ಬೆಳೆಯುವ ಸಿರಿ ಮೊಳಕೆಯಲ್ಲಿ
ಜಾನ್ಎಫ್. ಕೆನಡಿ ಅವರು ಹೇಳಿದ್ದಾರೆ. "Children are the world’s most valuable resource and its best hope for the future"ಎಂದು ಹೇಳಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿ, ಕ್ರಿಯಾಶೀಲತೆ ಹಾಗೂ ಗ್ರಹಿಕಾ ಸಾಮಥ್ರ್ಯಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುವುದು ಅವಶ್ಯಕ. ಮಕ್ಕಳಲ್ಲಿರುವ ವಿಷಯವನ್ನು ಅಥರ್ೈಸುವ, ಕಲಿಕಾ ಮಟ್ಟವನ್ನು ಆಧರಿಸಿ ಅಭ್ಯಾಸವನ್ನು ಮಾಡಿಸಬೇಕು. ಮಕ್ಕಳನ್ನು ಸ್ವಾವಲಂಬಿ ಮತ್ತು ಉತ್ತಮ ನಾಗರೀಕನ್ನಾಗಿ ಮಾಡುವ ಉದ್ದೇಶದಿಂದ ಶಿಕ್ಷಣವನ್ನು ನೀಡಲಾಗುತ್ತದೆಂಬುದೇನೋ ನಿಜ. ಆದರೆ ವಾಣಿಜ್ಯೀಕರಣಗೊಳ್ಳುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪಧರ್ಾತ್ಮಕ ಪೈಪೋಟಿಯತ್ತ ಮಕ್ಕಳನ್ನು ತಳ್ಳುತ್ತಾ ಹೆಚ್ಚಿನ ಅಂಕ ಗಳಿಸಲು ಮತ್ತುಚೆನ್ನಾಗಿ ಓದಬೇಕು ಎಂಬ ಒತ್ತಡ, ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿಎಲ್ಲರಿಗಿಂತ ಓದಿನಲ್ಲಿ ನನ್ನ ಮುಂದಿರಬೇಕೆನ್ನುವ ಆಶಾಭಾವನೆ ಹೊಂದಿರುವ ಪಾಲಕರು ಒತ್ತಡ ಹೇರುತ್ತಿರುವು ದರಿಂದಅದು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದ ಮಕ್ಕಳು ಆತ್ಮವಿಶ್ವಾಸದ ಕೊರತೆಯಿಂದ ಪರೀಕ್ಷೆಯಲ್ಲಿ ಫೇಲಾದಾಗ ಅಥವಾ ತಂದೆ-ತಾಯಿಯರ ನಿರೀಕ್ಷೀತ ಮಟ್ಟದ ಭರವಸೆಯನ್ನು ಈಡೇರಿಸಲಾಗದ ಸಂದರ್ಭಗಳಲ್ಲಿ ಅಥವಾ ಕಡಿಮೆ ಫಲಿತಾಂಶ ಬಂದಾಗ ಪಾಲಕರ ಸಹೃದಯತೆಯ ಕೊರತೆಯಿಂದ ಆತ್ಮಹತ್ಯೆಯಂತಹ ದುಸ್ಸಾಹಕ್ಕೆ ಕೈ ಹಾಕುತ್ತಿರುವದು ವಿಷಾಯದನೀಯ ಸಂಗತಿಯಾಗಿದೆ.
ಬೆಳಿಗ್ಗೆ ಮಕ್ಕಳು ಎದ್ದ ಕೂಡಲೇ ಗಡಿಬಿಡಿಯಲ್ಲಿ ತಯಾರಾಗಿ ಬೆನ್ನು ಬಾಗುವಷ್ಟು ಭಾರವಾದ ಬ್ಯಾಗ್ ಹೊತ್ತು ಶಾಲೆಗಳಿಗೆ ತೆರಳುತ್ತಾರೆ. ಶಾಲೆಯಲ್ಲಿಐದಾರು ಗಂಟೆಗಳ ಪಾಠ ಕೇಳಿಸಿಕೊಂಡು ತಿರುಗಿ ಮನೆಗೆ ಬರುವಷ್ಟರಲ್ಲಿ ಬೆಂದು ಬೆಂಡಾಗಿ ದೈಹಿಕವಾಗಿ ಸೋತು ಸುಣ್ಣವಾಗಿದ್ದ ಮಕ್ಕಳು ಪುನಃ ಸಂಜೆಗೆ ಟ್ಯೂಷನ್ವೆಂಬ ಮನೆ ಪಾಠಕ್ಕೆ ಹೋಗಿ ಅಲ್ಲಿಯೂ ಸ್ವಲ್ಪ ಪಾಠವನ್ನು ಕೇಳುತ್ತಾರೆ. ರಾತ್ರಿ ಮನೆಯಲ್ಲಿ ನಾಳಿನ ಹೋಂವಕರ್್ ಮುಗುಸುವಷ್ಟರಲ್ಲಿ ಇಡೀ ದಿನವೆ ಕಳೆದು ಹೋಗಿರುತ್ತದೆ. ಹೀಗೆ ಪ್ರತಿದಿನವೂ ಇದೇರೀತಿ ಉಸಿರುಗಟ್ಟಿಸುವ ದಿನಚರಿ ನಿಗದಿಯಾಗಿರುತ್ತದೆ. ಇದು ಇಂದಿನ ನಮ್ಮ ಮಕ್ಕಳು ಅನುಭವಿಸುವ ಜೀವನ ಮತ್ತುಯಾತನೆ.
ಮಕ್ಕಳು ಶಿಕ್ಷಣದ ಮೂಲಕ ವಿಷಯಜ್ಞಾನ ಮತ್ತು ಮೌಲ್ಯಗಳನ್ನು ಕಲಿತುತನ್ಮೂಲಕ ನಾಳಿನ ಭವ್ಯ ಭಾರತದ ನಿಮರ್ಾತೃಗಳಾಗಬೇಕು ಮತ್ತು ಪಡೆದ ಶಿಕ್ಷಣದ ಮೂಲಕ ಸ್ವಯಂ ಉದ್ಯೋಗವನ್ನು ಕೈಕೊಂಡು ಸ್ವಾವಲಂಬಿಗಳಾಗುವಂತೆ ರೂಪಿಸುವುದೇ ಶಿಕ್ಷಣದ ಮಹತ್ತರವಾದ ಗುರಿ ಮತ್ತು ಧ್ಯೇಯವಾಗಿದೆ. ಆದರೆ ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ಶಿಕ್ಷಣವು ಕೇವಲ ಅಂಕ ಗಳಿಕೆಯೊಂದೇ ಕಲಿಕೆಯ ಸಾಧನವಾಗುತ್ತಿದ್ದು, ಇದರಿಂದ ಹೆಚ್ಚಿನ ಅಂಕ ಗಳಿಸಲು ತಂದೆ-ತಾಯಿ, ಪೋಷಕರು ಮಕ್ಕಳ ಮೇಲೆ ವಿಪರೀತಒತ್ತಡವನ್ನು ಹೇರುತ್ತಿದ್ದಾರೆ. ಇಂದು ಶಾಲೆಗೆ ಹೋಗುವ ಪ್ರತಿ ಮಗು ಬಾಹ್ಯವಾಗಿ ತುಂಬಾ ಒತ್ತಡಅನುಭವಿಸುತ್ತಿದೆ. ನಮ್ಮ ಮಕ್ಕಳು ಚೆನ್ನಾಗಿ ಓದಬೇಕು, ನೆರೆಹೊರೆಯವರ ಮಕ್ಕಳಿಗಿಂತ ಹೆಚ್ಚಿನ ಅಂಕ ಗಳಿಸಬೇಕು, ಶಾಲೆಗೆ ನನ್ನ ಮಗ ಅಥವಾ ಮಗಳು ಫಸ್ಟ್ರ್ಯಾಂಕನಲ್ಲಿ ಪಾಸಾಗಬೇಕೆಂಬ ತಂದೆ-ತಾಯಿ, ಪೋಷಕರ ಆಶಾದಾಯಕ ಮನೋಭಾವನೆಯಿಂದ ಮಕ್ಕಳು ಇಂದುಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಬೇರೆ ಮಕ್ಕಳು ಏನು ಮಾಡುತ್ತಾರೆ ಹಾಗೆ ನನ್ನ ಮಗ ಮಾಡಬೇಕು ಮತ್ತು ಬೇರೆ ಮಕ್ಕಳೊಂದಿಗೆ ಹೋಲಿಸುತ್ತಾ ಮಕ್ಕಳ ಸ್ವಂತಿಕೆ, ಆಸಕ್ತಿ, ಅಭಿರುಚಿ ಮತ್ತು ಆಯ್ಕೆಗಳನ್ನು ಕಸಿದುಕೊಂಡು ಸೂತ್ರದ ಗೊಂಬೆಗಳಾಗುವಂತೆ ಮಾಡಲಾಗುತ್ತಿರುವುದು ತೀರ ಕಳವಳಕಾರಿ ಸಂಗತಿ.
* ಮಕ್ಕಳ ಅಭಿರುಚಿ-ಸಾಮಥ್ರ್ಯ ಗುರುತಿಸಿ: ಪ್ರತಿಯೊಂದು ಮಕ್ಕಳು ವಿಭಿನ್ನರೀತಿಯ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಸಾಮಥ್ರ್ಯವೆನ್ನುವದು ಒಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಒಂದು ಮಗು ಗಣಿತದಲ್ಲಿ ಚುರುಕಾಗಿದ್ದರೆ, ಮತ್ತೆ ಕೆಲವರು ಕ್ರೀಡೆ, ಕಲೆ ಮತ್ತು ಸಂಗೀತ ಅಥವಾ ನೃತ್ಯ ಹೀಗೆ ತಮ್ಮದೇ ಆದಕ್ಷೇತ್ರದಲ್ಲಿ ವಿಶಿಷ್ಟ ಪ್ರತಿಭೆಯನ್ನು ಹೊಂದಿರುತ್ತಾರೆಂಬ ವಿಷಯವನ್ನು ಪಾಲಕರು ಗುರುತಿಸಬೇಕು. ಆದ್ದರಿಂದ ತಂದೆ-ತಾಯಿ ಮತ್ತು ಶಿಕ್ಷಕರು ಮೊದಲು ಮಕ್ಕಳಲ್ಲಿರುವ ಆಸಕ್ತಿ, ಅಭಿರುಚಿ, ಕಲಿಕಾ ಸಾಮಥ್ರ್ಯಗಳನ್ನು ಗುರುತಿಸಿ ಮಕ್ಕಳ ಓದು-ಬರಹ, ಅರ್ಥಗ್ರಹಿಕೆ, ಚಿಂತನಾಶಕ್ತಿಯನ್ನು ಮೌಲ್ಯಮಾಪನ ಮಾಡಿದ ನಂತರ ಅವರವರ ಆಸಕ್ತಿ ಮತ್ತು ಆಯ್ಕೆಗನುಗುಣವಾಗಿ ವಿದ್ಯಾಭ್ಯಾಸ ಮಾಡಿಸುವದುಅತೀ ಮುಖ್ಯವಾಗಿರುತ್ತದೆ.
