ಇಂಡಿ

ಜೆಡಿಎಸ್ ಪಕ್ಷವನ್ನು ಬಲಪಡಿಸಲು ಸಂಘಟನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ: ಪಾಟೀಲ

ಜೆಡಿಎಸ್ ಪಕ್ಷವನ್ನು ಬಲಪಡಿಸಲು ಸಂಘಟನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ:  ಪಾಟೀಲ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿ.ಡಿ. ಪಾಟೀಲರು ಮಾತನಾಡಿದರು

ಇಂಡಿ: ರಾಜ್ಯದ ಜನರಿಗೆ ಅನನ್ಯ ಕೊಡುಗೆ ನೀಡಿರುವ ಜೆಡಿಎಸ್ ಪಕ್ಷವನ್ನು ಮತಕ್ಷೇತ್ರದಲ್ಲಿ ಹೊಸ ರೂಪದೊಂದಿಗೆ ಬಲಪಡಿಸಲು ಸಂಘಟನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಯಿಂ ಅವರಿಗೆ ತಾಲೂಕಿನ ಪಕ್ಷದ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು. ಕಳೆದ ಬಾರಿ ವಿಧಾನಸಭಾ ಕ್ಷೇತ್ರದಿಂದ ನಾನು ಅಲ್ಪ ಮತಗಳಿಂದ ಸೋತಿರಬಹುದು, ಆದರೆ ಜನರ ಹೃದಯವಂತಿಕೆಯಲ್ಲಿ ನಾನು ಗೆದ್ದಿದ್ದೇನೆ. ಈ ಬಾರಿ 2023 ರಲ್ಲಿ ರಾಜ್ಯದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಇಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಇದು ನನ್ನ ಪಕ್ಷಕ್ಕೆ ಸಿಕ್ಕ ಜಯ. ಈ ದೆಸೆಯಲ್ಲಿ ನನಗೆ ಅಧಿಕಾರ ಸಿಕ್ಕರೆ ಪಕ್ಷದ ಪ್ರಣಾಳಿಕೆ ಜೊತೆಗೆ ನಾನು ಉತ್ತಮ ಆಡಳಿತ ನೀಡಲು ಪ್ರಾಮಾಣಿಕನಾಗಿ ದುಡಿವೆ ಎಂದರು.

ಜೆಡಿಎಸ್ ಮುಖಂಡರಾದ ವಿಜಯಕುಮಾರ ಭೋಸಲೆ, ನಾಗೇಶ ತಳಕೇರಿ, ಅಯೂಬ ನಾಟೀಕಾರ, ಮರೆಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇನೂರ, ಸಿದ್ದು ಡಂಗಾ, ಗಂಗಾಧರಗೌಡ ಬಿರಾದಾರ, ಡಾ.ರಮೇಶ ರಾಠೋಡ, ಬಸವರಾಜ ಹಂಜಗಿ, ದುಂಡು ಬಿರಾದಾರ, ಇಸಾಕ ಸೌದಾಗರ, ಬಾಬು ಕಾಂಬಳೆ, ನಿಯಾಝ ಅಗರಖೇಡ, ತಾನಾಜಿ ಪವಾರ, ಇರ್ಪಾನ ಅಗರಖೇಡ, ಬಾಬು ಮೇತ್ರಿ, ಶಟ್ಟೆಪ್ಪ ಪಡನೂರ, ಮುತ್ತು ಹೊಸಮನಿ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.


ಸುದ್ದಿ ಓದಿ