ಜಮಖಂಡಿ

ವಿಧಾನಸಭೆ ಚುನಾವಣೆ: ಸಶಸ್ತ್ರ ಸೇನಾ ಬಲ ತಂಡದಿಂದ ಪಥಸಂಚಲನ

ವಿಧಾನಸಭೆ ಚುನಾವಣೆ: ಸಶಸ್ತ್ರ ಸೇನಾ ಬಲ ತಂಡದಿಂದ ಪಥಸಂಚಲನ

ಲೋಕದರ್ಶನ ವರದಿ,

ಜಮಖಂಡಿ  24: 2023ರ ವಿಧಾನಸಭೆ ಚುನಾವಣೆ ಮುಂಜಾಗ್ರತ ಹಿನ್ನಲೆ ನಗರದಲ್ಲಿ ಸಶಸ್ತ್ರ ಸೇನಾ ಬಲ ತಂಡ ಹಾಗೂ ಪೊಲೀಸರ ಸಹಯೋಗದಲ್ಲಿ ರೂಟ್ ಮಾರ್ಚ್  ಪಥಸಂಚಲನ ನಡೆಯಿತು.

 ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ದಿಂದ ಪ್ರಾರಂಭಗೊಂಡ ರೂಟ್ ಮಾರ್ಚ್   ಪತಸಂಚಲನ ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಲಾಯಿತು. ಸಶಸ್ತ್ರ ಸೇನಾ ಬಲ ತಂಡವು ರೂಡ್ ಮಾಚರ್್ದಲ್ಲಿ ಇದ್ದವರಿಗೆ ಮಹಿಳೆಯರು ಆರತಿಯನ್ನು ಬೆಳಗಿಸಿದರು. ವಿವಿಧ ಸಂಘಟನೆಯರು ಗುಲಾಬಿ ಹೂವುಗಳನ್ನು ನೀಡಿ. ವಿವಿಧ ಬಗ್ಗೆಯ ಪುಷ್ಪಗಳನ್ನು ಹಾರಿಸುವ ಜೊತೆಗೆ ಅದ್ದೂರಿಯಾಗಿ ಸ್ವಾಗತಿಸಿ. ಗೌರವವನ್ನು ನೀಡಿದರು. ರಸ್ತೆಯ ಉದ್ದಕ್ಕೂ ಮಹಿಳೆಯರು. ಯುವಕರು ಹೂವುಗಳನ್ನು ಹಾರಿಸುವ ಮೂಲಕ ತಂಪಾದ ಪಾನೀಯ ಶುದ್ದ ಕುಡಿಯುವ ನೀರಿನ ಬಾಟಲ್ಗಳನ್ನು ನೀಡುತ್ತಿದರು.

ಸಿಪಿಐ, ಗುರುನಾಥ ಚವ್ಹಾಣ, ಪಿಎಸ್ಐ, ಬಸವರಾಜ ಕೊಣ್ಣೂರೆ, ಸಾವಳಗಿ ಠಾಣಿ ಹಾಗೂ ಗ್ರಾಮೀಣ ಠಾಣಿಯ ಪಿಎಸ್ಐಗಳು ಮತ್ತು 75 ಸಶಸ್ತ್ರ ಸೇನಾ ಬಲ ಪಡೆ, 75 ಪೊಲೀಸ್ ಸಿಬಂಧಿಗಳು ರೂಟ್ ಮಾರ್ಚ್   ಭಾಗಿಯಾಗಿದ್ದರು.


ಸುದ್ದಿ ಓದಿ