಟಿದ ಮಗು ಮತ್ತು ತಾಯಿಯಂದಯರು ಬೆಚ್ಚಗೆ ಇರಬೇಕು. ತಾಯಿ,ಮಗು ಒಂದೇ ಕಡೆ ಇರಬೇಕು. ಇದರಿಂದ ಮಗುವಿಗೆ ಹಾಲು ಉಣಿಸುವುದುರಿಂದ ಹಾಲಿನ ಉತ್ಪಾದನೆ ಹೆಚ್ಚಳವಾಗುತ್ತದೆ ಇದರಿಂದ ತಾಯಿಗಳಿಗೆ ಅನುಕೂಲವಾಗುತ್ತದೆ ಎಂದರು.

 ಡಾ,ಅಶ್ವಿನಿ ಪೂಜಾರಿ, ಆಶಾ ಗುಡಗುಂಟಿ, ಡಾ,ಕೃಷ್ಣಾ ಬಣ್ಣದ, ಡಾ,ಮುದ್ದಿಗೌಡರ, ಡಾ,ಬೆನಕಟ್ಟಿ, ವಿರುಪಾಕ್ಷ ವಿ, ರವಿ ಗೌಳಿ, ಬಸವರಾಜ ಗೌಳಿ, ಬಸವರಾಜ ಆಲಗೂರ, ಶ್ರೀಶೈಲ ತೇಲಿ, ಶ್ರೀಧರ ಕಾಖಂಡಕಿ ಸೇರಿದಂತೆ ಅನೇಕರು ಇದ್ದರು.


 

ಸುದ್ದಿ ಓದಿ