ಜಮಖಂಡಿ

ಶಿಕ್ಷಕ ಕೇವಲ ಶಿಕ್ಷಕರಲ್ಲ ಶಿಕ್ಷಕ ರಾಷ್ಟ್ರ ನಿರ್ಮಾತೃ: ಪಿಯುಶ್

ಶಿಕ್ಷಕ ಕೇವಲ ಶಿಕ್ಷಕರಲ್ಲ ಶಿಕ್ಷಕ ರಾಷ್ಟ್ರ ನಿರ್ಮಾತೃ: ಪಿಯುಶ್
ಜಮಖಂಡಿ ನಗರದ ಬಸವಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಕೆ.ಪಿಯುಶ್ ಮಾತನಾಡಿದರು

ಲೋಕದರ್ಶನ ವರದಿ,

ಜಮಖಂಡಿ 05 :ಶಿಕ್ಷಕರು ಕೇವಲ ಶಿಕ್ಷಕರಲ್ಲ,ಬದಲಾಗಿ ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು.ಇದಕ್ಕೆ ನಿಜ ವಾದ ಅರ್ಥ ಬರಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿ ಎನಿಸಿ ಅನುಕರಣೆ ಮಾಡುವಂತಾಗಬೇಕೆಂದು ದೆಹಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿ ಬ್ರಹ್ಮಾಕುಮಾರ ಪಿಯುಶ್ ಹೇಳಿದರು.

ನಗರದ ಬಸವಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಕ್ಷಕರಿಗಾಗಿ ಪ್ರೇರಣಾದಾಯಕ ಮಾತುಗಳು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು,

ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಒಳ್ಳೆಯ ಸಮಯ ಕಳೆಯಬೇಕು. ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಸಮಾಲೋಚನೆ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಬೇಕು. ಧನಾತ್ಮಕ ಚಿಂತನೆ ಮೂಲಕ ಸತತ ವಿದ್ಯಾರ್ಥಿಗಳ ಸಂಪರ್ಕದಲ್ಲಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಮಾತನಾಡಿದರು. ಬಿ.ಕೆ.ಗಿರಿಜಾ, ಬಿ. ಕೆ.ಕಲಾ ಇದ್ದರು. ಶ್ರೀದೇವಿ ನಾಯಿಕ, ಪಾರ್ವತಿ ಪ್ರಾರ್ಥಿ ಸಿದರು. ಆಡಳಿತಾಧಿಕಾರಿ ಬಸವರಾಜ ಕಡ್ಡಿ ಸ್ವಾಗತಿಸಿದರು. ಉಪನ್ಯಾಸಕಿ ಮಹಾದೇವಿ ಟಕ್ಕಳಕಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜೆ.ಡಿ.ದಯಗೊಂಡ ವಂದಿಸಿದರು.



ಸುದ್ದಿ ಓದಿ