ಸವಣೂರ ಮತಕ್ಷೇತ್ರದ ಅಲ್ಪಸಂಖ್ಯಾತರ ಮುಖಂಡರ ಮಹತ್ವದ ಸಭೆ
ಲೋಕದರ್ಶನ ವರದಿ
ಶಿಗ್ಗಾವಿ 24: ಹಳೆ ಧಾರವಾಡ ಭಾಗದ 17 ಕ್ಷೇತ್ರದಲ್ಲಿ ಸುಮಾರು ಮೂರು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಆದರೆ ಇಗ ಕಾಟಾಚಾರಕ್ಕೆ ಎಂಬಂತೆ ಸಮುದಾಯದ ಹೆಚ್ಚು ಮತಗಳಿದ್ದರೂ ಪರಿಗಣಿಸದೆ ಮುಸ್ಲಿಂ ಮತಗಳು ಇಲ್ಲದ, ಪ್ರಬಲ ಬಿಜೆಪಿ ಮತಗಳು ಇದ್ದ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಟಿಕೇಟ್ ನೀಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬರ ಬೊವಾಜಿ ಹೇಳಿದರು.
ತಾಲೂಕಿನ ತಡಸ ಗ್ರಾಮದ ಹೊರವಲಯದಲ್ಲಿ ಶಿಗ್ಗಾವಿ, ಸವಣೂರ ಮತಕ್ಷೇತ್ರದ ಅಲ್ಪಸಂಖ್ಯಾತರ ಮುಖಂಡರ ಮಹತ್ವದ ಸಭೆಯಲ್ಲಿ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಜೆ ಮುಲ್ಲಾ ಸಮ್ಮುಖದಲ್ಲಿ ಮಾತನಾಡಿರುವ ಅವರು 2023ರ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ ಶಿಗ್ಗಾವಿ, ಸವಣೂರ ಮತಕ್ಷೇತ್ರದ ಪ್ರಭಾವಿ ಮುಖಂಡರು ಸೇರಿಕೊಂಡರ ಹಾಗೂ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಹೇಳಿಕೆಯನ್ನ ಪಡೆದುಕೊಳ್ಳಲಾಗಿದೆ ರಾಜ್ಯ ನಾಯಕರಿಗೆ ಈ ಸಂದೇಶ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಅಲ್ಲದೇ ಈ ಭಾರಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು, ಟೀಕೆಟ್ ಬಯಸಿ ಬಹಳಷ್ಟು ಜನ ಮುಸ್ಲಿಂ ನಾಯಕರು ಅರ್ಜಿ ಸಲ್ಲಿಸಿದ್ದಾರೆ ಅದರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು, ಸಭೆಯಲ್ಲಿ ಬಂಕಾಪುರ ಪಟ್ಟಣದ ಉದ್ಯಮಿ ನೂರ ಅಹ್ಮದ ಮಳಗಿ ಸೇರಿದಂತೆ ಸಮುದಾಯದ ಹಲವರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಸೂಚಿಸಿದ್ದಾರೆ, ಇನ್ನೂ ಕೆಲವು ನಾಯಕರು ಹಲವಾರು ಮುಖಂಡರು ಟೀಕೆಟ ಅರ್ಜಿ ಸಲ್ಲಿಸಿದ್ದು ಅವರನ್ನು ಸಹ ಪರಿಗಣಿಸಿ ಎಂಬ ಒತ್ತಡವೂ ಕೇಳಿ ಬಂದಿದೆ, ಕೊನೆಗೆ ಎಲ್ಲರೂ ಒಟ್ಟಾಗಿ ಇರೋಣ ಕಾಂಗ್ರೆಸ್ ಗೆಲ್ಲಿಸೋಣ, ಟಿಕೆಟ್ ಮುಸ್ಲಿಂ ಸಮುದಾಯದವರಿಗೆ ಬೇಕು ಎಂಬ ಬೇಡಿಕೆ ಇಡೊಣ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದರು.
ಅಬ್ದುಲ್ ಮೌಲಾನಾ, ಸುಲೆಮಾನ ಖಾಜೆಖಾನ, ಕರಿಂ ಮೊಗಲಲ್ಲಿ ಇರ್ಪಾನ ಕೊಲ್ಲಾಪುರ, ತಮಿದ ಖಾಜಿ, , ಅಬ್ದುಲ್ ಮಜೀದ್ ಕೊಲ್ಲಾಪುರ, ನೂರ ಅಹ್ಮದ ಮತ್ತೆಖಾನ ಹುರಳಿಕೊಪ್ಪಿ, ಮುಜಾಹಿದ್ದೀನ್ ದಿವಾನಸಾಬನವರ, ಇಕ್ಬಾಲ್ ಅಹಮದ್ ಬೂರುಹಾನುದ್ದಿನ, ಮೊದಿನಸಾಬ ದಿವಾನ್ನವರ, ಕರೀಂ ನದಾಫ್, ಹಿರೆಬೆಂಡಿಗೇರಿ ಚಿಕ್ಕಬೆಂಡಿಗೇರಿ, ಕಬನೂರ, ಹಿರೆಮಣಕಟ್ಟಿ, ತಿಮ್ಮಾಪುರ, ಹಿರೆಮಲ್ಲೂರ, ಹಳೆಬಂಕಾಪುರ, ಬಾಡ, ಕುನ್ನೂರು, ಶಿಗ್ಗಾವಿ, ಸವಣೂರ, ಬಂಕಾಪುರ, ಹುಲಗೂರ ಗ್ರಾಮದ ಯುವ ಮಿತ್ರರು ಹಿರಿಯರು ಉಪಸ್ಥಿತರಿದ್ದರು.