ತಂದೆ ತಾಯಿಗಳಿಂದ ಮಕ್ಕಳ ನಿರೀಕ್ಷೆಗಳು

-ಮಂಜುನಾಥ ಮರಿತಮ್ಮನವರ, ಸವಣೂರ, ಮೊ.9663338287

ಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಅಂತಹ ಮೃದುಹೃದಯಿಗಳಲ್ಲಿ ಉತ್ತಮ ಮೌಲ್ಯಗಳನ್ನು, ಸಮಾಜ ಬಯಸುವ ಉತ್ತಮ ಹೃದಯವಂತಿಕೆಯನ್ನು ತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದುದು ತಂದೆ ತಾಯಂದಿರ ಜವಾಬ್ದಾರಿ. ಮಕ್ಕಳ ಒಲುವುನಿಲುವುಗಳು, ಆಸೆ ಆಕಾಂಕ್ಷೆಗಳನ್ನು ತಂದೆ ತಾಯಂದಿರು ಅರ್ಥಮಾಡಿಕೊಳ್ಳಬೇಕು. ಮಕ್ಕಳು ನಮ್ಮ ದಾರಿಗೆ ಬರಲಿ ಎಂಬುದಕ್ಕಿಂತ ನಾವೇ ಅವರ ಮನೋಸ್ಥಿತಿಯನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು.

        ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ 1000 ಮಕ್ಕಳನ್ನು ಸಮೀಕ್ಷಿಸಿದಾಗ ಮಕ್ಕಳು ಪಾಲಕರಿಂದ  ಏನನ್ನು ನಿರೀಕ್ಷಿಸುತ್ತಾರೆೆಂಬ ಅಂಶಗಳು ಬಹಳಷ್ಟು ಕುತೂಹಲಭರಿತವಾಗಿದ್ದವು ಮತ್ತು ಅಷ್ಟೇ ವಾಸ್ತವಿಹವಾಗಿದ್ದವು.

ಪಾಲಕರು ಮಕ್ಕಳಿಗೆ ಮಾದರಿಯಾಗಬೇಕು. ಹೇಳಿದ್ದನ್ನೇ ಮಾಡಬೇಕು. ಮಾಡುವುದನ್ನೇ ಹೇಳಬೇಕು. ನೀವು ಓದಿ ಎಂದು ಮಕ್ಕಳಿಗೆ ಹೇಳಿ ತಾವು ಟಿ.ವ್ಹಿ. ನೋಡುತ್ತಾ ಕುಳಿತುಕೊಳ್ಳಬಾರದು. 

ಬೇರೆ ಬೇರೆ ಮಕ್ಕಳೊಡನೆ ಮಕ್ಕಳನ್ನು ಹೋಲಿಸಬಾರದು. ರಮೇಶನು 90 ಅಂಕಗಳಿಸಿದ್ದಾನೆ, ಕಾವ್ಯಳು ಭಾಷಣ ಸ್ಪಧರ್ೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಗಳಿಸಿದಳು ಎಂಬ ಹೋಲಿಕೆ ಬೇಡ. ಎಲ್ಲ ವಿದ್ಯಾಥರ್ಿಗಳು ಅದ್ವಿತೀಯ. ಪ್ರತಿ ಮಗುವಿನಲ್ಲಿಯೂ ಅವರದೇ ಆದ ಪ್ರತಿಭೆ ಇದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿರಿ. 

ಮಕ್ಕಳಿಗೆ ತಮ್ಮದೇ ಆದ ಸಣ್ಣ ಪುಟ್ಟ ಖಚರ್ುಗಳಿರುತ್ತವೆ. ಪೆನ್ಸಿಲ್, ಪೆನ್ನು ಚಿತ್ರಪಟ ತಿನಿಸು ತೆಗೆದುಕೊಳ್ಳುವುದು. ಇವುಗಳಿಗಾಗಿ ಪಾಕೇಟ್ ಮನಿ ನೀಡಬೇಕು. ನಿಮಗೇಕೆ ಹಣ ಎಂದು ಉದಾಸೀನ ಮಾಡಬಾರದು. 

