ಅಥಣಿ

ಚೆಕ್ಪೋಸ್ಟ ಇಲ್ಲದ ಗ್ರಾಮಗಳಿಂದ ಅನಧಿಕೃತವಾಗಿ ಚಿನ್ನ ಬೆಳ್ಳಿ ಹಣ ಸಾಗಾಟ

ಚೆಕ್ಪೋಸ್ಟ ಇಲ್ಲದ ಗ್ರಾಮಗಳಿಂದ ಅನಧಿಕೃತವಾಗಿ ಚಿನ್ನ ಬೆಳ್ಳಿ ಹಣ ಸಾಗಾಟ

ಸಂಬರಗಿ 27: ಚುನಾವಣಾ ನೀತಿ ಸಂಹಿತೆ ಘೋಷಣೆಗೂ ಮುನ್ನ ಗಡಿಭಾಗದ ಗ್ರಾಮಗಳಲ್ಲಿ ಕಾಟಾಚಾರದ ಚೆಕಪೋಸ್ಟ ಇದ್ದು ಇನ್ನೂ ಕೆಲವು ಗ್ರಾಮಗಳಲ್ಲಿ ಚೆಕ್ಪೋಸ್ಟಗಳೇ ಇಲ್ಲ. ಆ ಕಾರಣ ಮಹಾರಾಷ್ಟ್ರದಿಂದ ಚೆಕ್ಪೋಸ್ಟ ಇಲ್ಲದ ಗ್ರಾಮಗಳಿಂದ ಅನಧಿಕೃತವಾಗಿ ಸಾಗಾಟವಾಗುತ್ತಿದೆ. ಆದ್ದರಿಂದ ನೀತಿ ಸಂಹಿತೆ ಘೋಷಣೆ ಮುಂಚಿತವಾಗಿ ಗಡಿ ಗ್ರಾಮದ ಗಡಿಯಲ್ಲಿ ಚೆಕ್ಪೋಸ್ಟ ಅಳವಡಿಸುವದು ಅತ್ಯವಶ್ಯಕವಾಗಿದೆ. 

ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಗೆ ಹೊಂದಿರುವ ಮಹಾರಾಷ್ಟ್ರದ ಸಾಂಗಲಿ, ಮೀರಜ್, ಕವಟೆಮಹಾಂಕಾಳ, ತಾಲೂಕುಗಳು ಕೆಲವೇ ಅಂತರದಲ್ಲಿದ್ದು ಚೆಕಪೋಸ್ಟ ಇಲ್ಲದ ದಾರಿಯಲ್ಲಿ ಅನಧಿಕೃತವಾಗಿ ಎನೇನೊ ಸಾಗಾಟವಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹದಿನಾಲ್ಕು ಚೆಕ್ಪೋಸ್ಟಗಳಿದ್ದು ಈ ಚುನಾವಣೆಯಲ್ಲಿ ಏಳು ಚೆಕ್ಪೋಸ್ಟ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಧಭಾವಿ ಹಾಗೂ ಕಾಗವಾಡ-ಗಣೇಶವಾಡಿ ಚೆಕ್ಪೋಸ್ಟನಲ್ಲಿ ದಾಳಿ ನಡೆಸಿ 9. ಕೆಜಿ 390 ಗ್ರಾಂ ಬೆಳ್ಳಿ ಮತ್ತು ಮಧಭಾವಿ ಚೆಕ್ಪೋಸ್ಟನಲ್ಲಿ ನಗದು ಹಣ ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಚೆಕ್ಪೋಸ್ಟ ಇದ್ದೂ ಈ ಪರಿಸ್ಥಿತಿಯಾದರೆ ಇನ್ನು ಇಲ್ಲದ ದಾರಿಗೆ ಯಾವ ರೀತಿ ಅನಧಿಕೃತವಾಗಿ ಹಣ, ಚಿನ್ನ, ಬೆಳ್ಳಿ ಸಾಗಾಟವಾಗುತ್ತಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. 

ಈಗಾಗಲೇ ಮಧಬಾವಿ-ಮೀರಜ್, ಮಂಗಸೂಳಿ-ಅರಗ, ಕೆಂಪವಾಡ-ಶಿಂಧೆವಾಡಿ, ಲೋಕುರ-ಬೆಡಗ, ಬಾಳಿಗೇರಿ-ಜತ್, ಕಾಗವಾಡ-ಗಣೇಶವಾಡಿ-ಶಿರೋಳ, ಕಾಗವಾಡ-ಮೀರಜ್ ಚೆಕಪೋಸ್ಟ ಇದ್ದು ಇನ್ನೂ ಅರಳಿಹಟ್ಟಿ-ಸಲಗರ, ಖಿಳೇಗಾಂವ-ಕವಟೆಮಹಾಂಕಾಳ, ಖೇಳಿಗಾಂವ ಬಸವೇಶ್ವರ ದೇವಸ್ಥಾಳ -ಕೋಕಳಾ, ಆಜೂರ-ಕೋಕಳಾ, ಜತ್-ಜಾಂಬೋಟಿ ರಾಜ್ಯ ಮಾರ್ಗದಲ್ಲಿ ಅನಂತಪೂರ-ಡಪಳಾಪೂರ-ಜತ್, ಬೇಡರಹಟ್ಟಿ-ಸಿಂಧೂರ, ಈ ಮಾರ್ಗದಲ್ಲಿ ಚೆಕಪೋಸ್ಟಗಳು ಇಲ್ಲವಾದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಅನಧಿಕೃತವಾಗಿ ವಸ್ತುಗಳನ್ನು ಸಾಗಿಸುವ ಸಂಭವವಿದೆ. ಚುನಾವಣಾ ಆಯೋಗ ಗಮನಿಸಿ ಈ ಮಾರ್ಗದಲ್ಲಿ ಚೆಕ್ಪೋಸ್ಟ ಅಳವಡಿಸಿದರೆ ಅನಧಿಕೃತವಾಗಿ ಬರುವ ವಸ್ತುಗಳು ತಡೆಯಲು ಸಾಧ್ಯವಿದೆ. 

*ಸಿಬ್ಬಂದಿ ಕೊರತೆ ಇದ್ದು, ಯಾವ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಟವಾಗುವದು ಕಂಡು ಬಂದರೆ ಆ ರಸ್ತೆಯಲ್ಲಿ ಗುಂಡಿ ತೆಗೆದು ರಸ್ತೆ ತಡೆ ಮಾಡಲಾಗುವದು. 

-ಎಮ್ ಎನ್ ಬಳಿಗಾರ ತಹಶಿಲ್ದಾರ ಕಾಗವಾಡ 


ಸುದ್ದಿ ಓದಿ