ಕಥೆ ಮತ್ತು ವಿಶೇಷ ಲೇಖನಗಳು

ಅಥಣಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವರ್ಾಧ್ಯಕ್ಷ ರಂಗಕಮರ್ಿ-ಕನ್ನಡ ವಕೀಲ ಕೆ.ಎಲ್ ಕುಂದರಗಿ

ಅಥಣಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವರ್ಾಧ್ಯಕ್ಷ  ರಂಗಕಮರ್ಿ-ಕನ್ನಡ ವಕೀಲ ಕೆ.ಎಲ್ ಕುಂದರಗಿ

- ರೋಹಿಣಿ ಯಾದವಾಡ, ಅಥಣಿ

``ಪ್ರತಿಭೆ '' ಎನ್ನುವುದು ಯಾರೋಬ್ಬರ ಸೊತ್ತು ಅಲ್ಲ. ಅದನ್ನು ನಾವು ರೂಢಿಸಿ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ನಿರಂತರ ಪರಿಶ್ರಮ ಬೇಕಷ್ಟೇ. ಈ ದಿಸೆಯಲ್ಲಿ ಕ್ರಿಯಾಶೀಲರಾಗಿ ಬಹುಮುಖ ಪ್ರತಿಭೆಯ ವ್ಯಕ್ತಿತ್ವವವನ್ನು ಹೊಂದಿದವರು. ನಮ್ಮ ಅಥಣಿ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾದ ``ಕೆ. ಎಲ್. ಕುಂದರಗಿ'' ಎಂದೇ ಗುರುತಿಸಿಕೊಂಡಿರುವ ಕೃಷ್ಣ ಲಕ್ಷ್ಮಕುಂದರಗಿ ಅವರು ಅಥಣಿ ತಾಲೂಕು ಸಾಹಿತ್ಯ, ಸಾಂಸ್ಕೃತಿಕವಾಗಿ ತುಂಬ ಹರವಾದ ಬೆಳಕನ್ನು ಚೆಲ್ಲಿದ ತಾಣ. ಈ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಸಾಕಷ್ಟು ಜನರಿದ್ದಾರೆ. ಅಥಣಿಯ ರಂಗಭೂಮಿಯದು ವೈವಿಧ್ಯಮಯ ಕೊಡುಗೆ ಎಂದರೆ ತಪ್ಪಾಗಲಿಕ್ಕಿಲ್ಲ. ವಕೀಲಿ ವೃತ್ತಿಯೊಂದಿಗೆ ರಂಗಭೂಮಿಯತ್ತ ಒಲವು. ಅವರು 1974 ರಲ್ಲಿ ``ಮರಾಠಿ ನಾಟ್ಯ ಕಲಾಂಕುರ'' ಹಾಗೂ ಕನರ್ಾಟಕದಲ್ಲಿ ಮಲ್ಲಿಕಾಜರ್ುನ ನಾಟ್ಯ ಸಂಘ'' ನಾಟಕ ಕಂಪನಿ ಕಟ್ಟಿ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಿಸುವ ಮೌಲಿಕ ಅಂಶಗಳನ್ನು ಅಳವಡಿಸಿಕೊಂಡು ಸಾಮಾಜಿಕ, ಕೌಟುಂಬಿಕ ನಾಟಕಗಳನ್ನು ರಚಿಸಿದ್ದಾರೆ. ನಾಟಕದಲ್ಲಿ ಪಾತ್ರಾಭಿನಯ, ನಾಟಕಗಳ ರಚನೆ, ನಿದರ್ೇಶನ ಹಾಗೂ ರಂಗ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈ ಪರಿಸರದಲ್ಲಿ ಸಾಂಸ್ಕೃತಿಕ ರಾಯಭಾರಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಅಥಣಿ ತಾಲೂಕಿನ ಕೃಷ್ಣಾಕಿತ್ತೂರ ಗ್ರಾಮದ ಲಕ್ಷ್ಮಣರಾವ, ಶಾಂತಾಬಾಯಿ ದಂಪತಿಗಳ ಜೇಷ್ಠಪುತ್ರರಾಗಿ 10 ನೆ ಅಕ್ಟೋಬರ 1951 ರಲ್ಲಿ ಜನಿಸಿದರು. ಹುಟ್ಟೂರಲ್ಲಿಯೇ ಪ್ರಾಥಮಿಕ ಶಿಕ್ಷಣ, ನಂತರ ಪಕ್ಕದ ಐನಾಪೂರದಲ್ಲಿ ಪ್ರೌಢಶಾಲಾ ಶಿಕ್ಷಣ, ಸಾಂಗ್ಲಿ ವಿಲಿಂಗ್ಡನ್ ಸಂಸ್ಥೆಯಲ್ಲಿ ಪಿಯುಸಿ, ಜಮಖಂಡಿಯ ಬಿ.ಎಲ್.ಡಿ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತೆ ಸಾಂಗ್ಲಿ ಎನ್.ಎಸ್.ಲಾ ಕಾಲೇಜನಲ್ಲಿ ಎಲ್.ಎಲ್.ಬಿ. ಪೂರೈಸಿಕೊಂಡರು. ಹೀಗೆ ಕನರ್ಾಟಕ, ಮಹಾರಾಷ್ಟ್ರದಲ್ಲಿ ಅವರ ಶಿಕ್ಷಣ ಪಡೆದ ಅವರು ಕನ್ನಡ ಮರಾಠಿ ಎರಡೂ ಭಾಷೆಯನ್ನು ಅರಿತವರು. 

