ನೇಣುಬಿಗಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಜಮಖಂಡಿ 18 : ತಾಲ್ಲೂಕಿನ ತೊದಲಬಾಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನು ನೇಣುಬಿಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ನಡೆದಿದೆ. ಚಿಕ್ಕಪಡಸಲಗಿ ಗ್ರಾಮದ ಹಣಮಂತ ರಂಗಪ್ಪ ಘಟನೆ (22) ಸಾವನ್ನಪ್ಪಿದ ದುರ್ದೈವಿ.
ನೀಲಗಿರಿ ಮರದ ಟೊಪ್ಪಿಗೆ ನೇಣು ಬಿಗಿದ್ದ ಸ್ಥಿತಿಯಲ್ಲಿ ಶವದ ಮುಂದೆ ಮೋಟರ್ ಬೈಕ್ ನಿಂತಿದ್ದು. ಇದೊಂದು ಮೇಲ್ನೋಟಕ್ಕೆ ಕೊಲೆ ಎಂದು ಶಂಕಿಸಲಾಗಿದ್ದು. ಘಟನಾ ಸ್ಥಳಕ್ಕೆ ಡಿಎಸ್ ಪಿ. ಶಾಂತವೀರ ಈ. ಸಿಪಿಐ ಮಲ್ಲಪ್ಪ ಮಡ್ಡಿ. ಸಾವಳಗಿ ಠಾಣಿಯ ಪಿಎಸ್ ಐ. ಗಂಗಾಧರ ಪೂಜಾರಿ ಹಾಗೂ ಶ್ವಾನದಳ ಆಗಮಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.