* ಒಳ್ಳೆಯ ಮತ್ತುಗುಣಾತ್ಮಕ ಅಂಶಗಳ ಬಗ್ಗೆ ಗಮನ ವಹಿಸಬೇಕು: ಪ್ರತಿಯೊಂದು ಒಂದಿಲ್ಲೊಂದು ಕ್ಷೇತ್ರದಲ್ಲಿತನ್ನ ಪ್ರಾವಿಣ್ಯತೆಯನ್ನು ಹೊಂದಿರುತ್ತದೆ. ಎಲ್ಲ ಮಕ್ಕಳು ಎಲ್ಲಾ ವಿಷಯಗಳಲ್ಲೂ ಸಂಪೂರ್ಣಜ್ಞಾನ ಹೊಂದಿರುತ್ತಾರೆ ಎಂಬುದು ತಪ್ಪು ಕಲ್ಪನೆ. ಮಕ್ಕಳು ಕಡಿಮೆ ಅಂಕ ಪಡೆದರು ಅಥವಾ ಅನುತ್ತೀರ್ಣರಾದರೆಂಬ ಕಾರಣಕ್ಕೆ ಪ್ರತಿ ಬಾರಿ ಬೈಯ್ಯುವುದು, ತೆಗಳುವುದು, ಹೀಯಾಳಿಸುವುದು ಮತ್ತು ಸಹಪಾಠಿಗಳು, ಸಂಬಂಧಿಕರ ಮಕ್ಕಳು ಮತ್ತು ನೆರೆಹೊರೆಯವರ ಮಕ್ಕಳೊಂದಿಗೆ ಹೋಲಿಸುವುದು ಸರಿಯಲ್ಲ. ಹೀಗೆ ಮಾನಸಿಕವಾಗಿ ಕುಗ್ಗಿರುವ ಮಕ್ಕಳಿಗೆ ಮನೋಬಲವನ್ನು ತುಂಬುವ ಕೆಲಸವನ್ನು ಮಾಡಬೇಕು. ಮಕ್ಕಳಲ್ಲಿರುವ ಜಾಣ್ಮೆ, ಪ್ರತಿಭೆ, ಬುದ್ದಿಮತ್ತೆ, ನೈಪುಣ್ಯತೆ, ಕ್ರಿಯಾಶೀಲತೆ. ಒಳ್ಳೆಯ ಗುಣ ಮತ್ತು ಇನ್ನಿತರ ಗುಣಾತ್ಮಕ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಉತ್ತಮ ಫಲಿತಾಂಶ ಅಥವಾ ಸಾಧನೆತೋರಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ವಿದ್ಯಾಭ್ಯಾಸಸಲ್ಲಿ ಇನ್ನಷ್ಟು ಆಸಕ್ತಿ ಹೆಚ್ಚಿಸಿಕೊಂಡು ಕಡಿಮೆ ಅಂಕ ಪಡೆದ ವಿಷಯದಲ್ಲಿ ಪರಿಣಿತಿ ಪಡೆಯಲು ಸಾಧ್ಯವಾಗುತ್ತದೆ.
* ಮಕ್ಕಳಿಗಾಗಿ ಕೊಂಚ ಬಿಡುವಿನ ಸಮಯ ನೀಡಿ: ಇಂದಿನ ಆಧುನಿಕತೆಯ ಮತ್ತು ಬದುಕಿನ ಜಂಜಾಟದಲ್ಲಿ ತಂದೆ-ತಾಯಿಯರು ಮನೆ ಹೇಗೆ ನಡೆಸಬೇಕು, ಆದಾಯ ಹೇಗೆ ಸಂಗ್ರಹಿಸಬೇಕು, ಹಣ ಹೇಗೆ ಮಾಡಬೇಕು ಎಂಬಂತಹ ವಿಚಾರಗಳಲ್ಲಿಯೇ ತಮ್ಮ ಬಹುಪಾಲು ಸಮಯವನ್ನು ಕಳೆದು ಬಿಡುತ್ತಾರೆ. ಮಕ್ಕಳು ಶಾಲೆ, ಟ್ಯೂಷನ್ ಮತ್ತು ಹೋಂ ವಕರ್್ಗಳಿಗಾಗಿ ಏಳರಿಂದ ಎಂಟುಗಂಟೆಯ ಕಾಲ ಕಳೆಯುವುದರಿಂದ ಪಾಲಕರುತಮ್ಮ ಸಮಯದಲ್ಲಿ ಒಂದಿಷ್ಟು ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಆಟವಾಡಿ, ನಲಿಯುತ್ತಾ ಉತ್ತಮ ಬಾಂಧವ್ಯವನ್ನು ಹೊಂದಿ ಅವರ ಇಷ್ಟ ಬಂದಂತೆ ಸ್ವಲ್ಪ ಹೊತ್ತು ಕಾಲ ಕಳೆಯಲು ಅವಕಾಶ ಮಾಡಿಕೊಡಬೇಕು. ಇದರಿಂದ ಶಾಲೆಯಿಂದ ಒತ್ತಡದಲ್ಲಿ ಮನೆಗೆ ಬರುವ ಮಗುವಿಗೆ ಕೊಂಚ ರಿಲ್ಯಾಕ್ಸ್ ಮಾಡಿದಂತಾಗುತ್ತದೆ. ಇದರಿಂದ ಮಕ್ಕಳ ಸ್ವಚ್ಛಂದವಾಗಿಇತರ ಗೆಳೆಯರೊಂದಿಗೆ ಕೂಡಿಆಡಿ-ನಲಿದುಇತರ ಗೆಳೆಯರೊಂದಿಗೆ ಕಲೆತು-ಬೆರೆತು ಮನಸ್ಸು ಅರಳಿ ಪ್ರಫುಲ್ಲಿತವಾಗಿ ಮಾನಸಿಕ, ದೈಹಿಕ ಬೆಳವಣಿಗೆಯ ಜೊತೆಗೆ ವ್ಯಕ್ತಿತ್ವ ವಿಕಸನವಾಗಲು ಸಹಕಾರಿಯಾಗುತ್ತದೆ.
ಮಕ್ಕಳ ಸಮಸ್ಯೆಯನ್ನು ಆಲಿಸಿ: ಪ್ರತಿಯೊಬ್ಬ ತಂದೆ-ತಾಯಿಯರು, ಪಾಲಕರು, ಪೋಷಕರು ಮತ್ತು ಶಿಕ್ಷಕರು ಮಕ್ಕಳು ಏನು ಹೇಳುತ್ತಾರೆ? ಶಾಲೆಯಲ್ಲಿ, ಹೊರಗಡೆಎನಾಯಿತು? ಮಕ್ಕಳ ಆಯಾ ದಿನದ ದಿನಚರಿ ಹೇಗಿತ್ತು? ಮತ್ತು ದೈನಂದಿನವಾಗಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮುಕ್ತವಾಗಿ ತಾಳ್ಮೆಯಿಂದ ಆಲಿಸುವುದರಿಂದ ಮಗು ಎದುರಿಸುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ಮಾನಸಿಕವಾಗಿ ಎದುರಿಸುವ ಒತ್ತಡವನ್ನುಕಡಿಮೆ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದರೆ ಅವರ ಸಮಸ್ಯೆಗಳೇನು? ಅವುಗಳಿಗೆ ಪರಿಹಾರಗಳನ್ನು ಕಂಡುಕೊಂಡು ಅದರಿಂದ ತಾವೇ ಸ್ವತಃ ಹೊರಬರುವಂತೆ ಆತ್ಮಸ್ಥೈರ್ಯವನ್ನು ಬೆಳೆಸಬೇಕು. ಅಂದಾಗ ಮಾತ್ರ ಮಕ್ಕಳು ಮುಂದೆಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ, ಸನ್ನಿವೇಶ, ಸಂದಿಗ್ಧತೆ ಮತ್ತು ಸವಾಲು ಎದುರಾದರೂ ದೃತಿಗೆಡದೇ ಅವುಗಳನ್ನು ಎದುರಿಸುವ ಆತ್ಮಬಲವನ್ನು ಬೆಳೆಸಿಕೊಳ್ಳುತ್ತಾರೆ. ಕೇವಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು, ಫೇಲಾದೇ ಅಥವಾ ಸ್ಪಧರ್ೆಯಲ್ಲಿ ಸೋತೇ ಎಂಬ ಕಾರಣಕ್ಕೆ ಆತ್ಮಹತ್ಯೆಯಂತಹ ದುಸ್ಸಾಹಕ್ಕೆ ಕೈ ಹಾಕದಂತೆ ಮತ್ತು ಆತ್ಮಹತ್ಯೆಯೊಂದೇ ಪರಿಹಾರವಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.
ಕೊನೆಯ ನುಡಿ: ಏನೂ ಅರಿಯದ ಮುಗ್ಧ ಕಂದಮ್ಮಗಳ ಮೇಲೆ ಅಂಕ ಪಡೆಯಬೇಕೆನ್ನುವ ಮಾಯೆಯ ಬೆನ್ನು ಹತ್ತಿ ಮುಂದೆ ಬಾಳಿ ಬದುಕಬೇಕಾದ ಮಕ್ಕಳ ಭಾವೀ ಭವಿಷ್ಯತ್ನ್ನು ವೃಥಾ ಹಾಳು ಮಾಡುವದು ಸರಿಯಲ್ಲ. ಆದ್ದರಿಂದ ಮಕ್ಕಳಿಗೆ ಯಾವಾಗಲೂ ಓದು ಓದು ಎಂಬ ಮಾನಸಿಕ ಒತ್ತಡವನ್ನು ಹಾಕದೇ ಮಕ್ಕಳಲ್ಲಿರುವ ಕಲಿಕಾಸಕ್ತಿ, ಅಭಿರುಚಿ, ಹಂಬಲ, ಮನೋಭಿಲಾಷೆ, ಆಕಾಂಕ್ಷೆ, ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಗುರುತಿಸಿ ತನ್ಮೂಲಕ ಅವರಲ್ಲಿರುವ ಜ್ಞಾನ, ಪ್ರತಿಭೆ, ಜಾಣ್ಮೆ, ಕುಶಲಗಾರಿಕೆ, ವೈಚಾರಿಕತೆಯಂತಹ ಸುಪ್ತ ಅಂತಃಶಕ್ತಿಯು ಹೊರಹೊಮ್ಮಲು ಮತ್ತುಅದು ಅರಳಿ ಮುಂದೆ ಹೆಮ್ಮರವಾಗಿ ದೇಶದಯುವ ಸಂಪತ್ತಾಗಿ ರೂಪುಗೊಳ್ಳಬೇಕು. ಜೇಮ್ಸ್ ಬಾಲ್ಡವಿನ್ರವರ ಪ್ರಕಾರ, "Children have never been very good at listening to their elders, but they have never failed to imitate them" ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಆದ್ದರಿಂದ ಪಾಲಕರು ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ ಎನ್ನುವಂತೆ, ಮಕ್ಕಳು ಸ್ವಚ್ಛಂದವಾದ ಮತ್ತು ಮುಕ್ತವಾದ ಪರಿಸರವನ್ನು ನಿಮರ್ಿಸಿ ಅವರು ಉತ್ತಮ ಶಿಕ್ಷಣವನ್ನು ಪಡೆದುಆದರ್ಶ, ತತ್ವ ಮತ್ತು ಮೌಲ್ಯಗಳನ್ನು ಒಡಮೂಡಿಸಿಕೊಂಡು ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವುದರ ಮೂಲಕ ನಾಳಿನ ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವದು ಪ್ರತಿಯೊಬ್ಬ ತಂದೆ-ತಾಯಿ, ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಬೇಕು ಅಂದಾಗ ಮಾತ್ರ ಶಿಕ್ಷಣದ ಉದ್ದೇಶವು ಈಡೇರಿದಂತೆಯೇ ಸರಿ.
- ಮಲ್ಲಪ್ಪ ಖೊದ್ನಾಪೂರ