ಶಾಂತಿಯುತ ಮತದಾನದ ಭದ್ರತೆಗಾಗಿ 10 ಅರೆಸೇನಾ ಪಡೆೆ: ಎಸ್ಪಿ
ಬಳ್ಳಾರಿ02: ಕಳೆದಬಾರಿ ಚುನಾವಣೆಗಿಂತ ಈ ಬಾರಿಯ ಚುನಾವಣೆಗೆ ಹೆಚ್ಚಿನ ಪೈಪೋಟಿ ಇರುವುದರಿಂದ ಮತದಾನ ಶಾಂತಿಯುತವಾಗಿ ನಡೆಯಲು ಅಗತ್ಯವಾದ ಭದ್ರತೆ ಮಾಡಿದ್ದಾರೆ. ಇದಕ್ಕಾಗಿ 10 ಅರೆಸೇನಾ ಪಡೆ ಮತ್ತು 10 ಕೆಎಸ್ಆರ್ಪಿ ಪಡೆಯನ್ನು ನೇಮಕಮಾಡಲಾಗಿದೆ ಎಂದು ಎಸ್ಪಿ ಅರುಣ್ರಂಗರಾಜನ್ ಹೇಳಿದ್ದಾರೆ. ಚುನಾವಣೆಯ ಭದ್ರತೆ ಬಗ್ಗೆ ತಿಳಿಸಿದ ಅವರು ಕಲ್ಬುಗರ್ಿ ವಲಯ ಮತ್ತು ಬಳ್ಳಾರಿ ವಲಯದ ಹಾಗೂ ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಪೋಲಿಸ್ ಸಿಬ್ಬಂದಿಗಳನ್ನು ಕರೆಹಿಸಲಾಗಿದೆ. ಇತರ ಜಿಲ್ಲೆಯಿಂದ ಬಂದಿರುವ 340 ಮತ್ತು ನಮ್ಮ ಜಿಲ್ಲೆಯ 900 ಸೇರಿದಂತೆ 1240 ಹೋಮ್ಗಾಡ್ಸ್ , 10 ಸಿಎಸ್ಎಫ್ ಕಂಪನಿಗಳು ಮತ್ತು 10 ಕೆಎಸ್ಆರ್ಪಿ 1226 ಪೇದೆಗಳನ್ನು ನೇಮಕ ಮಾಡಿದೆ.
ಅರೆಸೇನಾ ಪಡೆಯ ಸಿಬ್ಬಂದಿಯನ್ನು ಸೂಕ್ಷ್ಮ ಮತಗಟ್ಟೆಗಳಿಗೆ ನೇಮಗ ಮಾಡಿದೆ. ಅಲ್ಲದೇ ಹೊರಗಿನಿಂದ 6 ಜನ ಡಿವೈಎಸ್ಪಿ ಜೊತೆ ಜಿಲ್ಲೆಯ ಎಲ್ಲಾ ಪೋಲಿಸ್ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.
ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ 1790 ರೌಡಿ ಪಟ್ಟಿಯಲ್ಲಿರುವವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕೋಮಗಲಭೆಗಳನ್ನು ಸೃಷ್ಟಿ ಮಾಡುವ 940 ಜನ ಮತ್ತು ವಿನಾಕಾರಣ ಗಲಭೆಗಳಿಗೆ ಕಾರಣವಾಗುವಂತಹ 27 ಜನರನ್ನು ಕರೆಸಿ ಎಚ್ಚರಿಕೆ ನೀಡಿ ಗೃಹಬಂಧನದಲ್ಲಿರುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ.