ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿ ಮಾಡಿ: ಸಿಂಧೂರ
ಲೋಕದರ್ಶನ ವರದಿ,
ಜಮಖಂಡಿ 02: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿ ತಮ್ಮ ಮಕ್ಕಳಿಗೆ ಉನ್ನತ ವ್ಯಕ್ತಿತ್ವ ರೂಪಿಸಿಕೊಂಡು ಹೃದಯ ಶ್ರೀಮಂತಿಕೆ ವ್ಯಕ್ತಿಗಳನ್ನಾಗಿ ಮಾಡಿ ಹಾಗೂ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿ ಮಾಡಿ ಎಂದು ರೈತ ನಾಯಕ ಬಿ.ಎಸ್. ಸಿಂಧೂರ ಹೇಳಿದರು.
ತಾಲೂಕಿನ ತುಬಚಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ರಾಣಿ ಚನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯ 18 ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಹೊತ್ತು ಸಾಗಿ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಸಮಾಜದ ಉತ್ತಮ ನಾಗರೀಕರಾಗಬೇಕೆಂದು ಎಂದರು.
ಜಮಖಂಡಿ ಡಿ.ವೈ.ಎಸ್.ಪಿ ಶಾಂತವೀರ ಈ, ಮಾತನಾಡಿ, ಪಾಲಕರು ಮಕ್ಕಳಲ್ಲಿಯ ವಿಶೇಷ ಪ್ರತಿಭೆಯನ್ನು ಗುರುತಿಸಿ ಮಕ್ಕಳಲ್ಲಿಯ ಶಕ್ತಿಯನ್ನು ಹೆಚ್ಚಿಸಿ, ಮೊಬೈಲಗಳಿಂದ ದೂರವಿಟ್ಟು, ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಂಡು ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಲು ಸಮಾಜದಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ ಎಂದರು.
ಶಾಲೆಯ ಆಧ್ಯಕ್ಷ ಡಾ, ಸದಾಶಿವ ಬಾಲಪ್ಪನವರ ಮಾತನಾಡಿ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೆಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಮಾತೂಶ್ರೀ ಅನುಸಯಾ ದೇವಿ ಸಾನಿಧ್ಯ ವಹಿಸಿ, ಎಲ್ಲ ಧರ್ಮಕ್ಕೂ ಅದರದೇ ಆದ ಪವಿತ್ರ ಸ್ಥಳಿವಿರುತ್ತದೆ. ಆದರೆ ಶಾಲೆ ಎಲ್ಲ ಧರ್ಮದವರಿಗೂ ಅತ್ಯಂತ ಪವಿತ್ರವಾಗಿದ್ದು. ಅದುವೇ ವಿದ್ಯಾಮಂದಿರವಾಗಿದೆ ಎಂದು ಆಶೀವಚನ ನೀಡಿದರು.
ತುಂಗಳ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಶೀತಲ ಕನವಾಡೆ ಮಾತನಾಡಿದರು. ಪಂಚಾಕ್ಷರಿ ಮಠದ, ವಿನಯ ಪಾಟೀಲ, ನಾರಾಯಣ ಕುಲಕಣರ್ಿ,ಸಿದ್ದು ಇಟ್ನಾಳ, ಸದಾಶಿವ ಕರಬಸನವರ, ಬಸವರಾಜ ಪಾಟೀಲ, ಬಸವರಾಜ ಬಳಗಾರ, ಅಪ್ಪಾಸಾಬ ಬಿರಾದಾರ, ಮುತ್ತಪ್ಪ ಕುಂಬಾರ, ರಾಚಯ್ಯ ಅಡಹಳ್ಳಿಮಠ, ಅಪ್ಪಾಸಾಬ ಶೇಗಾಂವಿ ಈರಪ್ಪ ಸಿಂದೂರ, ಶಿವಲಿಂಗಪ್ಪ ಕುಂಬಾರ, ಬಸವರಾಜ ಬಿರಾದಾರ, ಸದಾಶಿವ ಕವಟಗಿ, ಬಸವರಾಜ ಕರಬಸನವರ, ಧರೆಪ್ಪ ಕುಂಬಾರ, ಶ್ರೀಶೈಲ ಅಲ್ಲವ್ವಗೋಳ, ನಿಂಗಪ್ಪ ಬೊರ್ಯಾಳ, ಮಹಾದೇವ ಬ್ಯಾಡಗಿ, , ಅಶೋಕ ಗೌಡಪ್ಪನವರ, ಸಿದ್ದಗೌಡ ಪಾಟೀಲ, ಅಣ್ಣಾಸಾಬ ಯಂಡೋಳ್ಳಿ, ಹಿಡಕಲ್, ಮಲ್ಲಿಕಾಜರ್ುನ ದಳವಾಯಿ ಉಪಸ್ಥಿತರಿದ್ದರು. ಆನಂದ ದುಪದಾಳ ಸ್ವಾಗತಿಸಿದರು. ಲಕ್ಷ್ಮಣ ಕಿತ್ತೂರ ನಿರೂಪಿಸಿದರು, ಅಕ್ಷತಾ ಬಿರಾದಾರ ವಂದಿಸಿದರು.