ಮಹಿಳಾ ದಿನಾಚರಣೆ: ಗರ್ಭಿಣಿಯರಿಗೆ ಸೀಮಂತ
ಗೋಕಾಕ: ನಗರದ ಮೋಕಾಶಿ ಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪೋಷಣ ಅಭಿಯಾನದಡಿ ಮೊದಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಆಚರಿಸಲಾಯಿತು.ಗೀತಾ ಹಿರೇಮಠ ಹಾಗೂ ರೇಣುಕಾ ಪೂಜೇರಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬವ್ವ ವೇಷಭೂಷಣದಲ್ಲಿ ಗಮನ ಸೆಳೆದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕಾಕ ವಲಯ ಮೇಲ್ವಿಚಾರಕಿ ನಸರೀನ ಕೊಣ್ಣೂರ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಮೋಕಾಶಿ ಗಲ್ಲಿಯ ಸ್ರ್ತಿ ಶಕ್ತಿ ಸಂಘ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಗೋಕಾಕ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪೋಷಣ ಅಭಿಯಾನದಡಿ ಮೊದಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಆಚರಿಸಲಾಯಿತು.