ಶಿಗ್ಗಾವ್

ಗಣೇಶ ಸಾಮಾನ್ಯ ದೇವರಲ್ಲ, ಗಣೇಶನ ಮಹಿಮೆ ತಿಳಿದವರೇ ಬಲ್ಲರು

ಗಣೇಶ ಸಾಮಾನ್ಯ ದೇವರಲ್ಲ, ಗಣೇಶನ ಮಹಿಮೆ ತಿಳಿದವರೇ ಬಲ್ಲರು

ಲೋಕದರ್ಶನ ವರದಿ

ಶಿಗ್ಗಾವಿ 21: ಕೆಲ ಕಾಲ್ಪನಿಕ ಸ್ವಾಮೀಜಿಗಳು ಗಣೇಶ ದೇವರೇ ಅಲ್ಲ ಎಂದು ವಾದಿಸುತ್ತಿದ್ದಾರೆ, ಆದಿ ಅನಾದಿ ಕಾಲದಿಂದಲೂ ಗಣೇಶನ ವಿಶಿಷ್ಠತೆ ಅರಿಯದೇ ಮಾತನಾಡುತ್ತಾರೆ, ಗಣೇಶ ಸಾಮಾನ್ಯ ದೇವರಲ್ಲ, ಗಣೇಶನ ಮಹಿಮೆ ತಿಳಿದವರೇ ಬಲ್ಲರು ಎಂದು ಧರ್ಮಕ್ಷೇತ್ರ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗಣೇಶ ದೇವಸ್ಥಾನ ಹಾಗೂ ಶ್ರೀ ಕಲ್ಮೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಧರ್ಮಸಭೆಯಲ್ಲಿ ಮಾತನಾಡಿದ ಶ್ರೀಗಳು, ಕಷ್ಟಗಳನ್ನ ದೂರ ಮಾಡುವ ಗಣೇಶ ಎಲ್ಲರಿಗೂ ಒಳಿತನ್ನ ಮಾಡಲಿದ್ದಾನೆ, ಇದು ಗ್ರಾಮದ ಅಭಿವೃದ್ದಿಗೆ ಪೂರಕ, ಒಳ್ಳೆಯ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಬೇಕು ಅಂತಹ ಕಾರ್ಯವನ್ನ ಮಾಡಲಾಗಿದೆ ಎಂದರು.

ಗಂಜೀಗಟ್ಟಿ ಚರಮೂರ್ತಿಶ್ವರಮಠದ ಡಾ,ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ದೇವಸ್ಥಾನಗಳನ್ನ ಸುಂದರವಾಗಿ ಕಟ್ಟುತ್ತೇವೆ ಆದರೆ ನಮ್ಮ ಮನಸ್ಸನ್ನ ಕಲುಷಿತವಾಗಿ ಇಟ್ಟುಕೊಂಡಿದ್ದೇವೆ, ಮನುಷ್ಯನ ಧಾರ್ಮಿಕತೆಗೆ ದೇವರೇ ಪೂರಕ, ಧಾರ್ಮಿಕತೆ ಎಂಬುದು ಮನುಷ್ಯನ ಅಂದಕಾರ ದೂರ ಮಾಡಬೇಕು ಎಂದರು. 

