ಇಂಡಿ

ನಾಡು ಕಂಡ ಶ್ರೇಷ್ಠ ದಾರ್ಶನಿಕ ಯುಗ ಪುರುಷ ಸಿದ್ದೇಶ್ವರ ಶ್ರೀ: ಬಿರಾದಾರ

ನಾಡು ಕಂಡ ಶ್ರೇಷ್ಠ ದಾರ್ಶನಿಕ ಯುಗ ಪುರುಷ ಸಿದ್ದೇಶ್ವರ ಶ್ರೀ: ಬಿರಾದಾರ

ಇಂಡಿ: ಸಿದ್ದೇಶ್ವರ ಶ್ರೀಗಳು ಪ್ರಕೃತಿಯಲ್ಲಿನ ಚರಾಚರ ವಸ್ತುಗಳಾದ ಗಿಡ, ನದಿ, ಸರೋವರ, ಹಳ್ಳ-ಕೊಳ್ಳ ಸಕಲ ಜೀವರಾಶಿಗಳಲ್ಲಿ ದೇವರಿದ್ದಾನೆ ಎಂದು ಜನರಿಗೆ ಕಣ್ಣು ತೆರೆಸಿದ ಈ ನಾಡು ಕಂಡ ಶ್ರೇಷ್ಠ ದಾರ್ಶನಿಕ ಯುಗ ಪುರುಷರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ರೈತ ಮೋಚರ್ಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಭಾನುವಾರ ಪಟ್ಟಣದ ಶಾಂತೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹಮ್ಮಿಕೊಂಡ ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ವಿಜಯಪೂರ, ತಾಲೂಕಾ ಶಾಖೆ ಇಂಡಿ, ವಿಶ್ವಚೇತನ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆ ವಿಜಯಪೂರ ವತಿಯಿಂದ ಹಮ್ಮಿಕೊಂಡಿದ್ದ ಶಮಾನದ ಸಂತ ಪೂಜ್ಯ ಶ್ರೀಸಿದ್ದೇಶ್ವರ ಶ್ರೀಗಳ ಕುರಿತು  ಕಾವ್ಯಗಳ ನುಡಿನಮನ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿದ್ದೇಶ್ವರ ಶ್ರೀಗಳು ಜ್ಞಾನದಾಸೋಹ ನೀಡಿ ಈ ಭಾಗದ ಜನರಿಗೆ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿದ್ದಾರೆ. ಕವಿ ಕಂಡಿದ್ದು ರವಿ ಕಾಣುವುದಿಲ್ಲ ಎನ್ನುವುದಕ್ಕೆ ಯುವ ಕವಿಗಳು ಶ್ರೀಸಿದ್ದೇಶ್ವರ ಶ್ರೀಗಳ ಕುರಿತು ಬರೆದ ಕವನಗಳು ನಿಮ್ಮ ಜೀವನ ಸಾರ್ಥಕಗೊಳಿಸುವದರೊಂದಿಗೆ  ಇಡೀ ಸಮಾಜಕ್ಕೆ ಶ್ರೀಗಳ ಒಳ್ಳೇಯ ಸಂದೇಶ ಮುಟ್ಟಿಸುವ ಕಾಯಕದಲ್ಲಿ ಸಮರ್ಪಿ ಸಿಕೊಂಡಿರುವ ನೀವು ನಿಮಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದ ಅವರು ಇಂತಹ ಆದರ್ಶ ಸಂತರ ಕಾವ್ಯಗಳ  ಸಂದೇಶ ಸಾರ್ವಜನಿಕರು ನಿಜ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ  ಸಮಾಜ ,ದೇಶ ಪರಿಶುದ್ದವಾಗುತ್ತದೆ. ಪೂಜ್ಯರು ಲಿಂಗೈಕ್ಯರಾದರೂ ಅವರ ದೇಹ ಹೋಗಿರಬಹುದು ಆದರೆ ಅವರು ಪ್ರಕೃತಿಯಲ್ಲಿ ಹಾಗೂ ಪ್ರತಿ ಭಕ್ತರ ಮನದಲ್ಲಿ ಇದ್ದಾರೆ ಎಂದರು.

