ಜಮಖಂಡಿ

ಕಾಂಗ್ರೇಸ್ ಸರಕಾರ ಜನತೆಗೆ ವಿದ್ಯುತ್ ನೀಡದೆ ರಾಜ್ಯ ಕತ್ತಲಲ್ಲಿ ಇದೆ

ಕಾಂಗ್ರೇಸ್ ಸರಕಾರ ಜನತೆಗೆ ವಿದ್ಯುತ್ ನೀಡದೆ ರಾಜ್ಯ ಕತ್ತಲಲ್ಲಿ ಇದೆ

ಜಮಖಂಡಿ : 10-2 : ಗ್ರೇಸ್ ಸರಕಾರ ರಾಜ್ಯದ ಜನತೆಗೆ ಸರಿಯಾಗಿ ವಿದ್ಯುತ್ ನೀಡದೆ. ಸರಕಾರ ರಾಜ್ಯ ಕತ್ತಲಲ್ಲಿ ಇದೆ. ಮನೆಗಳ ವಿದ್ಯುತ್ ಕಟ್ಟ್‌ ಮಾಡುತ್ತಿದ್ದಾರೆ. ಇವರಿಗೆ ಉದ್ಯುತ್ ಉತ್ಪಾದನೆ ಮಾಡುವ ತಾಕತ್ತು ಇಲ್ಲ. ಕಲ್ಲಿದ್ದಲು ಖರೀದಿಸಲು ಆಗುತ್ತಿಲ್ಲ. ಹತ್ತು ಕೆಜಿ,ಅಕ್ಕಿ ವಿತರಣೆಯ ಮಾಡುತ್ತೇವೆಂದು ಘೋಷಣೆ ಮಾಡಿದವರ ಅಕ್ಕಿ ಎಲ್ಲಿದೆ. ಗ್ಯಾರೇಂಟಿಯಲ್ಲಿ ಬಾರಿ ಕಳ್ಳತನ ನಡೆಯುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. 

ನಗರದ ಶಾಸಕ ಗೃಹ ಕಚೇರಿ ಆವರಣದಲ್ಲಿ ನಡೆದ ಬಿಜೆಪಿ ಪಕ್ಷದ ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶ ಹಾಗೂ ವೈಚಾರಿಕ ಸಂಘೋಷ್ಠಿ ಕಾರ್ಯಕ್ರಮದಲ್ಲಿ  ಶ್ಯಾಮ ಪ್ರಸಾದ ಮುಖರ್ಜಿ, ಭಾರತಮಾತೆ, ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ಕುಂದಗೊಳ ತಾಲೂಕಿನ ಕಮದಳ್ಳಿಯು ಜಮಖಂಡಿ ಸಂಸ್ಥಾನಕ್ಕೆ ಸೇರಿದು ಆಗಿತ್ತು. ಅದಕ್ಕಾಗಿ ಜಮಖಂಡಿಗೂ ನನಗೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸೇರಿರು ಜನರನ್ನು ನೋಡಿದರೆ ಭರವಸೆ ನೆನಪುಗಳು ಬರುತ್ತಿವೆ. ಒಂದು ಚುನಾವಣೆಯಿಂದ ಸೋಲಿನಿಂದ ದತ್ತಿಗೆಡುವುದಿಲ್ಲ. ಸೋಲಿನಿಂದ ಕುಗ್ಗಲ್ಲ. ಮತ್ತೆ ಗೆಲುವನ್ನು ಸಾಧಿಸುವ ಗುರಿಯನ್ನು ಹೊಂದಿದ್ದೆವೆ. ಕೇಂದ್ರ ಸರಕಾರ ಪ್ರಾಥಮಿಕ ಶಿಕ್ಷಣದಲ್ಲಿ ಸರ್ವಶಿಕ್ಷಣ ಅಭಿಯಾನದಿಂದ ಶಿಕ್ಷಣ ಕೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ರಾಜ್ಯದಲ್ಲಿ ರಸ್ತೆಗಳ ಸುಧಾರಣೆ. ರಾಜ್ಯ ಹೆದ್ದಾರಿಗಳ ಕಾಮಗಾರಿಗಳು ಸುರಕ್ಷಿತವಾಗಿ ಕೆಲಸ ನಡೆಯುತ್ತಿರುವುದು ಪ್ರಧಾನಿ ಅವರಿಂದ ಮಾತ್ರ ಸಾಧ್ಯವಾಗಿದೆ. ಪ್ರಧಾನಿ ಮಂತ್ರಿ ಅವಾಜ ಯೋಜನೆ, ಜಲಜೀವನ ಯೋಜನೆಯಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಮಾತ್ರ ತಲುಪಿತ್ತು. ಆದರೆ ಇಂದು 30 ಲಕ್ಷಕ್ಕೂ ಅಧಿಕವಾಗಿ ಕುಡಿಯುವ ನೀರಿಣ ಯೋಜನೆ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರಿನ ಸಂಪರ್ಕ ನೀಡುವ ಧೈರ್ಯ ಯಾರಿಂದಲು ಸಾಧ್ಯವಾಗಿಲ್ಲ. ದೇಶದ ಪ್ರಧಾನಿ ಅವರಿಂದ ಮಾತ್ರ ಸಾಧ್ಯವಾಗಿದೆ. 130 ಕೋಟಿ ಜನರಿಗೆ ಕರೋನಾ ವ್ಯಾಕ್ಸಿನೇಷನ್ ನೀಡಿದರಿಂದ ದೇಶದ ಜನರಿಗೆ ಬದುಕಿನ ಗ್ಯಾರೇಂಟಿಯನ್ನು ನೀಡಿದ್ದು ಮೋದೀಜೀಯವರು ಎಂದರು. 

ಮುದ್ರಾ ಯೋಜನೆ, ಕಿಸಾನ ಯೋಜನೆಯಲ್ಲಿ ನಮ್ಮ ಸರಕಾರ 6 ಸಾವಿರ ನೀಡಿತ್ತು. ಇವಾಗ ಕಾಂಗ್ರೇಸ್ ಸರಕಾರ 4 ಸಾವಿರ ಕಡಿಮೆ ಮಾಡಿದ್ದು ನೋಡಿದರೆ ಇದು ರೈತ ವಿರೋಧಿ ಸರಕಾರವಾಗಿದೆ. ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡುವದನ್ನು ನಿಲ್ಲಿಸಿದ್ದಾರೆ. ರೈತರಿಗೆ ಬೀಜ, ಗೊಬ್ಬರಕ್ಕಾಗಿ ಸಾವಿರಾರು ಕೋಟಿ ಅನುದಾನ ಮೀಸಲು ಇಟ್ಟಿದೇವು. ರೈತರ ಬೆಳೆಗಳಿಗೆ  180 ಕೋಟಿ ಇನ್ಸೂರೇನ್ಸ್‌ ನೀಡಿದ್ದೇವು. ಅದನ್ನು ಸಹ ನೀಡುತ್ತಿಲ್ಲಿ. ಕೃಷ್ಣಾ ಮೇಲ್ದಂಡೆ ಯೋಜನೆ ರೈತರು ಭೂಮಿ ಕಳೆದುಕೊಂಡವರಿಗೆ ದರ ನಿಗಧಿ ಮಾಡಿದ್ದೇವು. ರೈತರಿಗೆ ಚೆಕ್ ವಿತರಣೆ ಮಾಡಿದ್ದೇವು. ಏತನೀರಾವರಿ ಯೋಜನೆಯ ಬಗ್ಗೆ ಸದನದಲ್ಲಿ ಪ್ರಸ್ತಾವಣೆ ಮಡಲಾಗಿತ್ತು ಹೀಗೆ ಹಲವಾರು ಯೋಜನೆಗಳನ್ನು ನಮ್ಮ ಸರಕಾರದಲ್ಲಿ ನೀಡಿದ್ದು. ಆದರೆ ಇಂದಿನ ಸಿದ್ದರಾಮಯ್ಯ ಸರಕಾರ ಯಾವುದು ಕೆಲಸ ಮಾಡುತ್ತಿಲ್ಲ. ಅವರಿಗೆ ರಾಜ್ಯದ ಜನತೆಗೆ ಇಚ್ಛಾಶಕ್ತಿ ಇಲ್ಲ ಎಂದು ಲೇವಡಿ ಮಾಡಿದರು.  

