ಚಾದ್ನ್

ರಾಜಶೇಖರ ಜಕಾತಿ ನಿಧನ

ರಾಜಶೇಖರ ಜಕಾತಿ ನಿಧನ

ಧಾರವಾಡ: ಇಲ್ಲಿಯ ಸಪ್ತಾಪುರ ಸರಕಾರಿ ಕನ್ನಡ ಶಾಲೆ ಹತ್ತಿರದ ನಿವಾಸಿ, ಮೂಲತಃ ಅಳ್ನಾವರ ನಿವಾಸಿ,  ಫಾರೆಸ್ಟ್‌ ಕಂಟ್ರ್ಯಾಕ್ಟರ್ ಹಾಗೂ ಕೃಷಿಕರಾಗಿದ್ದ ರಾಜಶೇಖರ ಸಂಗಪ್ಪ ಜಕಾತಿ (84) ಇವರು ದಿನಾಂಕ: 13-7-2024 ರಂದು ನಿಧನರಾದರು. 

ಮೃತರು ಪತ್ನಿ, ಆರು ಜನ ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗ   ಅಗಲಿದ್ದಾರೆ. ಮೃತರ ನಿಧನಕ್ಕೆ ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಬಿ. ಡಿ. ಪಾಟೀಲ, ಸಿ. ಎಸ್‌. ಪಾಟೀಲ, ಶಂಕರ ಹಲಗತ್ತಿ, ಪ್ರದೀಪ ಪಾಟೀಲ, ಈಶ್ವರಚಂದ್ರ ಹೊಸಮನಿ, ಆರ್‌. ವಿ. ಬೆಳ್ಳಕ್ಕಿ, ಲಿಂಗರಾಜ ಪಾಟೀಲ ಮುಂತಾದವರು ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