ಪ್ರತಿಭೆಯ ಅನಾವರಣಕ್ಕೆ ವೇದಿಕೆ ಅಗತ್ಯ: ಕುಬಕಡ್ಡಿ
ಲೋಕದರ್ಶನ ವರದಿ,
ಜಮಖಂಡಿ 26: ಪ್ರತಿಭೆಯ ಅನಾವರಣಕ್ಕೆ ವೇದಿಕೆ ಅಗತ್ಯ, ಶ್ರೀ ದಾನಮ್ಮಾ ದೇವಿ ಗಜಾನನ ಉತ್ಸವ ಸಮೀತಿಯವರು ಪ್ರತಿಭೆಯ ಅನಾವರಣಕ್ಕೆ ವೈಶಿಷ್ಟಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಉಪನ್ಯಾಸಕಿ ವಿಮಲಾ ಕುಬಕಡ್ಡಿ ಹೇಳಿದರು.
ನಗರದ ಕುಂಚನೂರ ರಸ್ತೆಯ ದಾನಮ್ಮಾದೇವಿ ಗಜಾನನ ಉತ್ಸವ ಸಮೀತಿ ಹಮ್ಮಿಕೊಂಡ ವಿವಿಧ ರಾಜ್ಯಗಳ ವೇಷ ಭೂಷಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಮಾತನಾಡಿದರು.
ಪ್ರಥಮ ಪೂಜಾ ಗಾಂವಿ, ಸರೋಜನಿ ಮಠಪತಿ, ಶಿಲ್ಪಾ ಪವಾರ ಮೂವರಿಗೆ ಲಭಿಸಿತು. ದ್ವಿತೀಯ ನಂದಾ ಬಾಂಗಿ, ತೃತೀಯ ನೇತ್ರಾವತಿ ವಾಲಿಮರದ ಪಡೆದರು.
ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ದಿವ್ಯಾ ಮಹಾಲಿಂಗಪುರ ಹಾಗೂ ಸಂಗಡಿಗರು ಪ್ರಥಮ ಸ್ಥಾನ, ಸೃಷ್ಠಿ ಬಿರಾದಾರ ಸಂಗಡಿಗರು ದ್ವಿತೀಯ, ಶ್ರಾವಣಿ ನಂದಗಾಂವಮಠ ತೃತೀಯ ಸ್ಥಾನ ಪಡೆದರು.
ಸಮಿತಿಯ ಅಧ್ಯಕ್ಷ ಸುನೀಲ ಮುರುಗೋಡ, ಮಲ್ಲು ಗಣಾಚಾರಿ, ಅಜಿತ ಬಿರಾದಾರ, ಎಮ್.ಬಿ.ಮಠದ, ಗುರು ಮಹಾಲಿಂಗಪುರ, ಆನಂದ ಗಣಾಚಾರಿ, ರಾಘವೇಂದ್ರ ಜೋಶಿ, ಮಹಾದೇವ ಅಳ್ಳಿಮಟ್ಟಿ, ಉಮೇಶ ಮುರುಗೋಡ, ಎಸ್.ವಾಯ್.ಪಾಟೀಲ, ಶಿವನಿಂಗ ದೊಡಮನಿ ಇದ್ದರು.