ರಾಜ್ಯದ ರೈತರಿಗೆ 4 ಸಾವಿರ ಕೋಟಿ ಅನುದಾನ ನೀಡಿದ್ದೇವು. ಆದರೆ ಕಾಂಗ್ರೇಸ್ ಸರಕಾರ ಬರ ಪರಿಹಾರ ರೈತರಿಗೆ ನೀಡಿಲ್ಲ. ಇವಾಗ ಬರಗಾಲ ಘೋಷಣೆ ಮಾಡುತ್ತಿದ್ದಾರೆ. ಇವರು ಕೇಂದ್ರದ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ತಮ್ಮಗೆ ಕುಣಿಲಿಕ್ಕೆ ಬರಲಿಲ್ಲ ಎಂದರೆ ನೆಲ ಡೊಂಗು ಎಂಬಂತಾಗಿದೆ ಇವರ ಪರಿಸ್ಥಿತಿ. ರಾಜ್ಯ ಆರ್ಥಿಕವಾಗಿ ಹಿನ್ನಡೆ ಇದೆ. ರಸ್ತೆಗಳ ಗುಂಡಿ ತುಂಬಲ್ಲಿಕ್ಕೆ ಇವರಲ್ಲಿ ಹಣವಿಲ್ಲ. ವಿದ್ಯುತ್ ಉತ್ಪಾದನೆ ಮಾಡಲಿಕ್ಕೆ ಸಾಧ್ಯವಿಲ್ಲ. ಕಲ್ಲಿದ್ದಲು ಖರೀದೀಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಇವರು ಒಡೆದಾಳುವ ಸರಕಾರವಾಗಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೇಸ್ ಕಿತ್ತು ಹಾಕಿ ಮತ್ತೇ ಪ್ರಧಾನಿ ಮೋದಿಜಿಯವರನ್ನು ಆಯ್ಕೆ ಮಾಡುವ ಗುರಿಯನ್ನು ಎಲ್ಲರೂ ಹೊಂದಬೇಕಾಗಿದೆ ಎಂದರು.  

ಮಾಜಿ ಸಚಿವ ಎಸ್, ಸುರೇಶಕುಮಾರ ಮಾತನಾಡಿ, 1984ರಲ್ಲಿ ಕೇವಲ 2 ಸೀಟ್ಟು ಮಾತ್ರ ಗೆಲವು ಸಾಧಿಸಿತು. ಅಟ್ಟಲ್ ಜೀ ಅವರು ಅಂದಿನ ದಿನಗಳಲ್ಲಿ ಸೋಲನ್ನು ಅನುಭವಿಸಿದರು. ಆದರೆ ಧೈರ್ಯ ಮುಖ್ಯವಾಗಿದೆ. ಇಂದು ಅತ್ಯಂತ ದೊಡ್ಡ ಪಕ್ಷವಾಗಿ ಬೆಳದು ನಿಂತಿರುವ ಶ್ರೇಯಸು ಪಕ್ಷದ ಕಾರ್ಯಕರ್ತರ ಫಲದಿಂದ   ದೊಡ್ಡ ಪಕ್ಷವಾಗಿದೆ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಕಾಂಗ್ರೆಸ್ ಸಂಸ್ಥಾಪಣೆ ಮಾಡಿದವರ ಪೋಟೋ ಪೂಜಿಸಲು ಯಾರು ಎಂಬುವುದು ಗೊತ್ತಿಲ್ಲ ಅವರಿಗೆ. ಆದರೆ ಬಿಜೆಪಿ ಪಕ್ಷದಲ್ಲಿ ಸಂಸ್ಥಾಪಕ ಶ್ಯಾಮಪ್ರಸಾದ ಮುಖ್ಯರ್ಜಿ ಅವರು ಪೋಟೋ ಇಟ್ಟು ಪೂಜಿಸಲಾಗುತ್ತದೆ. ಅಯೋದ್ಯದಲ್ಲಿ ರಾಮಮಂದಿರ ಉದ್ಘಾಟನೆ ಆಗಲಿದೆ. ಸರ್ವಸ್ಪರ್ಶಿ. ಸರ್ವವ್ಯಕ್ತಿ ಎಂದು ಜಾರಿಗೆ ತಂದಿರುವ ಪಕ್ಷ ಬಿಜೆಪಿಯಾಗಿದೆ. ಇಂದಿನ ರಾಜ್ಯ ಸರಕಾರ ಜನವಿರೋಧಿ ಸರಕಾರವಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ. ಬರುವ ಚುನಾವಣೆಯಲ್ಲಿ ಜಮಖಂಡಿ ಮತಕ್ಷೇತ್ರದಿಂದ ಮೂರು ಪಟ್ಟು ಮತಗಳನ್ನು ನೀಡಿದರೆ ಮಾತ್ರ ಬಿಜೆಪಿ ಜಿಲ್ಲೆಯಿಂದ ಗೆಲವು ಸಾಧಿಸಲು ಸಾಧ್ಯ ಎಂದರು.   

