ರಾಣೆಬೆನ್ನೂರ

ನೂತನ ಅಧ್ಯಕ್ಷ ರಾಜು ರೇವಣಕರವರಿಗೆ ಸನ್ಮಾನ

ನೂತನ ಅಧ್ಯಕ್ಷ ರಾಜು ರೇವಣಕರವರಿಗೆ ಸನ್ಮಾನ

ಲೋಕದರ್ಶನ ವರದಿ

ರಾಣಿಬೆನ್ನೂರ 06:  ಇಲ್ಲಿನ ಈಶ್ವರನಗರದ ಶ್ರೀಅಯ್ಯಪ್ಪಸ್ವಾಮಿ ಮಂದಿರದ ಸಭಾಭವನದಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಸಮಿತಿ ಮತ್ತು ಶ್ರೀಮಂದಿರದ ಭಕ್ತರ ವತಿಯಿಂದ ಶ್ರೀಮಂದಿರದ ಭಕ್ತರು ಮತ್ತು ಆಧ್ಯಾತ್ಮಿಕ ಚಿಂತಕರು ಮತ್ತು ನಗರದ ದೈವಜ್ಞ ಸುವರ್ಣಕಾರರ ವಿವಿದೊದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾದ ರಾಜು ಎಂ ರೇವಣಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

   ನಿವೃತ್ತ ಶಿಕ್ಷಕ ಜಿ.ಬಿ. ಮಾಸಣಗಿ, ಬಸವರಾಜ ಮಳೆಮಠ,  ಎಲ್.ಜಿ. ಶೆಟ್ಟರ,   ಮಂಜುನಾಥಸ್ವಾಮಿ ಮಣಿಗಾರ, ದೇವಸ್ಥಾನ ಪ್ರಧಾನ ಅರ್ಚಕ ವೀರಯ್ಯ, ಸಹಾಯಕ ಅರ್ಚಕ ಶಿವಲಿಂಗೇಶ,  ನಿವೃತ್ತ ಉಪನ್ಯಾಸಕ ಜಿ.ವಿ. ಕೋರಿ, ಈರಣ್ಣ ಮಾಕನೂರ, ಶಮಂತ ಮಳೆಮಠ, ಮಹಾಲಿಂಗಪ್ಪ ಕೆಂಪಣ್ಣನವರ, ರಾಯಣ್ಣ ಮಾಕನೂರ, ದೇವಸ್ಥಾನ ಸಮಿತಿ ಸದಸ್ಯರು ಇದ್ದರು 

ಸುದ್ದಿ ಓದಿ