ಧಾರವಾಡ - ಹುಬ್ಬಳ್ಳಿ

ಯಮನಪ್ಪ ಜಾಲಗಾರಗೆ "ಬಸವ ಶ್ರೀ" ಪ್ರಶಸ್ತಿ

ಯಮನಪ್ಪ ಜಾಲಗಾರಗೆ "ಬಸವ ಶ್ರೀ" ಪ್ರಶಸ್ತಿ

ಧಾರವಾಡ 07: ಬಸವ ಸೇನೆ (ರಿ) ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ "ಶರಣರ ಸದನ" ಎಂಬ ಪುಸ್ತಕ ಬಿಡುಗಡೆ ಹಾಗೂ “ಬಸವ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಮನಪ್ಪ ಜಾಲಗಾರ ಅವರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ "ಬಸವ ಶ್ರೀ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ದಿ. 12ರಂದು ಬುಧವಾರ ಸಾಯಂಕಾಲ 5 ಗಂಟೆಗೆ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನ, ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಿ “ಬಸವ ಶ್ರೀ" ರಾಷ್ಟ್ರೀಯ ಪ್ರಶಸ್ತಿ ಪಡೆಯಲು ತಿಳಿಸಲಾಗಿದೆ ಎಂದು ಧಾರವಾಡ ನ್ಯೂಸ್‌ನ ಬಸವರಾಜ ಆನೆಗುಂದಿ ಹಾಗೂ ನಮ್ಮ ಬಸವ ಸೇನೆಯ ರಾಜ್ಯ ಅಧ್ಯಕ್ಷರಾದ ಲೋಕೇಶ್ ಮೂರ್ತಿ ಅವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