2ನೇ ದಿನದ ಸಂಧ್ಯಾ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮ

2ನೇ ದಿನದ ಸಂಧ್ಯಾ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮ

ಬಳ್ಳಾರಿ 22:ಮಕ್ಕಳ ಕತೆಗಳಲ್ಲಿ ಪ್ರಾಸಬದ್ದ ನಿರೂಪಣೆ ಅತ್ಯಂತ ಆಕರ್ಷಕ ಮತ್ತು ಆಕಷರ್ಿಣೀಯವಾಗಿರುತ್ತದೆ, ಕವಿ ಬರೆಯುವ ಪ್ರಾಸಬದ್ದ ಕತೆ, ಕವನ, ಕವಿತೆಗಳು ಮಕ್ಕಳನ್ನು ಆಕಷರ್ಿಸುವಲ್ಲಿ ಸಫಲವಾಗುತ್ತದೆ ಇದನ್ನು ರೂಢಿಸಿಕೊಂಡ ಸಾಹಿತಿ ಮಕ್ಕಳ ಮನಗೆಲ್ಲುವಲ್ಲಿ ಶಯಸ್ವಿಯಾಗುತ್ತಾನೆ ಎಂದು ಕನ್ನಡ ಉಪನ್ಯಾಸಕರಾದ ಎಂ.ಪಂಪಾಪತಿ ಸಿರುಗುಪ್ಪ ಇವರು ಅಭಿಪ್ರಾಯಪಟ್ಟರು. 

ನಗರದ ಗಾಂಧಿಭವನದಲ್ಲಿ ಸಂಧ್ಯಾ ಸಾಹಿತ್ಯ ವೇದಿಕೆ ಶಹಾಪುರ-ಬಳ್ಳಾರಿ ಹಮ್ಮಿಕೊಂಡಿದ್ದ ಎರಡನೇ ದಿನದ ಸಂಧ್ಯಾ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಕ್ಕಳ ಕಥೆ : ನನ್ನ ಗ್ರಹಿಕೆಗಳು ಎಂಬ ವಿಷಯದ ಪ್ರತಿಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಣಸೂರು ಮಾದುಪ್ರಸಾದ, ಸಂಶೋಧಕರು, ಮೈಸೂರು ಇವರು ವಿಷಯ ಮಂಡನೆಯನ್ನು ಮಾಡಿದರು. ವೇದಿಕೆ ಮೇಲೆ ಬಸವರಾಜ ಬಿಸಲಹಳ್ಳಿ ಉಪಸ್ಥಿತರಿದ್ದರು. ಮಕ್ಕಳ ಸಾಹಿತಿಗಳಾದ ಆನಂದ್ ಪಾಟೀಲ್, ಶಿವಲಿಂಗಪ್ಪ ಹಂದಿಹಾಳ್, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಡಾ.ಅರವಿಂದ್ ಪಟೆಲ್, ಇತಿಹಾಸ ತಜ್ಞ ಹನುಮಂತರೆಡ್ಡಿ, ಪರಮೇಶ್ವರಯ್ಯ ಸೊಪ್ಪಿನಮಠ, ಸರೋಜ ಬ್ಯಾತ್ನಾಳ್, ಲಕ್ಷ್ಮಿ ಪವನ್ಕುಮಾರ್, ಸಾಹಿತಿ ವೀರೇಂದ್ರ ರಾವಿಹಾಳ್, ಕ.ಸಾ.ಪ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದಶರ್ಿ ಈ.ಗೋವರ್ಧನ್ರೆಡ್ಡಿ, ಕಾವಲಿ ಮಾರೆಣ್ಣ, ಗುಗ್ಗರಹಟ್ಟಿ ಮಲ್ಲಯ್ಯ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.


ಸುದ್ದಿ ಓದಿ