ಅಂಬೇಡ್ಕರ್ ಬಗ್ಗೆ ಮಾತನಾಡಲು ಶಾಸಕ ನ್ಯಾಮಗೌಡರಿಗೆ ನೈತಿಕ ಹಕ್ಕಿಲ್ಲ
ಜಮಖಂಡಿ 27: ಕಾಂಗ್ರೆಸ್ ಪಕ್ಷದ ನಾಯಕರಿಗೆ ಹಾಗೂ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರಿಗೆ ವೀರ ಸಾವರಕರ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಬಗ್ಗೆ ಮಾತನಾಡುವಷ್ಠು ಯಾವುದೇ ನೈತಿಕ ಹಕ್ಕಿಲ್ಲವೆಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ ಹೇಳಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ವೀರ ಸಾವರಕರ. ಡಾ.ಬಾಬಾಸಾಹೇಬ ಅಂಬೇಡ್ಕರ ಎಂಬ ಮಾತನಾಡುತ್ತ ಹೊರಟಿರುವುದು ಪರಿಶಿಷ್ಠ ಜಾತಿ-ಪಂಗಡದ ಮುಗ್ದ ಜನರನ್ನು ಮೋಸ ಮಾಡುವ ಸಂಚಾಗಿದೆ.ರಾಜ್ಯದ ಯಾವುದೇ ದಲಿತ ಸಮೂದಾಯದ ಜನರು ಈ ಬಗ್ಗೆ ಕಿವಿಗೊಡಬಾರದೆಂದು ಪ್ರಕಾಶ ಕಾಳೆ ಕೋರಿಕೊಂಡರು.ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಬಿಜೆಪಿ ವಿರುದ್ದ ಕಾಂಗ್ರೆಸ್ ಎಂಬ ಅರ್ಥದಲ್ಲಿ ವೀರ ಸಾವರಕರ ವಿರುದ್ದ ಅಂಬೇಡ್ಕರ ಎಂದು ಹೇಳುವುದು ಹಾಸ್ಯಾಸ್ಪದ ಸಂಗತಿ. ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಈ ಜಗತ್ತಿಗೆ ಶ್ರೇಷ್ಠವಾದ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿ ಹಾಗೂ ವೀರ ಸಾವರಕರ ಅವರು ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಸ್ರಿಂದ ಜಾಲ ಪಾನಿ ಶಿಕ್ಷೆ ಅನುಭವಿಸಿ,ಬಲಿದಾನ ಮಾಡಿದ ವ್ಯಕ್ತಿಗಳಾಗಿದ್ದು,ಅವರಿಬ್ಬರನ್ನು ಕಾಂಗ್ರೆಸ್ ಪಕ್ಷದ ಕೆಲ ನಾಯಕರು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ತೀವ್ರ ಖಂಡನೀಯ ಎಂದರು.ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ಮೊದಲು ವೀರ ಸಾವರಕರ ಅವರ ಜೀವನದ ಬಗ್ಗೆ ಅಧ್ಯಯನ ಮಾಡಿಕೊಂಡು ಅವರ ಬಗ್ಗೆ ಮಾತನಾಡಬೇಕು.
ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಸಭೆಯಲ್ಲಿ ವೀರ ಸಾವರಕರ ಹಾಗೂ ಅಂಬೇಡ್ಕರ ಬಗ್ಗೆ ಮಾತನಾಡಿದ್ದು,ಶಾಸಕರ ಘನತೆಗೆ ಶೋಭೆ ತರುವುದಿಲ್ಲವೆಂದು ವ್ಯಂಗ್ಯವಾಡಿದರು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರನ್ನು ಕೆಲ ಚುನಾವಣೆಗಳಲ್ಲಿ ಸೋಲಿಸಿದ್ದು, ಹಾಗೂ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲು ಹಿಂದೇಟು ಹಾಕಿದ್ದು, ಕಾಂಗ್ರೆಸ್ ಪಕ್ಷದ. ಅಂದಿನ ಕೆಲ ನಾಯಕರು ಎಂಬುದನ್ನು ಶಾಸಕರು ನೆನೆಪಿಸಿಕೊಳ್ಳಬೇಕೆಂದು ಹೇಳಿದರು.ರಾಜ್ಯದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದು,ಈಗ ಶಾಸಕರಿಗೆ ವೀರ ಸಾವರಕರ ವಿರುದ್ದ ಅಂಬೇಡ್ಕರ ಎಂದು ಎಂಬುವ ಕಾರ್ಯದಲ್ಲಿ ತೊಡಗಿದ್ದು ನಾಚಿಗೆ ತರುವಂತಹ ಸಂಗತಿಯಾಗಿದೆ.ರಾಜ್ಯದ ಯಾವುದೇ ರಾಜಕಾರಣಗಳು ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವ ಮೊದಲು ಆ ಮಾಹನ್ ವ್ಯಕ್ತಿಗಳ ಜೀವನ ಶೈಲಿ ಅವರ ನಡೆ-ನುಡಿಗಳ ಬಗ್ಗೆ ಅರಿತುಕೊಳ್ಳಬೇಕು.ಮುಂದಿನ ದಿನಮಾನಗಳಲ್ಲಿ ವೀರ ಸಾವರಕರ ಹಾಗೂ ಅಂಬೇಡ್ಕರರ ಬಗ್ಗೆ ಹಗುರವಾಗಿ ಮಾತನಾಡಿದರೆ ಶಾಸಕರ ವಿರುದ್ದ ಉಗ್ರ ಹೋರಾಟ ನಡೆಸುವ ಪ್ರಸಂಗ ಬರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.ಸುದ್ದಿಗೋಷ್ಠಿಯಲ್ಲಿ ನಗರ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ,ನಗರಸಭೆ ಸದಸ್ಯ ಕುಶಾಲ ವಾಘ್ಮೋರೆ,ದಲಿತ ಮುಖಂಡ ರಮೇಶ ಆಲಬಾಳ,ಪ್ರಕಾಶ ಹುಗ್ಗೆನ್ನವರ ಇದ್ದರು.