ಜಮಖಂಡಿ

ಮಾ.5ರಂದು ನೂತನ ಕಟ್ಟಡ ಉದ್ಘಾಟನೆ

ಮಾ.5ರಂದು ನೂತನ ಕಟ್ಟಡ ಉದ್ಘಾಟನೆ
ಜಮಖಂಡಿ ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಆಶ್ರಮದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾಕುಮಾರಿ ಸಂಸ್ಥೆ ಮ

ಲೋಕದರ್ಶನ ವರದಿ,

ಜಮಖಂಡಿ03: ನಗರದ ವಿಜಯಪೂರ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಆಶ್ರಮದಲ್ಲಿ ಮಾ.5ರಂದು ಪವಿತ್ರವನ ಆಧ್ಯಾತ್ಮಿಕ ಶಿಕ್ಷಣ ತರಬೇತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಲಂಡನ ದೇಶದ ಬ್ರಹ್ಮಾಕುಮಾರಿ ಸಂಸ್ಥೆ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ಜಯಂತಿ ಅಕ್ಕನವರು ಉದ್ಘಾಟಿಸಲಿದ್ದಾರೆ ಎಂದು ಬ್ರಹ್ಮಾಕುಮಾರಿ ಸಂಸ್ಥೆ ಮುಖ್ಯಸ್ಥೆ ಮೀರಾ ಅಕ್ಕನವರು ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಆಶ್ರಮದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸ್ವತಂತ್ರ ಭಾರತದಲ್ಲಿ ವಿಲೀನಗೊಂಡ ಪ್ರಪ್ರಥಮ ಸಂಸ್ಥಾನ ಸಹಿತ 140ಕ್ಕೂ ಹೆಚ್ಚು ದೇಶಗಳಲ್ಲಿ ಸೇವಾ ಕೇಂದ್ರವಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಆಧ್ಯಾತ್ಮಿಕ ಕ್ರಾಂತಿ ಮೂಡಿಸಿದೆ. ಹಲವು ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಜೀವನದಲ್ಲಿ ಸುಖ- ಶಾಂತಿ, ನೆಮ್ಮದಿ ಸಹಿತ ವಸುದೈವ ಕುಟುಂಬ ಸಂಸ್ಕೃತಿ ಹಾಗೂ ದೈವಿ ಸಂಸ್ಕಾರಗಳನ್ನು ಜಾಗೃತಗೊಳಿಸಲು ಪ್ರತಿನಿತ್ಯ ಉಚಿತವಾಗಿ ನೈತಿಕ, ಮೌಲ್ಯ ಹಾಗೂ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಮಾ.5ರಂದು ಬೆಳಿಗ್ಗೆ ಶೋಭಾ ಯಾತ್ರೆ, 10 ಗಂಟೆಗೆ ಪವಿತ್ರವನ ಆಧ್ಯಾತ್ಮಿಕ ಶಿಕ್ಷಣ ತರಬೇತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ. ನಗರದಲ್ಲಿ 1979ರಲ್ಲಿ ಆರಂಭಗೊಂಡ ಬ್ರಹ್ಮಕುಮಾರಿ ವಿದ್ಯಾಲಯ ಇಂದು ಎರಡು ಎಕರೆ ಪ್ರದೇಶದಲ್ಲಿ ಸುಂದರ ಕಟ್ಟಡದೊಂದಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಪಾಟೀಲ, ಮಾನಸಾ ಅಕ್ಕ, ಲಕ್ಷ್ಮಿ ಅಕ್ಕ, ಜ್ಯೋತಿ ಅಕ್ಕ, ಲತಾ ಅಕ್ಕ, ಭಾರತಿ ಅಕ್ಕ, ಸುನೀತಾ ಅಕ್ಕ, ಬಸಯ್ಯ ಭೃಂಗಿಮಠ. ನಿಲೇಶ, ಸೌಮ್ಯ ಅಕ್ಕ, ಶಿವಪ್ರಸಾದ ಸಹಿತ ಹಲವರು ಇದ್ದರು.


ಸುದ್ದಿ ಓದಿ