ಹಿರಿಯ  ಸಾಹಿತಿ, ಸಂಶೋದಕ  ಡಿ.ಎನ್. ಅಕ್ಕಿ ಕವನ ಬರೆಯುವರಿಗೆ ಆಳ ಜ್ಞಾನ, ಆಸಕ್ತಿ, ಸೂಕ್ಷ್ಮಗ್ರಹಿಕೆ ಕೂಡಾ ಇರಬೇಕು.  ಅನೇಕ ಹಿರಿಯ ಸಾಹಿತಿಗಳು  ಜ್ಞಾನಪೀಠ ಪುರಸ್ಕೃತರು ನಿಸರ್ಗವನ್ನೆ ಪ್ರೀತಿಸುತ್ತಿದ್ದರು. ಶಿವರಾಂ ಕಾರಂತರು, ದ.ರಾ.ಬೇಂದ್ರೆ. ಕುವೆಂಪು,  ಅಡಿಗರು ಬರೆದ ಕಾವ್ಯಗಳು ಬಲುಸುಂದರವಾಗಿವೆ. ಸಕಾರಾತ್ಮ ಭಾವನೆ ಕವಿಯಲ್ಲಿ ಇದ್ದಾಗ ಮಾತ್ರ ಸಾಧ್ಯ. ಗವರ್ಿ, ದುರಂಕಾರಿ, ಅಂಹಕಾರಿ ಕವಿಯಲ್ಲಿರಬಾರದು ಕುವೆಂಪುರವರು ಅವರೆ ಬರೆದ ಕವನ ಅವರೇ ಸದಾ ಓದುತ್ತಿದ್ದರು. ಇಂತಹ ಗುಣ ಇರಬೇಕು ಎಂದು ಹೇಳಿದರು.

ಡಾ. ಕಾಂತು ಇಂಡಿ ಪ್ರಾಸ್ತಾವಿಕ ಮಾತನಾಡಿದರು.

ವಿಶ್ರಾಂತ ಮುಖ್ಯ ಗುರು ಎಂ.ಪಿ. ಬಿರಾದಾರ, ಪ್ರಕಾಶ ಬಿರಾದಾರ ಸಿದ್ದೇಶ್ವರ ಶ್ರೀಗಳ ಕುರಿತು ಮಾತನಾಡಿದರು.

ಶಾಂತುಗೌಡ ಬಿರಾದಾರ,  ಕದಳಿ ವೇದಿಕೆಯ ರಾಜೇಶ್ವರಿ ಕ್ಷತ್ರಿ, ಯಮುನಾಜಿ ಸಾಳುಂಕೆ, ಶ್ರೀಶೈಲಗೌಡ ಬಿರಾದಾರ,  ರಾಜು ಕುಲಕಣರ್ಿ ವೇದಿಕೆಯಲ್ಲಿದ್ದರು.

ಗಂಗಾಧರ ನಾಗಣಿ, ಶರಣಬಸು ಕಾಂಬಳೆ, ಸರೋಜನಿ ಮಾವಿನಮರ,  ಸೇರಿದಂತೆ ಅನೇಕರು ಶ್ರೀಸಿದ್ದೇಶ್ವರ ಶ್ರೀಗಳ ಕುರಿತು ಕಾವ್ಯನುಡಿನಮನ ಸಲ್ಲಿಸಿದರು.

ಎಂ.ಪಿ ಚಿಮ್ಮಾಗೋಳ ನಿರೂಪಿಸಿ,  ಶರಣಬಸಪ್ಪಾ.ಎನ್ ಕೆ ಸ್ವಾಗತಿಸಿ, ರಾಜು ಹೂಗಾರ, ಗಂಗಾಧರ ನಾಗಣಿ ವಂದಿಸಿದರು. 



ಸುದ್ದಿ ಓದಿ