ಮಕ್ಕಳು

ಗುಬ್ಬಿ ಮರಿ

ಗುಬ್ಬಿ ಮರಿ

ಅನಿತಾ ಮಾಲಗತ್ತಿ 

ಗುಬ್ಬಚ್ಚಿಯೊಂದು ಸಾವಿರಾರು ಮೈಲುಗಳಿಂದ ತನ್ನ ಪುಟ್ಟ ರೆಕ್ಕೆಗಳನ್ನು ಬೀಸುತ್ತಾ ಸಾಗುತ್ತಿತ್ತು. ಅದರ ಮನಸ್ಸು ಗೊಂದಲಗಳ ಗೂಡಾಗಿತ್ತು. ರೆಕ್ಕೆ  ಬೀಸಿ ಹಾರುವುದು ನಸುಕಿನಲ್ಲಿ ಎದ್ದು ಬಂಧು-ಬಾಂಧವರೊಡನೆ ಮಾತನಾಡಿಸುತ್ತ ಅಲ್ಲಲ್ಲಿ ಬಿದ್ದ ಕಾಳುಕಡಿ ಉಳಿದ ಊಟದ ತುಣುಕುಗಳು ಒಮ್ಮೊಮ್ಮೆ ಹಣ್ಣು-ಹಂಪಲಗಳಿಂದ ತಿನಿಸುಗಳನ್ನು ತನ್ನ ಹೊಟ್ಟೆಗೆಷ್ಟು ಬೇಕೋ ಅಷ್ಟೇ ತಿಂದು ಅದನ್ನು ಕರಗಿಸುವ ಚಿಂತೆಯನ್ನಷ್ಟೇ ಮಾಡುತ್ತಿದ್ದ ತನಗೆ ಈ ಮಹಾಚಿಂತೆ, ಅಲ್ಲಲ್ಲ ಚಿಂತೆಯ ಮಹಾ ಸಮುದ್ರದಲ್ಲಿ ಬಿದ್ದು ಒದ್ದಾಡುವುದು ಬೇಕಿತ್ತೇ? 

       ಅದೊಂದು ಸ್ಕೂಲು ಎಲ್ಲ ವಯಸ್ಸಿನ ಕಿಶೋರ-ಕಿಶೋರಿಯರು ಕಲೆತು ಅಧ್ಯಯನ ಮಾಡುವ ವಿದ್ಯಾಮಂದಿರ. ಕೆಳಗೆಂಟು, ಮೇಲೆಂಟು ಕೋಣೆಗಳನ್ನು ಹೊಂದಿದ್ದ ಶಾಲೆ ತುಂಬಾ ಶಿಸ್ತು. ಹೊರಗೆ ಕಾಲಿಟ್ಟರೆ ಸಾಕು; ಎರಡೂ ಕೈಗಳನ್ನು ಹಿಂದೆ ಕಟ್ಟಿಕೊಂಡು  ಸಾಗುತ್ತಿದ್ದ ಮಕ್ಕಳು. ಊಟಕ್ಕೆ ಎಲ್ಲ ಮಕ್ಕಳೂ ಸೇರಿ ದುಂಡಾಗಿ ಮೈದಾನದಲ್ಲಿ ಕುಳಿತು ಪರಸ್ಪರರು ಹಂಚಿಕೊಂಡು ತಿನ್ನುತ್ತಿದ್ದರು. ಒಂದುವೇಳೆ ಊಟವನ್ನೇ ತರದ ಮಕ್ಕಳಿಗೆ ತುಸು ದೊಡ್ಡದಾದ ಮುಚ್ಚಳದಲ್ಲಿ ಎಲ್ಲರೂ ಸೇರಿ ಕೂಡಿಸಿ ಒಂದು ಡಬ್ಬಿಯಷ್ಟೇ ಊಟವನ್ನು ನೀಡುತ್ತಿದ್ದರು!.  ಬೇಗ ಬೇಗ ಊಟ ಮಾಡಿ ಅಲ್ಲಿ ಬಿದ್ದ ಎಂಜಲನ್ನೆಲ್ಲ ಗುಡಿಸಿಚೆಲ್ಲಿ ಬಂದು ಮತ್ತೆ ಮೈದಾನ ಯಥಾವತ್ತಾಗಿ ಕಾಣುವಂತೆ ಮಾಡುತ್ತಿದ್ದ ಮಕ್ಕಳು ಮುಗ್ಧರಾಗಿ ಆಡಲು ಶುರು ಮಾಡುತ್ತಿದ್ದರು. ಇದನ್ನು ದಿನವೂ ಗಮನಿಸುತ್ತಿದ್ದ  ತಾನು ತನ್ನ ಮರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.  

    ಶಾಲಾ ಮಕ್ಕಳಿಗೆ ಓದುವ-ಬರೆಯುವ-ಶಿಕ್ಷಕರಿಗೆ ಪಾಠ ಒಪ್ಪಿಸುವ ಚಿಂತೆಯಿದೆ. ಶಿಕ್ಷಕರ ದಂಡನೆಯಿದೆ. ಪರೀಕ್ಷೆಯ ಭಯವಿದೆ. ನಿಮಗ್ಯಾವ ಚಿಂತೆಯಿದೆ.? ಎಷ್ಟೇ ದೂರವಾಗಲಿ, ದಣಿವಾಗಲಿ ಬಿಸಿಲು-ಬೇಗೆಯಿರಲಿ ನಿಮಗೆ ಊಟ ತಂದು ಹಾಕುತ್ತೇವೆ. ಅದೂ ಊಟವನ್ನು ನುರಿಸುವ ಚಿಂತೆಯೂ ನಿಮಗಿಲ್ಲ. ಗೂಡನ್ನು ಸ್ವಚ್ಚವಾಗಿಡಲು ಬರುವುದಿಲ್ಲ. ಅಕಸ್ಮಾತ ಕೆಳಗೆ ಬಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ನೀವು ಅಲುಗಾಡಿಸುವುದಿಲ್ಲ. ಶಾಲಾ ಮಕ್ಕಳು ಗಂಟೆ ಬಾರಿಸುವವರೆಗೂ ಕುಯ್ ಎನ್ನುವುದಿಲ್ಲ. ನಾನು ಬರುವುದು ತುಸು ತಡವಾದರೆ ಸಾಕು ಸುತ್ತಲಿನ ಮನೆಯವರೆಲ್ಲರ ನಿದ್ದೆಗೆಡಿಸುತ್ತೀರಿ. ಇಂಥ ಮಾತುಗಳನ್ನು ಕೇಳಿ ಕೇಳಿ ಸಾಕಾದ ಮರಿಗುಬ್ಬಚ್ಚಿಯೊಂದು ನಾನು ಏನಾದರೂ ಸಾದಿಸುತ್ತೇನೆ ಎಂದು ಶಪಥ ಮಾಡಿದ್ದೇ ಚಿಂತೆಗೆ ಕಾರಣವಾಗಿದ್ದು. 

