ಶಿಗ್ಗಾವ್

ಕಬ್ಬಿನ ಕಾರ್ಖಾನೆ ಪ್ರಾರಂಭ: ರೈತರ ಆರ್ಥಿಕತೆ ಹೆಚ್ಚಿಸಲು ಅನುಕೂಲಕರವಾಗಿದೆ

ಕಬ್ಬಿನ ಕಾರ್ಖಾನೆ  ಪ್ರಾರಂಭ: ರೈತರ ಆರ್ಥಿಕತೆ ಹೆಚ್ಚಿಸಲು ಅನುಕೂಲಕರವಾಗಿದೆ

ಲೋಕದರ್ಶನ ವರದಿ

 ಶಿಗ್ಗಾವಿ: ತಾಲೂಕಿನಲ್ಲಿ ಕಬ್ಬಿನ ಕಾರ್ಖಾನೆ  ಪ್ರಾರಂಭವಾಗಿದ್ದು ಬಹಳಷ್ಟು ಸಂತೋಷದ ವಿಷಯವಾಗಿದ್ದು ರೈತರ ಆರ್ಥಿಕತೆ ಹೆಚ್ಚಿಸಲು ಅನುಕೂಲಕರವಾಗಿದೆ ಎಂದು ಬಸವೇಶ್ವರ ಕಬ್ಬು ಬೆಳೆಗರಾರ ಸಂಘದ ಅಧ್ಯಕ್ಷ ಮುತ್ತಣ್ಣ ಗುಡಿಗೇರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ನಿರ್ಮಾಣವಾಗಿರುವ ಕಾರ್ಖಾನೆ ಯ ವ್ಯವಸ್ಥಾಪಕ ವಿವೇಕ್ ಹೆಬ್ಬಾರ ರೈತರು ರೈತ ಸಂಘದ ಮುಖಂಡರು ಮತ್ತು ಕಬ್ಬು ಬೆಳೆಗರಾರ ಸಂಘದ ಮುಖಂಡರ ಸಭೆ ಕರೆದು ಕಬ್ಬು ಬೆಳೆದ ರೈತರ ಸಮಸ್ಯಗಳನ್ನು ಬಗೆಹರಿಸಬೇಕು. ಮತ್ತು ಕಬ್ಬಿನ ಬೆಲೆ ಗೌಪ್ಯಾವಾಗಿಡದೆ, ರೈತರಿಗೆ ಕಬ್ಬಿನ ಬೆಲೆ ಬಹಿರಂಗ ಪಡಿಸಿ ಖರೀದಿ ಪ್ರಾರಂಭಿಸಬೇಕು ಎಂದು ಹೇಳಿದರು.

ರೈತ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ತಾಲೂಕಿನಲ್ಲಿ ರೈತ ಸಂಘ ಮತ್ತು ಕಬ್ಬು ಬೆಳೆಗಾರ ಸಂಘ ಸದಾ ರೈತರ ಸೇವೆಯಲ್ಲಿ ತೊಡಗಿರುತ್ತದೆ, ಸಮಸ್ಯೆ ಇದ್ದ ರೈತರು ಬೇಕಾದ ಸಮಯದಲ್ಲಿ ಸಂಪರ್ಕಿಸಬಹುದು ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ  ಲಕ್ಷ್ಮಣ ಹಂಚಿನಮನಿ ಮಾತನಾಡಿ ಕಬ್ಬು ಕಟಾವು ಈಗಾಗಲೇ ವಿಳಂಬವಾಗಿದ್ದು ಇಳುವರಿ ಕುಂಟಿತ ಗೊಂಡಿದ್ದು ಕಾರ್ಖಾನೆಯವರು ಬೆಲೆಯ ಜೊತೆಗೆ ಪರಿಹಾರದ ರೂಪದಲ್ಲಿ ಹೆಚ್ಚಿನ ಹಣ ಒದಗಿಸಬೇಕು. ಕಬ್ಬು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಕಬ್ಬಿನ ಬೀಜ ಒದಗಿಸಬೇಕು. ಕಾರ್ಖಾನೆಯ ವಿಳಂಭ ಧೋರಣೆಯಿಂದ ಕಬ್ಬು ಒಣಗಿ ತಾಲೂಕಿನ ಅನೇಕ ಕಡೆ ಬೆಂಕಿಗೆ ಆಹುತಿ ಆಗಿದ್ದು ಕಾರ್ಖಾನೆಯವರು ನೇರ ಹೊಣೆಗಾರರಾಗಿರುತ್ತಾರೆ ಎಂದು ದೂಷಿಸಿದರು.

 ಕಬ್ಬು ಬೆಳೆಗ ತಾಲೂಕ ಉಪಾಧ್ಯಕ್ಷ ಆನಂದ ಕೆಳಗಿನಮನಿ, ಮಾಲತೇಶ್ ಬಾರಕೇರ, ಪಂಚಯ್ಯ ಹಿರೇಮಠ್, ಅಶೋಕ್ ಮಡ್ಲಿ, ನಾಗಪ್ಪ ಕೊಟ್ಟನದ, ಖಾದರಭಾಷಾ ವಾಲಿಕರ, ದಯಾನಂದ ಮೆಣಸಿನಕಾಯಿ, ಮೌಲಾಲಿ ಜೇಕ್ಕನಕಟ್ಟಿ. ಸೇರಿದಂತೆ ಇನ್ನು ಅನೇಕ ರೈತರು ಉಪಸ್ಥಿತರಿದ್ದರು. 

ಸುದ್ದಿ ಓದಿ