ಜೆ.ಸಿ.ಟಿ.ಯು ವತಿಯಿಂದ "ಜಿಲ್ಲಾ ಮಟ್ಟದ ಸಮಾವೇಶ"

ಜೆ.ಸಿ.ಟಿ.ಯು ವತಿಯಿಂದ "ಜಿಲ್ಲಾ ಮಟ್ಟದ ಸಮಾವೇಶ"

ಬಳ್ಳಾರಿ 15: ಕಾಮರ್ಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಕನಿಷ್ಟ ವೇತನ ರೂ.18,000 ಸಾವಿರ ಮಾಡಲು ಒತ್ತಾಯಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ಒತ್ತಾಯಿಸಿ ಇದೇ 8, 9ನೇ ಜನವರಿ 2019ರಂದು ಅಖಿಲ ಭಾರತ ಮುಷ್ಕರಕ್ಕೆ ಎಲ್ಲಾ ಕಾಮರ್ಿಕ ಸಂಘಟನೆಗಳು ಜಂಟಿಯಾಗಿಕರೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಶನಿವಾರ ನಗರದ ಗಾಂಧಿಭವನದಲ್ಲಿ ಜೆ.ಸಿ.ಟಿ.ಯು (ಕಾಮರ್ಿಕ ಸಂಘಟನೆಗಳ ಜಂಟಿ ಸಮಿತಿ) ವತಿಯಿಂದ ಜಿಲ್ಲಾ ಮಟ್ಟದ ಸಮಾವೇಶವನ್ನು ಮಾಡಿದರು. 

ಈ ಸಮಾವೇಶದ ಅಧ್ಯಕ್ಷತೆಯನ್ನು ಎಐಯುಟಿಯುಸಿಯ ಮುಖಂಡರಾದ ಎ.ದೇವದಾಸ್ರವರು ವಹಿಸಿಕೊಂಡಿದ್ದರು. ಎ.ಆರ್.ಎಮ್.ಇಸ್ಮಾಯಿಲ್ರವರು ಮಾತನಾಡುತ್ತಾ.., "ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ನಿರುದ್ಯೋಗ ಹೆಚ್ಚುತ್ತಿದೆ. ರೈತರು ಆತ್ಮಹತ್ಯೆ ಹೆಚ್ಚುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಎಲ್ಲಾ ಸಮಸ್ಯೆಗಳ ವಿರುದ್ಧ ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆ ನೀಡಿದರು". ಎಐಯುಟಿಯುಸಿಯ ರಾಜ್ಯ ಕಾರ್ಯದಶರ್ಿಗಳಾದ ಕಾಮ್ರೇಡ್ ಕೆ.ಸೋಮಶೇಖರ್ರವರು ಈ ಸಮಾವೇಶದಲ್ಲಿ ಮಾತನಾಡುತ್ತಾ.., "ಇಂದಿನ ಕೇಂದ್ರ ಸಕರ್ಾರಕಾಮರ್ಿಕರ ಪರವಾಗಿದ್ದ 44ಕಾಯ್ದೆಗಳನ್ನು ಕಾಮರ್ಿಕ ವಿರೋಧಿ4 ಕಾಯ್ದೆಗಳನ್ನಾಗಿ ಮಾಡುತ್ತಿದ್ದಾರೆ. ಗುತ್ತಿಗೆ ಕಾಮರ್ಿಕರು, ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಎಲ್ಲಾ ರಂಗಗಳಲ್ಲಿನ ಕಾಮರ್ಿಕರ ಸಮಸ್ಯೆಗಳು ದಿನೇ ದಿನೇ ಹೆಚ್ಚೆಚ್ಚು ತೀವ್ರಗೊಳ್ಳುತ್ತಿವೆ. ಈ ಹಲವಾರು ಸಮಸ್ಯೆಗಳನ್ನು ವಿರೋಧಿಸಿ, ಗುತ್ತಿಗೆ ಪದ್ಧತಿಯನ್ನು ಕೈಬಿಡಲು, ಕಾಮರ್ಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ 8, 9 ಜನವರಿ 2019ರಂದು ಅಖಿಲ ಭಾರತ ಮುಷ್ಕರಕ್ಕೆ ಜೆ.ಸಿ.ಟಿ.ಯು ಕರೆನೀಡಲಾಗಿದೆ. ಬಂಡವಾಳಶಾಹಿಗಳ ಸೇವೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಕಾಮರ್ಿಕರನ್ನು ಮತ್ತು ಜನರನ್ನು ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ಒಡಿಯುತ್ತಿದ್ದಾರೆ. ಇದರಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಗೆ ಯಾವುದೇ ವ್ಯತ್ಸಾಸವಿಲ್ಲ. ಇವು ಬಂಡವಾಳಿಗರ ಪರವಾಗಿರುವ ಪಕ್ಷಗಳು. ಈ ರೀತಿಯಾಗಿ ತರುತ್ತಿರುವಂತಹ ಒಂದೊಂದು ನೀತಿಗಳು ಬಂಡವಾಳ ಶಾಹಿ ಶವಪೆಟ್ಟಿಗೆಯ ಮೇಲೆ ಹೊಡೆಯುತ್ತಿರುವ ಒಂದೊಂದು ಮೊಳೆಯಂತೆ. ಇದನ್ನು ಕಾಮರ್ಿಕರು, ರೈತರು ಅರ್ಥಮಾಡಿಕೊಂಡು