ದಿನದ ಮೂರು ಹೊತ್ತು ಬರೀ ಓದು,ಓದು, ಓದು ಎಂದು ತಲೆ ತಿನ್ನಬಾರದು. ಆಟ, ಹರಟೆ, ಟಿ.ವ್ಹಿ. ವೀಕ್ಷಣೆಗೂ ಅವಕಾಶಮಾಡಿಕೊಡಬೇಕು. ಅವರು ನಿಮ್ಮ ಬಲವಂತಕ್ಕೆ ಓದುವರೇ ಹೊರತು ಸ್ವತಃ ಆಸಕ್ತಿಯಿಂದ ಅಲ್ಲ. 

ತಂದೆ-ತಾಯಿ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ಮಕ್ಕಳ ಮುಂದೆ ಗಂಡ-ಹೆಂಡತಿಯರು   ಜಗಳವಾಡಬಾರದು. ಹೆತ್ತವರ ನಡುವಣ ಕಲಹಗಳು ಕೋಟರ್ಿನ ಕಟ್ಟೆ ಏರಬಾರದು. ಹಾಗೆಯೇ ಗಂಡ-ಹೆಂಡತಿಯರು ಮಕ್ಕಳ ಮುಂದೆ ರೊಮ್ಯಾನ್ಸ್ ಮಾಡಕೂಡದು.

ನೀವೆಷ್ಟು ಕೆಲಸದ ಒತ್ತಡದಲ್ಲಿ ಇದ್ದರೂ ಮಕ್ಕಳಿಗಾಗಿ ಸಮಯ ಮೀಸಲಿಡಿ. ತಿಂಗಳಿಗೊಮ್ಮೆ ಶಾಪಿಂಗ್, ಹೊರಸಂಚಾರ, ಉದ್ಯಾನವನಗಳಿಗೆ ಕರೆದುಕೊಂಡು ಹೋಗಿ ಬನ್ನಿ.ಅವರಿಷ್ಟಪಡುವ ವಸ್ತುಗಳನ್ನು ಕೊಡಿಸಿರಿ. 

ಕಡಿಮೆ ಅಂಕಗಳಿಸಿದರೆ ನಿಂದಿಸಬೇಡಿ. ಹೊಡೆಯಬೇಡಿ. ಕಡಿಮೆ ಅಂಕ ಗಳಿಕೆಗೆ ಕಾರಣ ಕಂಡು ಹಿಡಿದು ಮುಂದೆ ಉತ್ತಮ ಅಂಕಗಳಿಸಲು ಪ್ರೋತ್ಸಾಹಿಸಿರಿ. ಮಕ್ಕಳಿಗೆ ಸೈನ್ಸ್, ಕಾಮಸರ್್ ಓದು ಎಂದು ಬಲವಂತ ಮಾಡಬಾರದು. ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಮುಂದುವರೆಯಲು  ಪ್ರೋತ್ಸಾಯಿಸಿರಿ. 

ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅವರ ಅನುಮಾನಗಳನ್ನು ಪರಿಹಾರ ಮಾಡಬೇಕು. ಪ್ರಶ್ನೆಗಳನ್ನು ಉದಾಸೀನ ಮಾಡಬಾರದು. ಮಕ್ಕಳ ಸಮಸ್ಯೆಗಳಿಗೆ ಬೇಗ ಸ್ಪಂಧಿಸಿ. ಭೌತಿಕ, ಭೌದ್ದಿಕ, ಭಾವನಾತ್ಮಾಕ, ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯಮಾಡಿರಿ. 

ಅಜ್ಜ-ಅಜ್ಜಿಯರ ಜೊತೆ ಇರಲು ಅವಕಾಶ ಮಾಡಿಕೊಡಿ. ಅವರು ಹೇಳುವ ಕತೆಗಳು, ಅನುಭವಗಳು ಮಕ್ಕಳಿಗೆ ತುಂಬಾ ಇಷ್ಟ. ಸ್ನೇಹಿತರೆಲ್ಲರೂ ಪ್ರವಾಸಕ್ಕೆ ಹೊರಟು ತಯಾರಾದಾಗ ಶೈಕ್ಷಣಿಕ ಪ್ರವಾಸಕ್ಕೆ ನಿಮ್ಮ ಮಕ್ಕಳನ್ನು ಕಳುಹಿಸಿಕೊಡಿ. 

ಮಕ್ಕಳು ತಪ್ಪು ಮಾಡಿದರೆ ಬಂಧು ಭಾಂಧವರ ಎದುರು ಪ್ರಚಾರ ಮಾಡಬೇಡಿ, ಪ್ರೀತಿ ವಿಶ್ವಾಸದಿಂದ ತಪ್ಪನ್ನು ತಿದ್ದಿ ಸರಿದಾರಿಗೆ ತರಲು ಪ್ರಯತ್ನಿಸಿ. ವಿದ್ಯಾಥರ್ಿಗಳು ತಮ್ಮ ಸ್ನೇಹಿತರ ಮಧ್ಯೆ ದೊಡ್ಡ ಇಮೇಜ ಅನ್ನು ಹೊಂದಿರುತ್ತಾರೆ. ಗೆಳೆಯರೆದುರು ಅವರನ್ನು ಅವಮಾನ ಮಾಡಬೇಡಿ. 

ತಂದೆ ತಾಯಿ ಉತ್ತಮ ಗೆಳೆಯರಾಗಬೇಕು. ಮಕ್ಕಳ ಒಲವು ನಿಲುವು, ಅಭಿರುಚಿ ಆಸಕ್ತಿಗಳನ್ನು ತಿಳಿದುಕೊಳ್ಳಬೇಕು. ಗಂಡು ಮಕ್ಕಳನ್ನು ಮಾತ್ರ ಪ್ರೋತ್ಸಾಹಿಸದೇ ಹೆಣ್ಣು ಮಕ್ಕಳು ತಾವು ಇಷ್ಟ ಪಟ್ಟ ಕ್ಷೇತ್ರವನ್ನು ತಾವು ಇಷ್ಟಪಡುವವರೆಗೆ ಓದಲು ಅವಕಾಶ ಮಾಡಿ. ಎಸ್.ಎಸ್.ಎಲ್.ಸಿ. ಮುಗಿದ ಕೂಡಲೇ ಮದುವೆ ಮಾಡಿ ಬಿಡಬೇಡಿ. 

ರಜಾದಿನಗಳಲ್ಲಿ ಓದು, ಬರೆ ಎಂದು ಒತ್ತಾಯಮಾಡಬಾರದು. ವಿದ್ಯಾಥರ್ಿಗಳು ರಜೆಯನ್ನು ಮಜಾ ಮಾಡಲಿ, ಜೊತೆಗೆ ಹೋಮ್ವಕರ್್ ಕೂಡಾ ಮಾಡಿ ಎಂದು ಪ್ರೀತಿ ಪೂರ್ವಕವಾಗಿ ಹೇಳಿ. ಮಕ್ಕಳೊಡನೆ ತಂದೆ-ತಾಯಿ ಆಟವಾಡಬೇಕು. ಹಾಡಿ ನಲಿಯಬೇಕು. ಹರಟೆ ಹೊಡೆಯಬೇಕು. ಒಟ್ಟಿನಲ್ಲಿ ತಂದೆ ತಾಯಿಗಳು ಸ್ನೇಹಿತರಾಗಿ, ಶಿಕ್ಷಕರಾಗಿ, ಮಾರ್ಗದರ್ಶಕರಾಗಿರಬೇಕು.