ಶ್ರೀಕ್ಷೇತ್ರ ಸಿಗಂದೂರನ ಪ್ರಧಾನ ಅರ್ಚಕರಾದ ಎಸ್ ಪಿ ಶೇಷಗಿರಿ ಭಟ್ ಅವರು ಮಾತನಾಡಿ, ಗುರು ಮತ್ತು ಗಣೇಶನ ವಿಷಯದಲ್ಲಿ ಅರಿವಿಟ್ಟು ಮಾತನಾಡುವ ಭಕ್ತರು ಕಡಿಮೆಯಾಗಿದ್ದಾರೆ ಒಳ್ಳೆಯ ಮನಸ್ಸಿನಿಂದ ಬದುಕಬೇಕು ಅಂದಾಗ ದೇವರ ಕೃಪೆ ಎಂಬುದು ಶ್ರಮಿಕರ ಸ್ವತ್ತಾಗುತ್ತದೆ, ಶ್ರಮಿಕ ಎಂದಿಗೂ ದೇವರಿಗೆ ಹತ್ತಿರವಾಗುತ್ತಾನೆ ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ನಿತ್ಯದ ಬದುಕಿನ ಸವಾಲುಗಳು ಹಾಗೂ ಒತ್ತಡಗಳ ಮಧ್ಯೆ ಜೀವನ ಸಾಗಿಸುವದೇ ಕಷ್ಟಕರವಾದ ಪ್ರಸ್ತುತ ದಿನಗಳಲ್ಲಿ ಚಿಕ್ಕಮಲ್ಲೂರ ಗ್ರಾಮದಲ್ಲಿ ಮಹಾಂತಶೆಟ್ಟರ್ ಸಹೋದರರು ಒಗ್ಗೂಡಿ ಗಣೇಶ ದೇವಸ್ಥಾನ ನಿರ್ಮಿಸಿದ ಸತ್ಕಾರ್ಯದ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಮಾತನಾಡಿ, ಧಾರ್ಮಿಕತೆ ಅನ್ನೋದು ಗ್ರಾಮದ ಶ್ರೇಯೋಭಿವೃದ್ದಿಗೆ ಸಾಕ್ಷಿ, ಬದುಕು, ಮುಕ್ತಿ ಎಂಬುದು ದೇವರ ಧಾನ ಧರ್ಮದ ಹಾದಿಗೆ ಪೂರಕವಾಗಿದೆ ಗ್ರಾಮದ ಎಲ್ಲ ಸಂಕಷ್ಟಗಳ ದೂರ ಮಾಡಲಿ ಎಂಬುದು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾದಿಪತಿಗಳಾದ ಕಲ್ಲಯ್ಯಜ್ಜನವರು, ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು ಸಾನಿದ್ಯವಹಿಸಿ ಆಶೀರ್ವಚನ ನೀಡಿದರು, ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ, ಭಾರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಜಿ.ಪಂ ಮಾಜಿ ಸದಸ್ಯ ಸಿ ಎಸ್ ಪಾಟೀಲ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮಾಜಿ ಸೈನಿಕರಾದ ಸಹದೇವಪ್ಪ ಮಡಿವಾಳರ, ಬಸವರಾಜ ನಂದಿ, ಗುಡ್ಡಪ್ಪ ಕಬನೂರ, ಹಜರೇಸಾಬ್ ನದಾಫ್, ಮಂಜುನಾಥ ಮಡಿವಾಳರ ಅವರುಗಳನ್ನು ಮಹಾಂತಶೆಟ್ಟರ ಕುಟುಂಬದವರು ಸನ್ಮಾನಿಸಿದರು.

ಇದಕ್ಕೂ ಪೂರ್ವದಲ್ಲಿ ಗಣೇಶ ಮೂರ್ತಿ ಪ್ರಾಣಪ್ರತಿಷ್ಟಾಪನೆ ಹಾಗೂ ಕಳಸಾರೋಹಣವನ್ನ ಧರ್ಮಕ್ಷೇತ್ರ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ರುದ್ರಗೌಡ ಮಹಾಂತಶೆಟ್ಟರ್, ಶ್ರೀಕಂಠಗೌಡ ಹಿರೇಗೌಡ್ರ, ಮಹದೇವಪ್ಪ ಗಂಜೀಗಟ್ಟಿ, ಫಕೀರಗೌಡ ಪಾಟೀಲ, ಶಂಕರ ಮಹಾಂತಶೆಟ್ಟರ್, ಸಂತೋಷ ದೊಡ್ಡಮನಿ, ಬಿ ವಿ ನಂದಿ, ಶಂಕರಗೌಡ ಪಾಟೀಲ, ಎನ್ ಜೆ ಗುರುಸಿದ್ದಯ್ಯ, ಕೃಷ್ಣಾ ರೆಡ್ಡಿ, ರಘುರಾಮ ರೆಡ್ಡಿ, ಶಂಕ್ರಯ್ಯ ಚಿಕ್ಕಮಠ, ರವಿ ಮಹಾಂತಶೆಟ್ಟರ್, ಶಿವಪುತ್ರಪ್ಪ ಜಕ್ಕಣ್ಣವರ, ಆನಂದ ಕೆಳಗಿನಮನಿ, ಹನುಮಂತ ಮಾದರ, ಮಹಾಂತೇಶ ಯಲಿಗಾರ, ಪರಮೇಶಪ್ಪ ಗಂಜೀಗಟ್ಟಿ, ಸುರೇಶ ಹರಿಜನ, ರವಿ ಕೋಣಪ್ಪನವರ, ಹಾಗೂ ಗ್ರಾಮದ ಮುಖಂಡರು ಗ್ರಾಪಂ ಸದಸ್ಯರು, ಉಪಸ್ಥಿತರಿದ್ದರು

ಸುದ್ದಿ ಓದಿ