ಈ ರೀತಿಯ ಹಲವಾರು ಹೋರಾಟಗಳನ್ನು ಬೆಳೆಸಬೇಕು. ಜೆಸಿಟಿಯು ವತಿಯಿಂದ ಕರೆ ನೀಡಿರುವ ಅಖಿಲ ಭಾರತ ಮುಷ್ಕರವನ್ನು ದೇಶದ ಕಾಮರ್ಿಕರು ಯಶಸ್ವಿಗೊಳಿಸಬೇಕು ಹಾಗೂ ದೇಶದರೈತ-ಕಾಮರ್ಿಕರು, ವಿದ್ಯಾಥರ್ಿ-ಯುವಕರು, ಮಹಿಳೆಯರು ಈ ಮುಷ್ಕರಕ್ಕೆ ಬೆಂಬಲಿಸಬೇಕು" ಎಂದುಕರೆ ನೀಡಿದರು. ಸಿ.ಐ.ಟಿ.ಯುನ ಜಿಲ್ಲಾ ಕಾರ್ಯದಶರ್ಿ ಜೆ.ಸತ್ಯಬಾಬುರವರು ಮಾತನಾಡುತ್ತಾ "ಈ ಅಖಿಲ ಭಾರತ ಮುಷ್ಕರವನ್ನು ಕಾಮರ್ಿಕ ಸಂಘಟನೆಗಳು ಒಚಿದಾಗಿ ಕರೆ ನೀಡಲಾಗಿದೆ. ಸುಳ್ಳು ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸಕರ್ಾರದ ಬಣ್ಣ ಇವತ್ತು ಬಯಲಾಗಿದೆ. ಇವರ ಭರವಸೆಗಳು ಹುಸಿಯಾಗಿವೆ. ಅದಕ್ಕಾಗಿ ಎಲ್ಲರೂ ಒಂದಾಗಿ ಈ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು" ಹೇಳಿದರು. ಈ ಸಮಾವೇಶದಲ್ಲಿ ಟಿ.ಜಿ.ವಿಠ್ಠಲ್, ಸಿಐಟಿಯುನ ರಾಜ್ಯ ಉಪಾಧ್ಯಕ್ಷರಾದ ಆರ್.ಎಸ್.ಬಸವರಾಜ್, ಎಐಟಿಯುಸಿಯ ಕೆ.ನಾಗಭೂಷಣ್ರಾವ್, ಐಎನ್ಟಿಯುಸಿಯ ಹನುಮಕಿಶೋರ್, ಕೆ.ಸತ್ಯನಾರಾಯಣರಾವ್, ಎಐಯುಟಿಯುಸಿಯ ಆರ್.ಸೋಮಶೇಖರ್ಗೌಡ, ಸಿ.ಐಟಿಯುನ ಆರ್.ಭಾಸ್ಕರ್ರೆಡ್ಡಿ, ಕನರ್ಾಟಕರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ಎ.ಶಾಂತಾ, ಅಂಗನವಾಡಿ ನೌಕರರ ಸಂಘದ ಉಮಾದೇವಿ, ತಿಪ್ಪಯ್ಯ, ಗಂಗೂನಾಯ್ಕ್ ಮತ್ತು ಡಿಐಒಪಿಈಎಯ ಪ್ರಧಾನಕಾರ್ಯದಶರ್ಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