'ಮಹಾತ್ಮರ ಸೇವೆಯಲ್ಲಿ ಭಕ್ತಿನಿಷ್ಠೆ ಅವಶ್ಯಕ'
ಲೋಕದರ್ಶನ ವರದಿ
ಚಡಚಣ 29 : ನಾವು ಮಾಡುವ ಮಹಾತ್ಮರ ಸೇವೆಯು ಏಕಚಿತ್ತದಿಂದ ಕೂಡಿ ಅದರಲ್ಲಿ ಭಕ್ತಿಯು ನಿಷ್ಠೆಯು ಕೂಡಿರಬೇಕು. ಅಂದಾಗ ನಾವು ಮಾಡಿದ ಸೇವೆ ಸಾರ್ಥಕವಾಗುವದು. ದೇವರ ಪ್ರತಿರೂಪರಾದ ಸತ್ಯಸಾಯಿಬಾಬಾರವರು ಪ್ರವಚನ ಪಟುಗಳು. ಅವರ ಪ್ರವಚನವನ್ನು ಕೇಳಿ ದೇಶವಿದೇಶಗಳಲ್ಲಿಯ ಭಕ್ತಾದಿಗಳು ಪರಿವರ್ತನ ಹೊಂದಿ ಸಮಾಜಕ್ಕಾಗಿ ದಾನಧರ್ಮಗಳನ್ನು ಮಾಡುತ್ತಾ ಅದರ ಮೂಲಕ ಸಾವಿರಾರು ಭಿಕ್ಷುಕರನ್ನು, ಬಡವರನ್ನು ಸ್ವಯಂ ಉದ್ಯೋಗಿಗಳನ್ನಾಗಿಸಿ, ಅವರ ಬಾಳನ್ನು ಬೆಳಗಿಸಿದ ಸಾಕಷ್ಟು ಉದಾಹರಣೆಗಳಿವೆ. ಇವರಂತೆ ನಾವೆಲ್ಲರೂ ದಾನ ಮಾಡುವ ಪ್ರವೃತ್ತಿಯನ್ನು ಹೊಂದಬೇಕು. ಹೃದಯ ಮನಸ್ಸು ಶುದ್ದಿಯಿಂದ ಮಾಡಿದ ಕಾರ್ಯ ಯಾವಾಗಲೂ ಸತ್ಕಾರ್ಯವಾಗಿರುತ್ತದೆ ಎಂದು ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಎಸ್.ದೇಸಾಯಿಯವರು ಹೇಳಿದರು.
ಅವರು ಪಟ್ಟಣದ ಸಾಯಿಬಾಬಾ ಭಕ್ತರಾದ ಅಶೋಕ ಆರ್.ಕುಲಕಣರ್ಿ ಇವರ ನಿವಾಸದಲ್ಲಿ ಜರುಗಿದ ಸತ್ಯಸಾಯಿಬಾಬಾ 93 ನೇಯ ಜಯಂತಿಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಪ್ರಾರಂಭದಲ್ಲಿ ವೀಣಾ ಎ ಕುಲಕಣರ್ಿಯವರು ಸ್ವಾಗತಗೀತೆ ಹಾಡಿದರು. ಪ್ರೊ.ಮನೋಜ ಕಟಗೇರಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಆರ್.ಪಿ.ಬಗಲಿ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶ್ರೀದೇವಿ ಅಕ್ಕನವರು ಹಾಗೂ ಯೋಗಾನಂದ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ನಿವೃತ್ ಪ್ರಾಚಾರ್ಯ ಎಸ್.ಎಮ್.ಚೋಳಖೆ ಮಾತನಾಡಿ, ಯಾವ ಭೇದವಿಲ್ಲದೇ ಎಲ್ಲರನ್ನೂ ಪ್ರೀತಿಸು ಎಲ್ಲರ ಸೇವೆ ಮಾಡು ಅಂದಾಗ ನಿಮಗೆ ಮೋಕ್ಷ ಎಂದು ಇದು ಸಾಯಿಬಾಬಾ ತತ್ವ ಎಂದು ಹೇಳಿದರು.
ಶ್ರೀದೇವಿ ಅಕ್ಕನವರು ಮಾತನಾಡಿ, ಮಾನವನಿಗೆ ಸತ್ಸಂಗ ಅವಶ್ಯ. ಸತ್ಸಂಗದಿಂದ ಮೋಕ್ಷ ದಾರಿ ಸಿಗುತ್ತದೆ ಯಾವಾಗಲೂ ನಾವು ಸತ್ಸಂಗದಲ್ಲಿ ತೊಡಗಬೇಕೆಂದು ಹೇಳಿದರು. ಇದಕ್ಕಿಂತ ಮೊದಲು ಪಟ್ಟಣದ ಆಸ್ಪತ್ರೆಗಳಲ್ಲಿ ಜಯಂತಿಯ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಬಾಬಾ ಅವರ ಭಕ್ತರಾದ ಎ.ಆರ್.ಕುಲಕಣರ್ಿ ಹಾಗೂ ಕುಟುಂಬ, ವ್ಹಿ.ಜಿ.ಮುತ್ತೀನ, ಎಸ್.ಕೆ. ಕುಲಕಣರ್ಿ, ಆರ್.ಪಿ.ಬಗಲಿ, ಚಂದ್ರೇಶಖರ ನಿರಾಳೆ, ರವೀಂದ್ರ ತೋಳನೂರ, ಚಂದ್ರಶೇಖರ ಕಾಮಗೊಂಡ, ಎಮ್.ಎಸ್.ಅಚ್ಚಿಗಾಂವ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ನಂತರ ಮಹಾಪ್ರಸಾದ ಜರುಗಿತು.ಶಿಕ್ಷಕ ರಮೇಶ ಮಲ್ಲಾಡಿ ವಂದಿಸಿದರು. ಈ ಕಾರ್ಯಕ್ರಮವನ್ನು ಅಶೋಕ ಕುಲಕಣರ್ಿ ಪರಿವಾರದವರು ಆಯೋಜಿಸಿದ್ದರು.