    ಮರಿಗುಬ್ಬಿ ನೀರಡಿಕೆ-ಹಸಿವು ಬಿಟ್ಟು ವಿಚಾರ ಮಾಡತೊಡಗಿತು. ದಿನಾಲೂ ಊಟದ ವೇಳೆಯಲ್ಲಿ ಶಿಕ್ಷಕಿಯೊಬ್ಬರು ಅಲ್ಲಿ ಬಿದ್ದ ಅನ್ನದ, ಅವಲಕ್ಕಿಯ ಕಾಳುಗಳನ್ನು ಎತ್ತಿ ಗುಬ್ಬಿ ಗೂಡಿನ ಪಕ್ಕದಲ್ಲಿ ಇಡುತ್ತಿದ್ದರು. ಮರಿಗುಬ್ಬಿ ಅಮ್ಮ ಇಲ್ಲದ ವೇಳೆಯಲ್ಲಿ ಮೆಲ್ಲನೆ ಕೆಳಗಿಳಿದು ಅವುಗಳನ್ನು ಹೆಕ್ಕಿ ತರತೊಡಗಿತು. ಇದರಿಂದ ತಾಯಿಯಿಂದ ಪ್ರಶಂಸೆ ದೊರೆತಾಗ ಮರಿಗುಬ್ಬಿಗೆ ತುಸು ಧೈರ್ಯ ಹೆಚ್ಚಾಯಿತು. ದಿನಗಳುರುಳಿದಂತೆ ಶಿಕ್ಷಕಿಗೂ-ಮರಿಗುಬ್ಬಿಗೂ ನಂಟು ಬೆಳೆಯಿತು. ಕ್ಲಾಸಿನ ಕಿಟಕಿಯಲ್ಲಿ ಕುಳಿತು ಗುಬ್ಬಿ ಪಾಠವನ್ನು ಆಲಿಸತೊಡಗಿತು! ಮಕ್ಕಳೂ ಮರಿ ಗುಬ್ಬಿಗೆ ಏನೂ ಮಾಡುತ್ತಿರಲಿಲ್ಲ. ಬದಲಾಗಿ ತಮ್ಮೊಂದಿಗೆ ಭಾಗಿಯಾದ ಗುಬ್ಬಚ್ಚಿಮರಿಯೊಂದಿಗೆ ಮಕ್ಕಳೂ ಹೆಚ್ಚು ಆಸಕ್ತಿಯಿಂದ ಪಾಠ ಕೇಳತೊಡಗಿದರು. ಮುಂದೆರಡು ತಿಂಗಳಲ್ಲಿ ಶಿಕ್ಷಕಿ ಹೇಳುವ ಎಲ್ಲಾ ವಿಷಯಗಳೂ ಅರ್ಥವಾಗತೊಡಗಿದ್ದವು. ಅದು ಮಧ್ಯೆ ಮಧ್ಯೆ ಉತ್ತರಿಸುತ್ತಿತ್ತು. ಆದರೆ ಅದರ ಭಾಷೆ ಶಿಕ್ಷಕಿಗೆ ಅರ್ಥವಾಗುತ್ತಿರಲಿಲ್ಲ. ಗುಬ್ಬಚ್ಚಿಗೆ ಪ್ರಯತ್ನಕ್ಕೆ ಫಲ ಇದ್ದೇ ಇದೆ ಎಂದು ಅರ್ಥವಾಗಿತ್ತು. ಕೆಲವೊಮ್ಮೆ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಕೂಡಿ ವಿಷಯಗಳ ಚಚರ್ೆ ಮಾಡುತ್ತಿದ್ದ ಕೋಣೆಗೂ ದೌಡಾಯಿಸುತ್ತಿತ್ತು. ಅಲ್ಲಿಯೂ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು.  ನೀವು ಹೇಳಿದ ಪಾಠ ಅರ್ಥ ಆಗಿದೆ ಟೀಚರಮ್ಮ ನನಗೂ ಪ್ರಶ್ನೆ ಕೇಳಿ ಎನ್ನುತ್ತಿತ್ತು.  ಆದರೇನು? ಅದರ ಭಾಷೆ ಯಾರಿಗೂ ತಿಳಿಯುತ್ತಿರಲಿಲ್ಲ. ಎಲ್ಲದ್ದನ್ನೂ ಚಿವ್ ಚಿವ್ ಎಂದೇ ಸಂಭೋದಿಸುತ್ತಿರುವ ಅದರ ಧ್ವನಿ ಮಾತ್ರ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು.  

