ಜಮಖಂಡಿ

ಜೀವನದ ಪಾಠ ಭೋದಿಸಿದ ಗುರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು: ಚಿದಾನಂದ ಸಿದ್ಧಾಪೂರಮಠ

ಜೀವನದ ಪಾಠ ಭೋದಿಸಿದ ಗುರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು: ಚಿದಾನಂದ ಸಿದ್ಧಾಪೂರಮಠ

ಜಮಖಂಡಿ 25: ತಪ್ಪುಮಾಡಿದಾಗ ಶಿಕ್ಷಿಸಿ, ತಿದ್ದಿ ಬುದ್ಧಿ ಹೇಳಿ ಜೀವನದ ಪಾಠವನ್ನು ಭೋಧನೆ ಮಾಡಿದ ಗುರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ರೋಟರಿ ಸಹಾಯಕ ಗವರ್ನರ್ ಚಿದಾನಂದ ಸಿದ್ಧಾಪೂರಮಠ ಹೇಳಿದರು. 

ನಗರದ ರೋಟರಿ ಸಭಾ ಭವನದಲ್ಲಿ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಣೆ ಮಾಡಿ ಮಾತನಾಡಿದರು. 

ಶಿಕ್ಷಕರಾದ ಶಂಕರ ಲಮಾಣಿ, ಸರಿತಾ ಶಿರಗುಪ್ಪಿ, ಭಾರತಿ ಮುದೇನವರ ಮೂವರನ್ನು ಸನ್ಮಾನಿಸಲಾಯಿತು, 

ವೇದಿಕೆ ಮೇಲೆ ರೋಟರಿ ಸಂಸ್ಥೆಯ ಅಧ್ಯಕ್ಷ ರವೀಂದ್ರ ಗವಳಿ, ಕಾರ್ಯದರ್ಶಿ ಬಸವರಾಜ ಆಲಗೂರ, ಚಂದ್ರಗುಪ್ತ ಬೆಳಗಲಿ, ಶ್ರೀಶೈಲ ತೇಲಿ, ಪ್ರವೀಣ ಜಾಡ್, ಸಂಗನಗೌಡ ಬಿರಾದಾರ, ಗೋಪಾಲಕೃಷ್ಣ ಪ್ರಭು, ಸುಭಾಸ ಕಾಶಿದ, ಪ್ರಕಾಶ ಗೌಡರ, ಶ್ರೀಶೈಲ ಮೋದಿ, ರಮೇಶ ಪತ್ತಾರ, ಸಮೀರ ಕಂಗನೊಳ್ಳಿ, ರಾಜಶೇಖರ ಕೋವಳ್ಳಿ,  ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