ಪತ್ನಿ ಲಲಿತಾ ಜಾನಪದ ವಿಷಯದಲ್ಲಿ ಸ್ನಾತಕೊತ್ತರ ಪರವಿಧರೆ. ಮಕ್ಕಳಾದ ಸಾರ್ಥಕ ಹಾಗೂ ಸಾಲಂಕೃತ ಇವರೂ ಕೂಡ ತಂದೆಯಂತೆ ವಕೀಲಿ ವೃತ್ತಿಯಲ್ಲಿದ್ದಾರೆ. ಮೊಮ್ಮಗಳು ಶಾಂಭವಿ ಚಲನಚಿತ್ರದಲ್ಲಿ ಬಾಲಕಲಾವಿದೆ. 

ಕಲೆಯಲ್ಲಿ ಆಸಕ್ತಿ ಹೊಂದಿದ ಇವರು ಹತ್ತನೆ ವರುಷದಲ್ಲಿಯೇ ಶಾಲೆಯಲ್ಲಿ ನಟನೆಯ ಆಸಕ್ತಿ ತೋರಿದ್ದರು.  ಬಾಂಬೆಯಲ್ಲಿ 1972 ರಲ್ಲಿ ಕರಿಯರ್ ಫಿಲ್ಮ್ ಇನ್ನಸ್ಟಿಟ್ಯೂಟ ಆಕ್ಟಿಂಗ್ ಕೋರ್ಸ'ನಲ್ಲಿ ತರಬೇತಿ ಪಡೆದರು. ಇವರಿಗೆ ಹಿಂದಿ ಚಿತ್ರರಂಗದ ಖ್ಯಾತ ನಟರಾದ ಅಶೋಕಕುಮಾರ, ನಗರ್ಿಸ್ ಅವರು ತರಬೇತಿ ನೀಡಿದ್ದು, ಅವರು ಶ್ರೇಷ್ಠ ರಂಗಕಮರ್ಿಯಾಗಿ ಬೆಳೆಯಲು ಅನುಕೂಲವಾಯಿತು. ``ನಾಟಕ ಜನಜೀವನವನ್ನು ಪ್ರತಿಬಿಂಬಿಸುವ ರಸಗನ್ನಡಿ'' ಇದ್ದಂತೆ ಎನ್ನುವ ಅವರು ಕಲೆಯನ್ನು ತಪಸ್ಸನ್ನಾಗಿ ರೂಢಿಸಿಕೊಂಡು ಜನಮಾನಸದ ಅದ್ಭುತ ಕಲಾಕಾರರೆನಿಸಿಕೊಂಡಿದ್ದರೆ. ಯಾವುದೇ ಪಾತ್ರವಿರಲಿ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ಕೌಶಲ್ಯ ಇವರದು. ಪಕ್ಕದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಹೀಗೆ ಹೊರ ರಾಜ್ಯಗಳಲ್ಲೂ ಇವರ ನಾಟಕಗಳು ಜನಮನ್ನಣೆ ಪಡೆದಿವೆ.

ರಂಗಕಲಾವಿದರಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ ಹೀಗೆ ತ್ರಿಭಾಷಾ ನಟರು. ಅಥಣಿಯ ಕ್ಷೇತ್ರಾಧಿಪತಿ ಮುರುಘೇಂದ್ರ ಶಿವಯೋಗಿಗಳ ಪಾತ್ರ. ``ಗಾಂಧಿ ಮರಳಿ ಬಂದಾಗ'' ನಾಟಕದಲ್ಲಿ ರಾಜಾರಾಮ ಪಾತ್ರ, ಅಲ್ಲದೆ ಸ್ತ್ರೀ ಪಾತ್ರದಾರಿಯಾಗಿಯೂ ನಟಿಸಿದ್ದಾರೆ. `` ಕರುಳಿನ ಕೂಗು'' ನಾಟಕದಲ್ಲಿ ಅಮ್ಮನ ಪಾತ್ರ, ``ಗುಂಡನ ಮಾನ'' ನಾಟಕದಲ್ಲಿ ಖಳನಾಯಕಿ ಪಾತ್ರ. ಜಮಖಂಡಿಯಲ್ಲಿ ಪ್ರದಶರ್ಿಸಿದ ''ಜಮಾನಾ'' ಹಿಂದಿ ನಾಟಕದಲ್ಲಿ ಹಾಗೂ ಸಾಂಗಲಿಯಲ್ಲಿ ಪ್ರದರ್ಶನದ ``ಅಥೆಲೊ'' ಇಂಗ್ಲೀಷ ನಾಟಕದಲ್ಲಿ ನಟಿಸಿದ ಕೀತರ್ಿ ಇವರದಾಗಿದೆ 

