ಜಮಖಂಡಿ

ಜಮಖಂಡಿ ಚುನಾವಣೆಯಲ್ಲಿ ಶೇ.76.9 ರಷ್ಟು ಮತದಾನ

ಜಮಖಂಡಿ ಚುನಾವಣೆಯಲ್ಲಿ ಶೇ.76.9 ರಷ್ಟು ಮತದಾನ

ಲೋಕದರ್ಶನ ವರದಿ,

ಜಮಖಂಡಿ: 11: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಜಮಖಂಡಿ ಚುನಾವಣೆಯಲ್ಲಿ ಶೇ.76.96 ರಷ್ಟು ಮತ ಚಲಾವಣೆಯಾಗಿವೆ. ಮತಕ್ಷೇತ್ರದಲ್ಲಿ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಮಠಾಧೀಶರು ತಮ್ಮ ಹಕ್ಕು ಚಲಾಯಿಸಿದರು.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಶಾಸಕ ಆನಂದ ಸಿದ್ದು ನ್ಯಾಮಗೌಡ ಹಾಗೂ ಅವರ ಪತ್ನಿ ಆಶ್ವಿನಿ ದಂಪತಿ ಸಮೇತ ತಾಲೂಕಿನ ಕಡಕೋಳ ಗ್ರಾಮದ 88ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ನಗರದ ತಾಲೂಕ ಪಂಚಾಯಿತ ಕಾರ್ಯಾಲಯದ 129ನೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರು ಮತ ಚಲಾಯಿಸಿದರು. ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಶೀಲಕುಮಾರ ಬೆಳಗಲಿ ಅವರು ತಾಲೂಕಿನ ಸಾವಳಗಿ ಗ್ರಾಮದ ಎಚ್ಪಿಎಸ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಜೆಡಿಎಸ್ ಅಭ್ಯರ್ಥಿ ಯಾಕೂಬ ಕಪಡೆವಾಲೆ ನಗರದ ಆಝಾದ ನಗರದ 184ನೇ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಗರದ ಬೈಪಾಸ್ ರಸ್ತೆಯ ಸಕರ್ಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆ ನಂ.5 163 ಮತಗಟ್ಟೆಯಲ್ಲಿ ಓಲೇಮಠದ ಡಾ.ಚನ್ನಬಸವ ಮಹಾಸ್ವಾಮಿಗಳು ಮತ ಚಲಾಯಿಸಿದರು. ರುದ್ರಸ್ವಾಮಿ ಮಠದ ಶ್ರೀಗಳು ರುದ್ರಸ್ವಾಮಿ ಸರಕಾರಿ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಮಾದರಿ ಮತಗಟ್ಟೆ ಮತದಾರರು ಶ್ಲಾಘನೆ: 

ಜಮಖಂಡಿ ಮತಕ್ಷೇತ್ರದ ಹುಲ್ಯಾಳ ಗ್ರಾಮದಲ್ಲಿ ಮತ್ತು ನಗರದ ಶಾಂತಿ ನಗರದಲ್ಲಿ ಸಖಿಭೂತ, ನಗರದ ಮಹಿಳಾ ಕಾಲೇಜಿನಲ್ಲಿ ಮಾದರಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಪಿಬಿ ಹೈಸ್ಕೂಲ್ನಲ್ಲಿ ಐತಿಹಾಸಿಕ ಅರಮನೆಯ ಮಾದರಿ ಮತಗಟ್ಟೆ ಎಲ್ಲ ಮತದಾರರನ್ನು ಗಮನ ಸೆಳೆಯುವುದರ ಮೂಲಕ ಯುವಕರು ಯುವತಿಯರು ಮಹಿಳೆಯರು ಅಧಿಕಾರಿಗಳು ಅಲ್ಲಿ ನಿಂತು ಪೋಟೊ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸವರ್ೆ ಸಾಮಾನ್ಯವಾಗಿತ್ತು. ಕಡಪಟ್ಟಿಯಲ್ಲಿ ವಿಶೇಷ ಚೇತನರಿಗಾಗಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿತ್ತು.

ನಿಧಾನಗತಿಯಲ್ಲಿ ಸಾಗಿದ ಮತಯಂತ್ರ: 

ನಗರದ ಬನಶಂಕರಿ ಸರಕಾರಿ ಶಾಲೆಯಲ್ಲಿ ಸರದಿ ಸಾಲಿನಲ್ಲಿ ನಿಂತ ಮತದಾರರು ಬೇಸರ ವ್ಯಕ್ತ ಪಡಿಸುತ್ತಿದ್ದರು. ಉರಿಬಿಸಿನ ತಾಪದಲ್ಲಿ ನಿಂತಿರುವ ಮತದಾರರು ಮತ ಚಲಾವಣಿ ಮಾಡಬೇಕೆದ್ದಾರೆ. ಮತಯಂತ್ರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ಮತದಾರರು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಬೇರೆಯವರನ್ನು ನೇಮಕ ಮಾಡಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಕಡಕೋಳ ಗ್ರಾಮದ 88, 89 ಮತಗಟ್ಟೆಯಲ್ಲಿ ನಿಧಾನವಾಗಿ ಮತಯಂತ್ರ ಸಾಗಿದ ಹಿನ್ನಲೆಯಲ್ಲಿ ಮತದಾನ ಮಾಡಲು ಬಂದವರಿಗೆ ಸಮಯದ ವಿಳಂಬದಿಂದ ಬೇಸತ್ತು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವು ಕಡೆ ಅಲ್ಪಸ್ವಲ್ಪ ಮತಯಂತ್ರಗಳಲ್ಲಿ ತಾಂತ್ರೀಕ್ ದೋಷ್ಗಳು ಉಂಟಾಗಿದ್ದರಿಂದ ಮತಗಟ್ಟೆ ಅಧಿಕಾರಿಗಳು ಸರಿಪಡಿಸಿ ಮತದಾನ ಮಾಡುವವರಿಗೆ ಅನುಕೂಲ ಕಲ್ಪಿಸಿದರು.

