ಎನ್.ಎಂ.ಡಿ.ಸಿ ಉಳಿಸಲು ಒತ್ತಾಯಿಸಿ ಉಗ್ರ ಪ್ರತಿಭಟನಾ ಮೆರವಣಿಗೆ

ಎನ್.ಎಂ.ಡಿ.ಸಿ ಉಳಿಸಲು ಒತ್ತಾಯಿಸಿ ಉಗ್ರ ಪ್ರತಿಭಟನಾ ಮೆರವಣಿಗೆ

ಬಳ್ಳಾರಿ 14:ದೋಣಿಮಲೈ ಉಳಿಸಿ, ಎನ್.ಎಂ.ಡಿ.ಸಿ ಉಳಿಸಿ ಎಂದು ಆಗ್ರಹಿಸಿ ಶೇ.80 ಪ್ರೀಮಿಯಂ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಎಐಟಿಯುಸಿ ಮತ್ತು ಎಎನ್ಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ಎನ್.ಎಂ.ಡಿ.ಸಿ ನೌಕರರು ನಗರದಲ್ಲಿ ಸೋಮುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿತು. ಮೆರವಣಿಗೆ ಉದ್ದಕ್ಕು ಎನ್.ಎಂ.ಡಿ.ಸಿ ಉಳಿಸಬೇಕು, ದೋಣಿ ಮಲೈ ಉಳಿಸಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯೆಕ್ತ ಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯ ಎದರು ಉಗ್ರ ಪ್ರತಿಭಟನೆ ಧರಣಿ ನಡೆಸಿದರು. ದೋಣಿಮಲೈ ಐರನ್ ಓರ್ ಮೈನಿಂಗ್ನಲ್ಲಿ ಕಳೆದ ನ.04ರಿಂದ ಗಣಿಗಾರಿಗೆ ಸ್ಥಗಿತಗೊಂಡಿದೆ. ಅದರ ಪರಿಣಾಮವಾಗಿ ಈಗಾಗಲೇ ಸುಮಾರು 800 ಜನ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ಕಾಮರ್ಿಕರನ್ನು ಹೊರ ಹಾಕಲಾಗಿದೆ. ಮುಂದಿನ 20 ವರ್ಷಗಳ ಅವಧಿಗೆ ಗಣಿ ಪರವಾಣಗಿ ನವಿಕರಣ ಮಾಡಿ ಆದೇಶ ಹೊರಡಿಸುವಾಗ ಒಟ್ಟು ವೈಹಿಟಿನ ಮೌಲ್ಯದಲ್ಲಿ ಶೇ.80 ರಷ್ಟು ಪ್ರೀಮಿಯಂ ರದ್ದುಗೊಳಿಸಬೇಕು ಎಂದು ಪ್ರತಿಭನಾ ಕಾರರು ಒತ್ತಾಯಿಸಿದರು. ಪ್ರಸ್ತುತ ಐರನ್ ಓರ್ ಟನ್ ಒಂದರ ಬೆಲೆ 2678 ರೂ ಮಾತ್ರ ಇದ್ದು ಇದರಲ್ಲಿ 2142ರೂ 40 ಪೈಸೆ ಸರಕಾರಕ್ಕೆ ಪಾವತಿಸಬೇಕು. ಇದರೊಂದಿಗೆ ಎಸ್.ಪಿ.ವಿ ಆರ್ ಅಂಡ್ ಆರ್ ಇತ್ಯಾದಿ ಶುಲ್ಕಗಳು ಶೇ.25ರಷ್ಟು ಬರುತ್ತವೆ. ಅಂದರೆ 670ರೂ ಇದುವರೆಗೂ ಕೊಡಿ. ಪ್ರತಿ ಟನ್ ಓವರ್ಗೆ 2800ರೂ ರಷ್ಟು ಪಾವತಿಸಬೇಕಾಗುತ್ತದೆ. ಹೀಗಿದ್ದಾಗ ಸರಕಾರಕ್ಕೆ ಪಾವತಿಸಬೇಕಾದ ತೆರಿಗೆ ಮತ್ತು ಪ್ರೀಮಿಯಂ ರಾಯಲ್ಟಿ ಇತ್ಯಾದಿ ಸೇರಿದರೆ ಶೇ.105ರಷ್ಟು ಆಗುತ್ತದೆ. ಇದರಿಂದಾಗಿ ಪ್ರಯೋಗಿಕವಾಗಿ ಗಣಿಗಾರಿಕೆ ಮುಂದುವರೆಸಲು ಅಸಾದ್ಯ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು. ಅಥವಾ ಪುರ್ನಪರಿಶೀಲೆನೆಗೆ ಒಳಪಡಿಸಬೇಕೆಂದು ಆಡಳಿತ ಮಂಡಳಿ ನಿಧರ್ೇಶಕರು ಮತ್ತು ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ಮಾಡಿದಾಗಲೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ದೋಣಿಮಲೈ, ಎನ್.ಎಂ.ಡಿಸಿ ಘಟಕವು ನಿರಂತರವಾಗಿ ಮುಚ್ಚಿ ಹೋಗುವ ಅಪಾಯಸ್ಥಿತಿ ನಿಮರ್ಾಣವಾಗಿದ್ದು. ಕುದುರೆಮುಖ ಐರನ್ ಓರ್ ಕಂಪನಿ ನೆಪಹೊಡ್ಡಿ ನಿರಂತರವಾಗಿ ಮುಚ್ಚಿದಹಾಗೆ ದೋಣಿಮಲೈ ಐರನ್ ಘಟಕವು ಸಹ ನಿರಂತರವಾಗಿ ಮುಚ್ಚಿಹಾಕುವ ನಂತರದಲ್ಲಿ ಖಾಸಗಿ ಕಂಪನಿಗಳಿಗೆ ಧಾರೆ ಎರೆಯುವ ಷೆಡ್ಯಂತರ ಎದ್ದು ಕಾಣುತ್ತದೆ ಎಂದು ಪ್ರತಿಭನಾಕಾರರು ಆರೋಪಿಸಿದರು. ನಂತರ ಮುಖ್ಯಮಂತ್ರಿಗೆ ಬರೆದಿರುವ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರುಗಳಾದ ಬಿ.ಸೋಮಶೇಖರ್, ವಿ.ಕರಿಯಪ್ಪ, ಶ್ರೀನಿವಾಸ ಬೆಹರ್, ಪಿ.ವೀರಭದ್ರಪ್ಪ, ಪಿ ಭಾಷ್ಕರ್, ಟಿ.ಜಿ.ವಿಠ್ಠಲ್, ಇಸ್ಮಾಯಿಲ್, ಆದಿಮೂತರ್ಿ, ಸತ್ಯಬಾಬು, ಟಿ.ಚನ್ನಪ್ಪ, ಕಟ್ಟೆಬಸಪ್ಪ ಸೇರಿದಂತೆ ಸಾವಿರಾರು ಜನ ಕಾಮರ್ಿಕರು ಭಾಗವಹಿಸಿದ್ದರು.


ಸುದ್ದಿ ಓದಿ