ಮನರಂಜನೆ

ಮತ್ತೆ ಕರೆದರೆ ಬರುತ್ತೇನೆ, ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ದಿಗಂತ್

ಮತ್ತೆ ಕರೆದರೆ ಬರುತ್ತೇನೆ, ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ದಿಗಂತ್

 ಬೆಂಗಳೂರು 23 ಸ್ಯಾಂಡಲ್ ವುಡ್‍ನಲ್ಲಿ ಮಾದಕ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ       ಎದುರಿಸಿದ್ದಾರೆ.

       ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ       ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ಸಿಸಿಬಿಗೆ ನನ್ನ ಬಳಿಯಿದ್ದ       ಅಗತ್ಯ ಮಾಹಿತಿ ನೀಡಿರುವೆ.  ಅಗತ್ಯಬಿದ್ದರೆ       ಮತ್ತೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ ಎಂದರು.

       ಈ ಮೊದಲು ಇದೇ 16ರಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ       ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೇ, ತಮ್ಮ ಬಳಿ ಮಾಹಿತಿಯಿದ್ದ ಡ್ರಗ್ಸ್ ಪೆಡ್ಲರ್ ಗಳ ಕುರಿತು       ಹಾಗೂ ಪಾರ್ಟಿಗಳಿಗೆ ಹಾಜರಾಗಿದ್ದ ಕುರಿತು ತಿಳಿಸಿದ್ದರು. ಅಲ್ಲದೆ ಬಾಲಿವುಡ್ ಚಿತ್ರವೊಂದರ       ಚಿತ್ರೀಕರಣದ ವೇಳೆ ಸಹನಟಿಯ ಅಚಾತುರ್ಯದಿಂದ ಬಲಗಣ್ಣಿಗೆ ಪೆಟ್ಟಾಗಿ ದೃಷ್ಟಿ ಮಂದವಾದ ನಂತರ       ಖಿನ್ನತೆ ಆವರಿಸಿ ವೇಳೆ ಡ್ರಗ್ಸ್ ಸೇವಿಸಿದ್ದಾಗಿಯೂ ಹೇಳಿದ್ದರು.

       ಇಂದು ಬುಧವಾರ ನಡೆದ ವಿಚಾರಣೆಯಲ್ಲಿ ಹಿಂದಿನ ಹೇಳಿಕೆ       ಹಾಗೂ ರಿಟ್ರೀವ್ ಮಾಡಲಾದ ಮೊಬೈಲ್ ನಲ್ಲಿ ಸಿಕ್ಕಿರುವ ಮಾಹಿತಿಯ ಬಗ್ಗೆಯೂ ವಿಚಾರಣೆ ನಡೆದಿದೆ.  ಹಾಗೂ ಮೊಬೈಲ್ ಗಳನ್ನು ವಾಪಸ್ ಮಾಡಿದ್ದಾರೆ       ಎನ್ನಲಾಗಿದೆ. 

       ಸಿಸಿಬಿಗೆ ಮೊದಲ ಸಲದ ವಿಚಾರಣೆಯ ಬಳಿಕ ‘ಮಾರಿಗೋಲ್ಡ್’       ಚಿತ್ರದ ಚಿತ್ರೀಕರಣದಲ್ಲಿ ದಿಗಂತ್ ಬ್ಯುಸಿಯಾಗಿದ್ದಾರೆ.

ಸುದ್ದಿ ಓದಿ