ಗ್ರಾಮಸ್ಥರ ಆಕ್ರೋಶ: 

ಮತದಾನ ಮುನ್ನ ತಡರಾತ್ರಿಯಲ್ಲಿ ಸುರಿದ ಮಳೆಯಿಂದ ಬೆಳಗ್ಗೆಯಿಂದ ತಂಡೊಪತಂಡವಾಗಿ ಮತದಾರರು ಮತಗಟ್ಟೆಗೆ ಮತಚಲಾಯಿಸಲು ಆಗಮಿಸುತ್ತಿದ್ದರೆ ಕೆಲ ಮತಗಟ್ಟೆಯಲ್ಲಿನ ಆವರಣದಲ್ಲಿ ಕೆಸರಿನ ನೀರು ನಿಂತ ಹಿನ್ನಲೆಯಲ್ಲಿ ಮತದಾನ ಮಾಡಲು ಬರುವವರಿಗೆ ತೊಂದರೆ ಉಂಟಾಯಿತು.

ಮತಗಟ್ಟೆ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ಸಿಬ್ಬಂದಿ: 

ತಾಲೂಕಿನ ಕಡಕೋಳ, ಕಂಕನವಾಡಿ ಸೇರಿದಂತೆ ವಿವಿಧ ಗ್ರಾಮಗಳ ಮತ್ತು ನಗರದ ಮತಗಟ್ಟೆಗಳಲ್ಲಿ ಆರೋಗ್ಯ ಇಲಾಖೆಯಿಂದ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ, ನೋವು ನೀವಾರಕ ಮಾತ್ರೆ, ಓಆರ್ಎಸ್ ಪಾಕ್ಯೆಟ್ ವಿವಿಧ ಔಷಧಿಗಳ ವ್ಯವಸ್ಥೆಯನ್ನು ಆಶಾ ಕಾರ್ಯಕತರ್ೆಯರು ನಿರ್ವಹಿಸಿದರು.

ಅಲ್ಲಲ್ಲಿ ಮಾತಿನ ಚಕಮಕಿ: 

ನಗರದ ಮುಧೋಳ ರಸ್ತೆಯ ತಾಲೂಕಾ ಶಾಲೆ, ಬನಶಂಕರಿ ಶಾಲೆ ಸೇರಿದಂತೆ ವಿವಿಧ ಮತಕ್ಷೇತ್ರದಾದ್ಯಂತ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಗಿ ಮಾತಿನ ಚಕಮಕಿ ನಡೆದವು.

ಮತದಾನದಿಂದ ವಂಚಿತ: 

ನಗರದ ವಯೋವೃದ್ಧ ತಂಗೆವ್ವ ಬಾಬಾನಗರ ಸೇರಿದಂತೆ ಕೆಲ ಮತಗಟ್ಟೆಯಲ್ಲಿ ಹಲವರು ಮತದಾನ ಪಟ್ಟಿಯಲ್ಲಿ ಹೆಸರು ಇರದೆ ಇರುವದರಿಂದ ಮತದಾನದಿಂದ ವಂಚಿತರಾಗುವಂತಾಯಿತು. ಕೇಲವಂದಿಷ್ಟು ಜನರ ಮತದಾನವನ್ನು ಬೇರೆಯವರು ಚಲಾಯಿಸಿದ ಹಿನ್ನಲೆ ನಿಜವಾದ ಮತದಾರರು ಮತಗಟ್ಟೆಯ ಮುಂದೆ ಗಲಾಟೆ ಮಾಡುವ ದೃಶ್ಯ ಕಂಡು ಬಂದಿತು.

ವಯೋವೃದ್ಧ ದಂಪತಿಗಳು ಯಾರ ಸಹಾಯವಿಲ್ಲದೇ ಮತದಾನ: ತಾಲೂಕಿನ ಕಾಜಿಬೀಳಗಿ ಗ್ರಾಮದ ವಯೋವೃದ್ಧ ದಂಪತಿಗಳು ಯಾರ ಸಹಾಯವಿಲ್ಲದೇ ಮತಗಟ್ಟೆಗೆ ಬಂದು ಮತಚಲಾಯಿಸಿರುವುದು ವಿಶೇಷವಾಗಿತ್ತು.

ಶಾಂತಿಯುತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಅನುಕೂಲವಾಗುವಂತೆ ಜಮಖಂಡಿ ಮತಕ್ಷೇತ್ರದಾದ್ಯಂತ ರಾಜ್ಯ ಪೊಲೀಸ್, ಅರೆಸೇನಾ ಪಡೆ, ಪ್ಯಾರಾ ಕಮಾಂಡರ್ ಸೇನೆ, ಮಹಾರಾಷ್ಟ್ರ ಪೊಲೀಸ್ರ ನೆರವಿನಲ್ಲಿ ಬೀಗಿ ಬಂದೋಬಸ್ತ್ ಒದಗಿಸಲಾಗಿತ್ತು, 



ಸುದ್ದಿ ಓದಿ