ಚಾದ್ನ್

ಡೆಂಗ್ಯೂ ಜ್ವರದ ಬಗ್ಗೆ ಜನಜಾಗೃತಿ ಅಭಿಯಾನ

ಡೆಂಗ್ಯೂ ಜ್ವರದ ಬಗ್ಗೆ ಜನಜಾಗೃತಿ ಅಭಿಯಾನ

ಧಾರವಾಡ 26: ಸಾಲಗಟ್ಟಿ ಚಾಳ ಮರಾಠಾ ಕಾಲೋನಿ ಧಾರವಾಡದಲ್ಲಿ ಕಾರ​‍್ೋರೇಟರ್ ವಲಯ ಅಧಿಕಾರಿಗಳ ಸಹಯೋಗದೊಂದಿಗೆ ಡೆಂಗ್ಯೂ ಜ್ವರದ ಬಗ್ಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮ ದಿ.26ರಂದು ಮಾಡಲಾಯಿತು.  

ನಂತರ, ಪ್ರತಿ ಮನೆಗೆ ಹೋಗಿ ಲಾರ್ವಾ ಸಮೀಕ್ಷೆ ಮತ್ತು ಡೆಂಗ್ಯೂ ಜ್ವರದ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಹೊರಾಂಗಣದಲ್ಲಿ ಇದ್ದಂತಹ ತೆಂಗಿನ ಚಿಪ್ಪು, ಟೈರ್ ಮತ್ತು ಒಡೆದ ಕೊಡ, ಬಕೆಟ್ ವಿಲೇವಾರಿ ಮಾಡಿಸಲಾಯಿತು. ನಂತರ ಸಿಮೆಂಟ್, ಬ್ಯಾರಲ್ ಡ್ರಮ್‌ಗಳನ್ನು ಪರೀಶೀಲಿಸಿ ಜನರಿಗೆ ಡೆಂಗ್ಯೂ ಜ್ವರ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಅತಿಯಾದ ಜ್ವರ, ತಲೆನೋವು, ಕಣ್ಣಿನ ಹಿಂಭಾಗ ನೋವು ಮತ್ತು ಮೈಕೈ ನೋವು ಕಾಣಿಸಿಕೊಂಡರೆ ಕೂಡಲೇ ವೈಧ್ಯರನ್ನು ಸಂಪರ್ಕಿಸಿ ಮತ್ತು ಮನೆಯಲ್ಲಿ ಹಗಲುಹೊತ್ತಿನಲ್ಲಿ ಮಲಗುವ ಚಿಕ್ಕ ಮಕ್ಕಳು, ಗರ್ಭಿಣಿಯರು, ತಾಯಂದಿರು ಮತ್ತು ವೃದ್ಧಾಪಕರು ಸೊಳ್ಳೆ ಪರದೆ ಒಳಗೆ ಮಲಗುವುದು ಮತ್ತು ಮನೆಯಲ್ಲಿ ಬೇವಿನಸೊಪ್ಪಿನ ಹೊಗೆ ಹಾಕಿರಿ ಎಂದು ಕೆ. ಕೆ. ಚವ್ಹಾಣ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ತಿಳಿಸಿ ಹೇಳಿದರು.  

ಡಾ ಕವಿತಾ ದೊರನಹಳ್ಳಿ ಆಯುಷ್ ವೈದ್ಯಾಧಿಕಾರಿಗಳು, ರೇಖಾ ಬಾಡಗಿ ಬಿ.ಹೆಚ್‌.ಇ.ಒ, ಮಧುಕೇಶ್ವರ ಹೆಚ್‌.ಐ.ಒ, ಕಾರ​‍್ೋರೇಟ ವಲಯ ಅಧಿಕಾರಿಗಳು, ನಾಗವೇಣಿ ಸೂಲಗಟ್ಟಿ ಹೆಚ್‌.ಐ.ಒ ಆಶಾ ಕಾರ್ಯಕರ್ತೆಯರು ಮತ್ತು ಕಾಲೋನಿ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