‘ಹೇ ರಾಮ್’ ಚಿತ್ರಕ್ಕೆ ಮುಹೂರ್ತ
ಬೆಂಗಳೂರು,
ಆಗಸ್ಟ್ 8: ಇತ್ತೀಚೆಗಷ್ಟೆ ‘ಹೇ ರಾಮ್’ ಚಿತ್ರಕ್ಕೆ
ಮುಹೂರ್ತ ನೆರವೇರಿದೆ. ನಟ
ಡಾಲಿ ಧನಂಜಯ್ ಆರಂಭ ಫಲಕ
ತೋರಿಸಿ ಶುಭ ಕೋರಿದ್ದಾರೆ.
ಈ ಹಿಂದೆ 'ಕಾವೇರಿ ತೀರದ ಚರಿತ್ರೆ' ಡಯಲ್ 1 ಕ್ರಿಯೇಟಿವ್ ಸ್ಟುಡಿಯೋ ಮಾಲೀಕ ಪ್ರವೀಣ್ ಬೇಲೂರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬಂಡವಾಳವನ್ನೂ ಹೂಡಿದ್ದಾರೆ. ಅಲ್ಲದೆ ವಿಎಫ್‍ಎಕ್ಸ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅಪರಾಧಗಳನ್ನು ತನಿಖೆ ಮಾಡಿರುವ ಸಾಕಷ್ಟು ಘಟನೆಗಳು ಸಿನಿಮಾದಲ್ಲಿ ಮೂಡಿಬರಲಿದೆದೆ. ಕಳೆದವಾರವಷ್ಟೆ ಎಸ್ ಪಿ ಹುದ್ದೆಯಿಂದ ನಿವೃತ್ತಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ತಮ್ಮ ಅಧಿಕಾರಾವಧಿಯಲ್ಲಿ ನಡೆದ ಹಲವು ಘಟನಾವಳಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದು, ಒಂದು ಭಾಗವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.
ನಟ ಧರ್ಮ ತನಿಖಾಧಾರಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತಕಲೋಕದ ಪಾತ್ರಧಾರಿಗಾಗಿ ಆಯ್ಕೆ ನಡೆಯುತ್ತಿದೆ. ಉಳಿದಂತೆ ಪಾಪ್ ಕಾರ್ನ್ ಮಂಕಿ ಟೈಗರ್ ಖ್ಯಾತಿಯ ಸಪ್ತಮಿ ಗೌಡ, ಬಿಗ್ ಬಾಸ್ ಮೂಲಕ ಜನಪ್ರಿಯರಾಗಿರುವ ಚೈತ್ರ ಕೊಟ್ಟೂರು, ಸಚ್ಚಿನ್ ಪುರೋಹಿತ್, ನವೀನ್ ರಾಜ್, ಮಂಜುನಾಥ್, ಪೂರ್ಣ ಮೊದಲಾದವರಿದ್ದಾರೆ.
ಕಥೆ, ಚಿತ್ರಕಥೆ ಹೊಣೆ ಎಸ್. ಕೆ. ಉಮೇಶ್ ವಹಿಸಿಕೊಂಡಿದ್ದು, ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನು ಡಾ. ವಿ. ನಾಗೇಂದ್ರ ಪ್ರಸಾದ್ ಹೊತ್ತಿದ್ದಾರೆ.