ಸಾಹಿತ್ಯ ರಚನೆಯಲ್ಲಿ ಸೈ ಎಣಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ಕಂಡ ``ಗಾಂಧಿ ಮರಳಿ ಬಂದಾಗ'', ಸ್ವಾಮೀಜಿ ಮತ್ತು ಬಿಡುಗಡೆ, ನಕ್ಕುಬಿಡಿ ಸಾಕು, ಕಣ್ಣೀರಿನ ಹೂ, ತೋಳ ಬಂತಲೆ ತೋಳ, ಸೂರ್ಯ-ಚಂದ್ರದ ನಡುವೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಲೋಕಮಾನ್ಯ ಟಿಳಕ, ಛತ್ರಪತಿ ಶಿವಾಜಿ ಎರಡು ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ. ಗೋವಾ, ಬಿಚ್ಚು, ಪಣಜಿ, ವಾಸ್ಕೊ ಮುಂತಾದೆಡೆ 20 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳನ್ನು ಸ್ಥಾಪಿಸಿದ ಹಿರಿಮೆ ಇವರದು.

ಕನ್ನಡ ಭಾಷಾಭಿಮಾನ ರಕ್ತಗತವಾಗಿದೆ ಎನ್ನುವುದಕ್ಕೆ ತಮ್ಮ ವೃತ್ತಿಯ ನ್ಯಾಯಾಂಗದಲ್ಲಿ ಕನ್ನಡದಲ್ಲಿ ವಾದ ಮಂಡಿಸುತ್ತ ಬಂದಿದ್ದಾರೆ. ಹೀಗಾಗಿ ಇವರನ್ನು ``ಕನ್ನಡ ವಕೀಲ'' ಎಂದು ಕರೆಯುತ್ತಾರೆ., ಇವರ ಕನ್ನಡ ಪ್ರೀತಿಗೆ ಇತ್ತೀಚಿತೆ ಬೆಂಗಳೂರು ಕನರ್ಾಟಕ ರಕ್ಷಣಾ ವೇದಿಕೆಯವರಿಂದ ``ಕದಂಬ ಪ್ರಶಸ್ತಿ'', ಬೆಂಗಳೂರು ಕನರ್ಾಟಕ ಸೇವಾದಳದವರಿಂದ ``ಕನರ್ಾಟಕ ವಿಭೂಷಣ'' ಪ್ರಶಸ್ತಿ, ಹೈದರಾಬಾದ ಕನರ್ಾಟಕ ನಾಗರಿಕರ ವೇದಿಕೆಯಿಂದ ``ಅಮೋಘವರ್ಷ ನೃಪತುಂಗ'' ಪ್ರಶಸ್ತಿ, ಬೆಂಗಳೂರು ಕನರ್ಾಟಕ ವೇದಿಕೆಯಿಂದ ``ಕರುನಾಡ ಪದ್ಮಶ್ರೀ'' ಮೊದಲಾದ ಪ್ರಶಸ್ತಿಗಳು ಸಂದಿವೆ.

ಸವರ್ಾಧ್ಯಕ್ಷತೆಯ ಗರಿ: ಕುಂದರಗಿಯವರು ರಾಜ್ಯ ಹೊರ ರಾಜ್ಯಗಳಲ್ಲಿ ಈಗಾಗಲೇ ಸಾಂಸ್ಕೃತಿಕ ಸಮ್ಮೇಳನಗಳ ಸವರ್ಾಧ್ಯಕ್ಷತೆಯನ್ನು ಅಲಂಕರಿಸಿದ್ದು, ಇದೀಗ ತವರಿನಲ್ಲಿ ಸವರ್ಾಧ್ಯಕ್ಷತೆಯ ಗೌರವ ಅಲಂಕರಿಸುತ್ತಿದ್ದಾರೆ. 2017 ರಲ್ಲಿ ಗೋವಾದಲ್ಲಿ ಕನ್ನಡಿಗರ ಒಂಬತ್ತನೇ ಸಾಂಸ್ಕೃತಿಕ ಸಮ್ಮೇಳನದ ಸವರ್ಾಧ್ಯಕ್ಷತೆ, ಕಾಶಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷತೆ, ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಜರುಗಿದ ಎಂಟನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷತೆ ವಹಿಸಿದ್ದು ಅವರ ಜೀವಮಾನದ ಸ್ಮರಣೀಯ ಕ್ಷಣಗಳಾಗಿದ್ದು ಇವರು ಮೇರು ವ್ಯಕ್ತಿತ್ವದ ಸೃಜನಶೀಲ ವ್ಯಕ್ತಿ, ಇಂದು 6 ನೇ ಸಮ್ಮೇಳನದ ಸವರ್ಾಧ್ಯಕ್ಷತೆಯನ್ನು ವಹಿಸುತ್ತಿರುವುದು ಅವರ ಸಾಧನೆಯ ಹಿರಿಮೆಗೆ ಮತ್ತೊಂದು ಗರಿ ಏರಲಿದೆ. ಇದು ಕನ್ನಡಿಗರಿಗೆ ಹೆಮ್ಮೆ.

ಸುದ್ದಿ ಓದಿ