ಇಂಡಿ

ಹಾವು ಕಚ್ಚಿ ಓರ್ವ ಮಹಿಳೆ ಸಾವು

ಹಾವು ಕಚ್ಚಿ ಓರ್ವ ಮಹಿಳೆ ಸಾವು

ಇಂಡಿ: ಹಾವು ಕಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 45 ವರ್ಷದ ಲಕ್ಷ್ಮೀಬಾಯಿ ವಿಠೋಬ ಪೂಜಾರಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆಗೆ ಮೂವರು ಹೆಣ್ಣು ಮಕ್ಕಳು ಹಾಗೂ ಎರಡು ಗಂಡು ಮಕ್ಕಳಿದ್ದು ಮಹಿಳೆಯ ಕುಟುಂಬ ಬಡತನದಿಂದ ಕೂಡಿದೆ. ಸರ್ಕಾರ ಕೂಡಲೆ ಮಹಿಳೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಈ ಕುರಿತು ಹೊರ್ತಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಓದಿ