ಧಾರವಾಡ - ಹುಬ್ಬಳ್ಳಿ

ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “76ನೇ ಗಣರಾಜ್ಯೋತ್ಸವ” ಸಂಭ್ರಮ

ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “76ನೇ ಗಣರಾಜ್ಯೋತ್ಸವ” ಸಂಭ್ರಮ

ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “76ನೇ ಗಣರಾಜ್ಯೋತ್ಸವ” ಸಂಭ್ರಮ  

ಧಾರವಾಡ 26: ಡಾ. ಡಿ.ಜಿ.ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “76 ನೇಯ ಗಣರಾಜ್ಯೋತ್ಸವ” ವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಧ್ವಜಾರೋಹಣದೊಂದಿಗೆ ಆರಂಭಿಸಲಾಯಿತು.  ಧ್ವಜಾರೋಹಣವನ್ನು ಪ್ರಾಚಾರ್ಯರಾದ ಡಾ.ಡಿ.ಜಿ ಶೆಟ್ಟಿ ಇವರು ನೆರವೇರಿಸಿ ಸ್ವಾತಂತ್ರ್ಯದ ನಂತರ ದೇಶಕ್ಕೊಂದು ಸಂವಿಧಾನ ರಚನೆಯ ಸಮಿತಿಯ ಅಗತ್ಯತೆಯನ್ನು ಮನಗಂಡು ನಮ್ಮ ದೇಶದ ಹಿರಿಯ ಮುತ್ಸದಿಗಳ ಪರಿಶ್ರಮದಿಂದ ಸಂವಿಧಾನ ರಚನೆ ಮಾಡಿ ಒಂದು ರಾಷ್ಟ್ರ ಒಂದು ಸಂವಿಧಾನ ಎಂಬ ಭಾವನೆ ಮೂಡಿಸಿ ಒಂದೇ ಆಡಳಿತಕ್ಕೆ ಬದ್ದರಾಗುವಂತೆ ಮಾಡಿದ ಈ ಮಹಾನ ದಿನ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಸ್ವಾತಂತ್ರ್ಯಕ್ಕಾಗಿ ದುಡಿದ, ಬಲಿದಾನ ಮಾಡಿರುವ ಅನೇಕ ಮಹನೀಯರ ಜೀವನಗಾಥೆಯು ನಮಗೆ ಆದರ್ಶಪ್ರಾಯವಾಗಿವೆ. ಅದನ್ನು ಉಳಿಸಿ, ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ನಾವು ನೀವೆಲ್ಲ ಶ್ರಮಿಸೋಣ ಎಂದರು. 

         ನಮ್ಮ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ.ಎಸ್‌.ಎಮ್‌.ಸಾಲಿಮಠ ಇವರು ಮಾತನಾಡಿ ಸಾಮಾಜಿಕ ಜನಜೀವನ ಸಾಕಷ್ಟು ಬದಲಾವಣೆ ಹೊಂದಿದೆ. ಮನುಷ್ಯನು ವೈಜ್ಞಾನಿಕವಾಗಿ ಏನೆಲ್ಲಾ ಸಾಧನೆ ಮಾಡಿದ್ದಾನೆ. ಇದೇ ರೀತಿ ಮನುಷ್ಯನ ಅನಿಸಿಕೆಗಳು, ವಿಚಾರಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ನಮ್ಮತನವನ್ನು ಪ್ರಕಟಗೊಳಿಸುವ ಚಾಣಾಕ್ಷತೆಯನ್ನು ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ. ಅದರೊಟ್ಟಿಗೆ ನಮ್ಮ ಕರ್ತವ್ಯಗಳನ್ನು ನಾವು ಪಾಲಿಸುವುದು ಇಂದಿನ ದಿನಗಳಲ್ಲಿ ಮಹತ್ವವನ್ನು ಪಡೆಯುತ್ತಿದೆ.  

ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ, ಶ್ರದ್ಧಾ ಪೂರ್ವಕವಾಗಿ, ಹಾಗೂ ಗುರಿಸಾಧಿಸುವ ನಿಟ್ಟಿನಲ್ಲಿ  ಸೇವೆಸಲ್ಲಿಸುವುದು ಮುಖ್ಯವಾಗಿದೆ. ಈ ಮೂಲಕ ನಾವು ನಿಜವಾಗಿಯೂ ನಮ್ಮ ದೇಶಪ್ರೇಮವನ್ನು ಮತ್ತು ಸ್ವಾತಂತ್ರ್ಯಕ್ಕೆ ಕೊಡುವ ಅಭಿಮಾನದ ಉಡುಗೊರೆ.  

ಉಪನ್ಯಾಸಕರಾದ ಪ್ರೋ.ಜಿ.ಎ.ಯಲಿಗಾರ ನಿರೂಪಿಸಿ ವಂದಿಸಿದರು. ಉಪನ್ಯಾಸಕರಾದ  ಸುವರ್ಣಲತಾ ಹೆಗಡಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು. 


ಸುದ್ದಿ ಓದಿ