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಶ್ರೀಕಾಂತ ಕುಲಕರ್ಣಿ ಅವರ ಸೋಲಿನ ಸೆಡನ್ನು ತೀರಿಸಿಕೊಂಡಿದ್ದಿರಿ ಎಂದು ಭಾವಿಸಿದೆ.  

ಅಖಂಡ ಜಿಲ್ಲೆಯ ಇರುವಾಗ ಪೂರ್ಣ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಅನುದಾನವನ್ನು ನೀಡಿದವರು ಯಾರಾದರೂ ಇದ್ದರೆ ಬಸವರಾಜ ಬೊಮ್ಮಯಿ ಅವರ ಸರಕಾರ. 2365 ಕೋಟಿ ಅನುದಾನ ನೀಡಿದು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ನೀಡಲಾಗಿತ್ತು. ಸಿದ್ದರಾಮಯ್ಯ ಸರಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಇವರು ಅನಾಥವಾಗಿದ್ದಾಗ ಮರು ಜೀವ ನೀಡಿದು ಜಿಲ್ಲೆಯ ಜನತೆ ಹಾಗೂ ಬದಾಮಿ ಜನತೆ ನೀಡಿದ್ದೇವೆ. ಅಧಿಕಾರ ಬಂದ ಮೇಲೆ ಎಲ್ಲ ಮರೆಯುತ್ತಿದ್ದಾರೆ. ಆಡಳಿತ ಕಡೆ ಮತ್ತು ರಾಜ್ಯದ ಜನರ ಕಡೆ ಗಮನಹರಿಸುತ್ತಿಲ್ಲ. ಲಿಂಗಾಯತರಿಗೆ ಸಿಕ್ಕ ಸ್ಥಾನ ಮಾನ ಕಾಂಗ್ರೆಸ್‌ನಲ್ಲಿ ಕವಡೆ ಕಾಸಿನ ಕಿಮತ್ತು ಇಲ್ಲದಂತಾಗಿದೆ. ಶ್ಯಾಮನೂರ ಶಿವಶಂಕರನವರನ್ನು ಕಡೆಗಣಿಸಿ ಮೂರನೇ ಸ್ಥಾನದಲ್ಲಿ ಇಟ್ಟಿದ್ದಾರೆ. ರೈತರಿಗೆ ವಿದ್ಯುತ್ ನೀಡಲು ಆಗುತ್ತಿಲ್ಲ. ನಿರಂತರ ಜೋತಿ ಸಹ ಇಲದಂತದಾಗಿದೆ. ಇದೊಂದು ಕೆಟ್ಟ ಸರಕಾರವಾಗಿದೆ. ರೈತ ವಿರೋಧಿ ಸರಕಾರ. ಜನ ವಿರೋಧಿ ಸರಕಾರವಾಗಿದೆಂದು ಆರೋಪಿಸಿದರು. 

ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ತೇರದಾಳ ಶಾಸಕ ಸಿದ್ದು ಸವದಿ, ಜಿ, ವೆಂಕಟೇಶ ಮಲ್ಲಿಪುರಂ ಮಾತನಾಡಿದರು. 

ವಿಪ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲ, ಚಂದ್ರಶೇಖರ ಕವಟ್ಟಗಿ, ಬಸವರಾಜ ಯಂಕಚಿ, ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ, ಡಾ,ವಿಜಯಲಕ್ಷ್ಮಿ ತುಂಗಳ, ವಿಜಯಲಕ್ಷ್ಮಿ ಉಕಮಾನಾಳ, ಪ್ರಕಾಶ ಕಾಳೆ, ಉಮೇಶ ಮಹಾಬಳಶೆಟ್ಟಿ, ಕಾಡು ಮಾಳಿ, ಅಜೇಯ ಕಡಪಟ್ಟಿ, ಮಾದೇವ ನ್ಯಾಮಗೌಡ, ನಾಗಪ್ಪ ಸನದಿ, ಬಸವರಾಜ ಕಲೂತಿ,ಪ್ರಕಾಶ ಅಕ್ಕಲಕೋಟ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು. ಮಲ್ಲು ಉಟ್ಟಗಿ ನಿರೂಪಿಸಿದರು, ಪರುಶರಾಮ ಬಿಸನಾಳ ಸ್ವಾಗತಿಸಿದರು, ಶ್ರೇಯಾ ಮತ್ತು ಭಾವನಾ ಭರತನಾಟ್ಯವನ್ನು ಮಾಡಿದರು. ಗೀತಾ ಸೂರ್ಯವಂಶಿ ವಂದಿಸಿದರು. 


ಸುದ್ದಿ ಓದಿ