ಜಮಖಂಡಿ

‘ಮೌಲಾನಾಅಬ್ದುಲ್ ಕಲಾಂ ಆಜಾದ್‌ರ ಜೀವನ ಜ್ಞಾನಾಭಿಲಾಷೆಯ ನಿದರ್ಶನ’

‘ಮೌಲಾನಾಅಬ್ದುಲ್ ಕಲಾಂ ಆಜಾದ್‌ರ ಜೀವನ ಜ್ಞಾನಾಭಿಲಾಷೆಯ ನಿದರ್ಶನ’

ಲೋಕದರ್ಶನ ವರದಿ 

ಜಮಖಂಡಿ 14: ಮೌಲಾನಾಅಬ್ದುಲ್ ಕಲಾಂ ಆಜಾದ್‌ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು ಕೇವಲ ರಾಜಕೀಯ ನಾಯಕನಷ್ಟೇ ಅಲ್ಲ, ಮಹಾನ ಚಿಂತಕ, ಶಿಕ್ಷಣ ತಜ್ಞ ಮತ್ತು ಸಾಮಾಜ ಸುಧಾರಕರಾಗಿದ್ದರು. ಅವರ ಜೀವನ ದೇಶ ಭಕ್ತಿಯ, ತ್ಯಾಗದ ಮತ್ತು ಜ್ಞಾನಾಭಿಲಾಷೆಯ ನಿದರ್ಶನವಾಗಿದೆ ಎಂದು ರಾಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಬಂದೇನವಾಜ ಕೊರಬು ಹೇಳಿದರು.  

ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸಾಂಸ್ಕೃತಿಕ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಹಯೋಗದಲ್ಲಿ ಸ್ವಾತಂತ್ಯ್ರ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಬಾಲ್ಯದಿಂದಲೇ ಧಾರ್ಮಿಕ ಅಧ್ಯಯನದ ಜೊತೆಗೆ ಆಧುನಿಕ ಶಿಕ್ಷಣದ ಮಹತ್ವವನ್ನುಅರಿತುಕೊಂಡ ಅವರು ಶಿಕ್ಷಣವನ್ನು ರಾಷ್ಟ್ರದ ಪ್ರಗತಿಯ ಮೂಲ ಶಕ್ತಿಯೆಂದು ಪರಿಗಣಿಸಿದರು. ಅವರು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದು, ಸ್ವತಂತ್ರ ಭಾರತದ ಶಿಕ್ಷಣ ನೀತಿಯ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರಕಾಲದಲ್ಲೇಯು ನೆಸ್ಕೋ ಸದಸ್ಯತ್ವ, ಸಾಂಸ್ಕೃತಿಕ ಸಂಸ್ಥೆಗಳ ಸ್ಥಾಪನೆ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಪ್ರಾರಂಭಗೊಂಡವು. ಆಜಾದ್ ಅವರ ಜೀವನಚರಿತ್ರೆ ನಮಗೆ ಪ್ರೇರಣೆಯಾಗಿದೆ ಎಂದರು. 

ಪ್ರಾಧ್ಯಾಪಕ ಆರ್‌.ಎಸ್ ಜಾಧವ, ಡಾ. ವಿ. ಆರ್‌. ದಳವಾಯಿ, ಪ್ರಾಂಶುಪಾಲೆ ಡಾ. ಸುನಂದಾ.ಎಸ್‌. ಶಿರೂರ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಆರ್‌. ಎಚ್‌. ಹಳ್ಳಿ, ಡಾ. ಬಿ. ಎನ್‌. ಜಾಧವ, ಡಾ. ಎ. ವಾಯ್‌. ಕಾಂಬಳೆ, ಎಸ್‌. ಕೆ. ಡೇಂಬರೆ, ಡಾ. ಎಸ್‌. ಎಸ್‌. ಸಿದ್ದಾಪೂರ, ಡಾ. ಎಸ್‌. ಎನ್‌. ಮಣಕವಾಡ, ವಾಯ್‌. ಎ. ಗದಾಡಿ, ಡಾ. ಮಹೇಶ ಮಠದ, ತೀರ್ಥೇಶ್‌ಎಸ್‌. ಎನ್, ವೆಂಕಟೇಶ ಕುಲಕರ್ಣಿ, ಎಸ್‌. ಎಮ್‌. ಗುಡಿ, ಸಂತೋಷ ಯಡಹಳ್ಳಿ, ಅವಟಿ ಹಾಗೂ ವಿದ್ಯಾರ್ಥಿಗಳಿದ್ದರು. 


ಸುದ್ದಿ ಓದಿ