    ಬೇಗನೆ ಎದ್ದು  ಎಲ್ಲ ಕೆಲಸ ಮುಗಿಸಿಕೊಂಡು ತಿಪ್ಪೆ ಕಡೆಗೆ ಬಹಿದರ್ೆಸೆಗೆ ಹೋಗುತ್ತಿತ್ತು. ಮೊದಲಾದರೆ ಶಾಲೆಯ ಕಂಪೌಂಡಿಗೆ ಹಾಕಿದ್ದ ತಂತಿಯ ಎಳೆಗಳ ಮೇಲೆ ಕುಳಿತು ಜೀಕುತ್ತಾ ಮಾಡುತ್ತಿದ್ದ ಕೆಲಸವನ್ನು ಶಾಲಾ ಆಯಾಗಳು ಬೈಯುತ್ತಿದ್ದುದು ಕೇಳಿ ತಮಗೇ ನಾಚಿಗೆ ಬಂದಿತ್ತು. ತಮ್ಮ ಕುಲಸ್ಥರನ್ನೆಲ್ಲಾ ಕೂಡಿಸಿ ಮರಿಗುಬ್ಬಿ ಪಾಠ ತೆಗೆದುಕೊಂಡಿತ್ತು. ಅಲ್ಲಿ ಇಲ್ಲಿ ಹೊಲಸು ಮಾಡಬಾರದು, ಮನುಷ್ಯರಂತೆ ನಾವೂ ಸ್ವಚ್ಛತೆಗೆ ಮಹತ್ವ ಕೊಡೋಣ, ಶಿಸ್ತು ನಮ್ಮ ಕೆಲಸವನ್ನು ಸುಲಭವಾಗಿಸುತ್ತದೆ. ನಾವು ತಿಪ್ಪೆಯ ಕಡೆಗೆ ಹೋಗಿಬಂದರೆ ಅವರ ಕೆಲಸ ಸುಲಭ ಮತ್ತು ಅವರು ನಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ. ನಾವು ಅವರಿಗೆ ಸಹಾಯ ಮಾಡಲು ಆಗುವುದಿಲ್ಲ ಆದರೆ ಅವರ ಕೆಲಸವನ್ನು ಕಡಿಮೆ ಮಾಡೋಣ ಹಾಗೂ ನಿಸರ್ಗವನ್ನು ಸ್ವಚ್ಚ ಮತ್ತು ಸುಂದರವಾಗಿಡಲು ಅವರಿಗೆ ಸಹಕರಿಸೋಣ ಎಂದೆಲ್ಲ ಹೇಳುತ್ತಿತ್ತು. ಇದನ್ನ  ಕೇಳಿದ ತಾಯಿ ಗುಬ್ಬಿ ಹೆಮ್ಮೆ ಪಡುತ್ತಿತ್ತು. ಸಂಜೆ ತಾಯಿ-ತಂದೆ ಮನೆಗೆ ಬಂದೊಡನೆ ತನ್ನ ಸಹೋದರ-ಸಹೋದರಿಯರನ್ನು  ಕೂಡಿಸಿಕೊಂಡು ತನಗೆ ತಿಳಿದ ವಿಷಯವನ್ನು ಹೇಳುತ್ತಿತ್ತು.  ಒಮ್ಮೆ ಗಂಭಿರ ವಿಷಯಗಳ ಚಚರ್ೆ ಮಾಡಿದರೆ ಇನ್ನೊಮ್ಮೆ ನಗೆಚಟಾಕಿಗಳನ್ನು ಹಾರಿಸುತ್ತಿತ್ತು.  

ಹೀಗಿರುವಾಗ ಇದ್ದಕ್ಕಿದ್ದಂತೆ ಮರಿಗುಬ್ಬಿ ತುಂಬಾ ವೀಕಾಗತೊಡಗಿತ್ತು. ಬೇಗನೆ ಏಳಲು-ಹಾರಲು  ಆಗುತ್ತಿಲ್ಲ ಎನ್ನುತ್ತಿತ್ತು. ಊಟವನ್ನೂ ಕಡಿಮೆ ಮಾಡಿತ್ತು. ಬರಬರುತ್ತಾ ಕೂರಲೂ ಆಗುತ್ತಿಲ್ಲ  ಅಮ್ಮಾ ಎನ್ನುತ್ತಿತ್ತು.  ಪರೀಕ್ಷೆಗಳು ಮುಗಿದ ಕಾರಣ ಮಕ್ಕಳಿಲ್ಲದ ಶಾಲೆ ಬಿಕೋ ಎನ್ನುತ್ತಿತ್ತು. ಆದರೆ ಶಿಕ್ಷಕ ವೃಂದ ಶಾಲಾಸಿಬ್ಬಂ ಉತ್ತರ ಪತ್ರಿಕೆ ತಿದ್ದುವುದು ಅಂಕಪಟ್ಟಿ ತಯಾರಿಸುವುದು ಮುಂದಿನ ಕ್ಲಾಸುಗಳ ಮಕ್ಕಳ ಹಾಜರಿ ಪುಸ್ತಕ ತಯಾರಿ ಮಾಡುವುದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ ಶಿಕ್ಷಕರನ್ನು ಆಯ್ಕೆ ಮಾಡಲು ಸಂದರ್ಶನದ ಸಿದ್ಧತೆ ನಡೆದಿತ್ತು. ಏತನ್ಮೆಧ್ಯೆ ಶಿಕ್ಷಕ-ಶಿಕ್ಷಕಿಯರು ಸಮಯ ಕಳೆಯಲು ಬೇರೆ ಬೇರೆ ವಿಷಯಗಳ ಚಚರ್ೆ ಮಾಡುವಾಗ ಮರಿಗುಬ್ಬಿ ಕುಳಿತು ಕೇಳುತ್ತಿತ್ತು. ಅಂದು ಶಿಕ್ಷಕವೃಂದ ಚಚರ್ಿಸುತ್ತಿದ್ದ ವಿಷಯದಿಂದಾಗಿ ಮರಿ ಗುಬ್ಬಿಮರಿ ತೀರಾ ಮಂಕಾಗಿತ್ತು. ಏಕೆಂದರೆ ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರವನ್ನು ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಬೆಳೆಗಳನ್ನು ಬೆಳೆಯುವ ತರಾತುರಿಯಲ್ಲಿ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದರು. ಆದರೆ ಆ ಆಹಾರಗಳನ್ನು ಬಳಸಿದ ಮಾನವರಲ್ಲಿ ಬರುವ ರೋಗಗಳ ಚಚರ್ೆ ನಡೆದಿತ್ತು ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು, ಅವರಿಗೆ ಆ ರೋಗ, ಇವರಿಗೆ ಈ ರೋಗ ಬಂದಿದೆ. ರೋಗಗಳ ಗುಣಲಕ್ಷಣಗಳೇನು ಎಂಬ ಬಗ್ಗೆ ಚಚರ್ೆ ನಡೆದಿತ್ತು. ಹೊಸ ಹೊಸ ರುಚಿಗಳ ಆಶೆಯಿಂದ ಎಲ್ಲ ವಿದ್ಯಾಥರ್ಿಗಳೂ ಕೊಟ್ಟ ಊಟವನ್ನು ಚಪ್ಪರಿಸಿ ಸವಿದಿದ್ದ ತನಗೂ ರಸಾಯನಿಕ ಗೊಬ್ಬರಗಳ ಪರಿಣಾಮದಿಂದಾಗಿ ತಾನೂ ರೋಗಿ ಎಂದು ತಿಳಿಯಲು ತಡವಾಗಲಿಲ್ಲ. 

ಅಂದಿನಿಂದ ಮರಿಗುಬ್ಬಿ ಆಟ-ಪಾಠಗಳನ್ನು ಮರೆತುಬಿಟ್ಟಿತು. ಮಾತೂ ಕಡಿಮೆ ಮಾಡಿತು. ಬೇರೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಶಾಲೆ ಕಡೆಗೆ ಮಾತ್ರ ತಪ್ಪದೇ ಹೋಗುತ್ತಿತ್ತು. ಪರೀಕ್ಷೆ ಫಲಿತಾಂಶ ತಿಳಿಸಿ ರಜೆ ಘೋಷಣೆಯಾಗಿತ್ತು. ಅಲ್ಲಿಯೂ ಬಿಕೋ ಎನ್ನುತ್ತಿತ್ತು. ಬರಬರುತ್ತ ಮೈಯ್ಯಲ್ಲಿ ಶಕ್ತಿ ಕುಂದುತ್ತಿತ್ತು. ಈಗಂತೂ ತಾನೂ ಯಾವುದೋ ರೋಗಕ್ಕೆ ತುತ್ತಾಗಿದ್ದೇನೆ ಆದರೆ ನನ್ನ ರೋಗ ಯಾವುದೆಂದು ಹೇಳುವವರಾರು? ತಿಳಿದರೂ ಅದಕ್ಕೆ ಚಿಕಿತ್ಸೆ ಹೇಗೆ ಪಡೆಯುವುದು ತಿಳಿಯದೇ ಪರದಾಡುತ್ತಿತ್ತು. ಒಮ್ಮೊಮ್ಮೆ ಅದಕ್ಕನ್ನಿಸುತ್ತಿತ್ತು ತಾನು ಮಾನವರ ಭಾಷೆ ತಿಳಿಯುವ ಯತ್ನವನ್ನು ಮಾಡಬಾರದಾಗಿತ್ತು. ಅದರಿಂದಾಗಿ ತನಗೆ ಇನ್ನೂ ನೋವಾಗಿದೆ. ಸಾಲದ್ದಕ್ಕೆ ತನ್ನ ಕುಲಬಾಂಧವರಿಗೆಲ್ಲಾ ಈ ವಿಷಯವನ್ನು ತಿಳಿಸಿಬಿಟ್ಟಿತ್ತು.  

ಕಳೆದ ನಾಲ್ಕಾರು ದಿನಗಳಿಂದ ಏನನ್ನೂ ತಿನ್ನದೇ ಬೇಕಾದಾಗ ಎರಡೆರಡು ಹನಿ ನೀರು ಕುಡಿದ ಗುಬ್ಬಿ ಮರಿ ಆ ದಿನ ತನ್ನ ತಾಯಿಯ ಮಡಿಲಲ್ಲಿ ಮುಖವಿಟ್ಟು ಅಮ್ಮಾ ಬೆಳಗಿನಿಂದ ನನ್ನ ಕಣ್ಣುಗಳು ಕಾಣುತ್ತಿಲ್ಲ ನಿನ್ನನ್ನು  ನೋಡಬೇಕೆನ್ನಿಸುತ್ತಿದೆಯಮ್ಮಾ ಎಂದು ರೋಸುತ್ತಿತ್ತು. ಕೆಲ ಗಂಟೆಗಳ ನಂತರ ಇದ್ದಕ್ಕಿದ್ದಂತೆ ಕಣ್ತೆರೆದು ಅಮ್ಮಾ ... ಎಂದು ಜೋರಾಗಿ ಕೂಗಿ ಕಣ್ಮುಚ್ಚಿದ ಗುಬ್ಬಿಮರಿ ಕಣ್ತೆರೆಯಲೇ ಇಲ್ಲ.  

ಅಂದಿನಿಂದ ಈ ತಾಯಿ ಗುಬ್ಬಿ ಊರು ಕೇರಿ ಬಿಟ್ಟು ಹೀಗೆ ಬೇಕಾಬಿಟ್ಟಿಯಾಗಿ ಹಾರುತ್ತಿದೆ. ಬೇಕಾದರೆ ಊಟ ಇಲ್ಲವಾದರೆ ಇಲ್ಲ. ದೂರ ದೂರ ಹಾರುವುದು ಸಾಕೆನಿಸಿದಾಗ ಕುಂತು ತನ್ನ ಜಾಣ ಗುಬ್ಬಿಮರಿಯನ್ನು ನೆನೆದು ಕಣ್ಣೀರಿಡುವುದು ಮಾಡುತ್ತಲೇ ಇದೆ. ಇದಕ್ಕೆ ಕೊನೆ...? 

ಸುದ್ದಿ ಓದಿ